ನವದೆಹಲಿ: ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯೊಂದು ಮನಸೋ ಇಚ್ಛೆ ಬಿಲ್ ಮಾಡಿ ಹಣ ಪೀಕುವ ಪ್ರಯತ್ನವೊಂದು ರೋಗಿಯ ಸಮಯ ಪ್ರಜ್ಞೆಯಿಂದ ತಪ್ಪಿದೆ.
ಹೌದು.. ರೋಗಿಯೊಬ್ಬರು ತಾವು ಪಡೆಯದ ಚಿಕಿತ್ಸೆಗೂ ಬಿಲ್ನಲ್ಲಿ ಹಣ ಸೇರಿಸಿರುವುದನ್ನು ಪತ್ತೆ ಮಾಡಿ ಬರೊಬ್ಬರಿ 44 ಸಾವಿರ ರೂ ಹಣ ಉಳಿಸಿಕೊಂಡಿದ್ದಾರೆ.
ಆಸ್ಪತ್ರೆಯಿಂದ ‘ಐಟಮೈಸ್ಡ್ ಬಿಲ್’ ಕೇಳುವ ಮೂಲಕ ರೋಗಿಯೊಬ್ಬರು ತಮ್ಮ ಬಿಲ್ನಲ್ಲಿ 44,000 ರೂ. ಉಳಿತಾಯ ಮಾಡಿದ್ದಾರೆ. ತಾವು ಪಡೆಯದ ಚಿಕಿತ್ಸೆಗೂ ಬಿಲ್ನಲ್ಲಿ ಹಣ ಸೇರಿಸಿರುವುದನ್ನು ಕಂಡುಕೊಂಡ ಅವರು, ಈ ಮೂಲಕ ಆಸ್ಪತ್ರೆ ಬಿಲ್ಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರ ಮಹತ್ವವನ್ನು ಸಾರಿದ್ದಾರೆ.
ಮೊದಲೇ ಖಾಸಗಿ ಆಸ್ಪತ್ರೆ ಚಿಕಿತ್ಸೆ ಗಗನಕ್ಕೇರಿದೆ. ಇದರ ನಡುವೆ ಆಸ್ಪತ್ರೆಯೊಂದು ಇಲ್ಲ ಸಲ್ಲದಕ್ಕೆಲ್ಲಾ ಬಿಲ್ ಮಾಡಿ ರೋಗಿಯಿಂದ ಲಕ್ಷಾಂತರ ಹಣ ಪೀಕಲು ಹೋಗಿ ಸಿಕ್ಕಿ ಬಿದ್ದಿದೆ. ಕೇವಲ ಒಂದು ‘ಐಟಮೈಸ್ಡ್ ಬಿಲ್’ (ಪ್ರತಿ ವಸ್ತುವಿನ ವಿವರವಿರುವ ಪಟ್ಟಿ) ಕೇಳಿದ ಕಾರಣಕ್ಕೆ ರೋಗಿಯೊಬ್ಬರಿಗೆ ಸುಮಾರು 44,000 ರೂಪಾಯಿ ಉಳಿತಾಯವಾಗಿದೆ!
ಮಾಡಿಸಿಕೊಳ್ಳದ ಶಸ್ತ್ರಚಿಕಿತ್ಸೆಗೂ ಬಿಲ್
ಅಚ್ಚರಿಯೆಂದರೆ, ಆ ರೋಗಿಗೆ ತಾನು ಮಾಡಿಸಿಕೊಳ್ಳದ ಶಸ್ತ್ರಚಿಕಿತ್ಸೆಗೂ ಬಿಲ್ ಹಾಕಲಾಗಿತ್ತು. ಆದರೆ ಆಸ್ಪತ್ರೆಯಿಂದ ‘ಐಟಮೈಸ್ಡ್ ಬಿಲ್’ ಕೇಳುವ ಮೂಲಕ ರೋಗಿ ಅದಕ್ಕೆ ಬ್ರೇಕ್ ಹಾಕಿದ್ದಾರೆ. ಆ ಮೂಲಕ 44 ಸಾವಿರ ರೂ ಹಣ ಉಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನ ಪ್ರಕಾರ, ಜನವರಿಯಲ್ಲಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಹೊರರೋಗಿಯಾಗಿ (Outpatient) ಚಿಕಿತ್ಸೆ ಪಡೆದ ವ್ಯಕ್ತಿಗೆ ಇನ್ಶೂರೆನ್ಸ್ ಕಳೆದ ನಂತರವೂ 1 ಲಕ್ಷ ರೂಪಾಯಿ (ಸುಮಾರು $1,100) ಬಿಲ್ ನೀಡಲಾಗಿತ್ತು. ಆ ರೋಗಿಯು ಸಾಲ ಮಾಡಿ ಹಣ ಕಟ್ಟಲು ಸಿದ್ಧರಾಗಿದ್ದರು. ಆದರೆ, ಸಹೋದ್ಯೋಗಿಯೊಬ್ಬರ ಸಲಹೆಯಂತೆ ಆಸ್ಪತ್ರೆಯಿಂದ ‘ಐಟಮೈಸ್ಡ್ ಬಿಲ್’ ಕೇಳಿದರು.
ಆಸ್ಪತ್ರೆ ನೀಡಿದ ಆರು ಪುಟಗಳ ಸುದೀರ್ಘ ಬಿಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬೆಚ್ಚಿಬೀಳುವ ಸತ್ಯಗಳು ಹೊರಬಂದಿದ್ದವು. ತಾನು ಆಸ್ಪತ್ರೆಯಲ್ಲಿದ್ದಾಗ ಎಂದಿಗೂ ಪಡೆದುಕೊಳ್ಳದ ಅನಸ್ತೇಷಿಯಾ ಕನ್ಸಲ್ಟೇಶನ್ಗೆ ಬರೋಬ್ಬರಿ 31,430 ರೂಪಾಯಿ ಚಾರ್ಜ್ ಮಾಡಲಾಗಿತ್ತು. ಒಂದು ‘ಸಪ್ಲೈ ಕಿಟ್’ ಅನ್ನು ಎರಡು ಬಾರಿ ಬಿಲ್ನಲ್ಲಿ ಸೇರಿಸಲಾಗಿತ್ತು.
ಈ ಬಗ್ಗೆ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗಕ್ಕೆ ಕರೆ ಮಾಡಿದಾಗ, ಸಿಬ್ಬಂದಿ ಯಾವುದೇ ವಿರೋಧ ವ್ಯಕ್ತಪಡಿಸದೆ ಈ ಬಗ್ಗೆ ಪರಿಶೀಲನೆ ಮಾಡೋದಾಗಿ ತಿಳಿಸಿದರು. ಎರಡು ವಾರಗಳ ನಂತರ, ಆ ತಪ್ಪು ಚಾರ್ಜ್ಗಳನ್ನು ತೆಗೆದುಹಾಕಲಾಯಿತು. ಇದರಿಂದ 1 ಲಕ್ಷ ರೂಪಾಯಿ ಇದ್ದ ಬಿಲ್ ಕೇವಲ 57,000 ರೂಪಾಯಿಗೆ ($618) ಇಳಿಕೆಯಾಯಿತು. ಅಂದರೆ ರೋಗಿಗೆ ಸುಮಾರು 44,000 ರೂಪಾಯಿ ಉಳಿತಾಯವಾಯಿತು.
asked for an itemized hospital bill on a whim and found out they charged me for stuff that literally never happened
by
u/LongjumpingOffice432 in
povertyfinance
ಆಸ್ಪತ್ರೆ ವಿರುದ್ಧ ವ್ಯಾಪಕ ಆಕ್ರೋಶ
ಇನ್ನು ತಪ್ಪು ಬಿಲ್ ನೀಡಿ ಹಣ ಪೀಕಲು ಯತ್ನಿಸಿದ್ದ ಆಸ್ಪತ್ರೆ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಸ್ಪತ್ರೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಲ್ನಲ್ಲಿ ಐಟಮೈಸ್ಡ್ ಲಿಸ್ಟ್ ಕೇಳಿದರೆ ಸಾಕು, ತಕ್ಷಣವೇ ಶೇ. 20 ರಷ್ಟು ಬಿಲ್ ಕಡಿಮೆಯಾಗುತ್ತದೆ” ಎಂದು ಒಬ್ಬರು ಹೇಳಿದ್ದಾರೆ. “ಇದು ಆಕಸ್ಮಿಕ ತಪ್ಪುಗಳಲ್ಲ, ಇದು ಉದ್ದೇಶಪೂರ್ವಕ ಲೂಟಿ. ಒಂದು ವೇಳೆ ತಪ್ಪಾಗಿದ್ದರೆ ಅದು ರೋಗಿಯ ಪರವಾಗಿಯೂ ಆಗಬೇಕಿತ್ತಲ್ಲವೇ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
