Home ಸಿನಿಮಾ ಮತ್ತೆ ‘ಕಿರಿಕ್’ ಮಾಡ್ತಾರಂತೆ ರಕ್ಷಿತ್ ಶೆಟ್ಟಿ

ಮತ್ತೆ ‘ಕಿರಿಕ್’ ಮಾಡ್ತಾರಂತೆ ರಕ್ಷಿತ್ ಶೆಟ್ಟಿ

87
0

ಬೆಂಗಳೂರು:

ಕಿರಿಕ್ ಪಾರ್ಟಿ ಮಾಡಿದ್ದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮತ್ತೆ ಕಿರಿಕ್ ಮಾಡ್ತಾರಂತೆ. ಏನೂಂತ ಅರ್ಥ ಆಯ್ತಲ್ವ? . . . ಹೌದು. ಶೆಟ್ಟಿದ್ವಯರಿಬ್ಬರೂ ‘ಕಿರಿಕ್ ಪಾರ್ಟಿ 2’ ಮಾಡ್ತಾರಂತೆ.

ಲವಲವಿಕೆ, ಹಾಸ್ಯ, ನವಿರಾದ ಪ್ರೇಮಕತೆ ಹೊಂದಿದ್ದ ಕಿರಿಕ್ ಸಿನಿಮಾದ ಮುಂದುವರಿದ ಭಾಗ ಹೇಗಿರಬಹುದು ಎಂಬ ಕುತೂಹಲ ಈಗಾಗಲೇ ಎಲ್ಲರಲ್ಲೂ ಮೂಡಿದೆ. ‘ಕಿರಿಕ್ ಪಾರ್ಟಿ-2’ ಕ್ಕೂ ರಿಷಬ್ ಶೆಟ್ಟಿಯವರೇ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಆದರೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಇರೋದು ಅನುಮಾನ ಎನ್ನಲಾಗಿದೆ.

ಪ್ರಸ್ತುತ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಹೇಮಂತ್ ರಾವ್ ನಿರ್ದೇಶನದ ‘ಸಪ್ತಸಾಗರದಾಚೆ ಯೆಲ್ಲೊ’ ಸಿನಿಮಾದಲ್ಲಿ ನಟಿಸಬೇಕಿದೆ. ಅದರ ನಂತರ ತಮ್ಮದೇ ಸ್ವಂತ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಅದರ ಕತೆ ಈಗಾಗಲೇ ತಯಾರಾಗಿದ್ದಾರಂತೆ.

LEAVE A REPLY

Please enter your comment!
Please enter your name here