ಮಂಗಳೂರು, ಮಾ.30: ಬಿತ್ತುಪಾದೆಯ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಖುವ್ವತುಲ್ ಇಸ್ಲಾಂ ಮದ್ರಸದ ಇಬ್ಬರು ವಿದ್ಯಾರ್ಥಿನಿಯರು 2023-24ನೇ ಸಾಲಿನ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಮುಹಮ್ಮದ್ ಶರೀಫ್-ನಶ್ರಿಯಾ ದಂಪತಿಯ ಪುತ್ರಿಯಾಗಿರುವ 7ನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ ಶಹಾನಾ ಮತ್ತು ಅಬ್ದುಲ್ ರಹೀಂ ಮಾಲ್ಪಾಡಿ-ಸಕೀನಾ ದಂಪತಿಯ ಪುತ್ರಿಯಾಗಿರುವ 5ನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ ಶಬೀಬಾ ಉತ್ತಮ ಅಂಕ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
