ಚೆನ್ನೈ: ಭಾರತದ ಖ್ಯಾತ ಕ್ರೀಡಾದಂಪತಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್ ಅವರು ತಮ್ಮ ಮೂರನೇ ಮಗುವಿಗೆ ಜನ್ಮ ನೀಡಿದ್ದು, ಹಬ್ಬದ ದಿನವೇ ಹೆಣ್ಣುಮಗುವಿನ ಆಗಮನವಾಗಿದೆ.
2015ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಈಗಾಗಲೇ ಕಬೀರ್ ಮತ್ತು ಜಿಯಾನ್ ಎಂಬ ಅವಳಿ ಪುತ್ರರಿದ್ದು, ಇದೀಗ ತಮ್ಮ ಮೂರನೇ ಮಗುವಿನ ಆಗಮನವಾಗಿದೆ.
ಈ ಸುದ್ದಿಯನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಇದೀಗ ದಿನೇಶ್ ಕಾರ್ತಿಕ್ ಅವರು ಆರ್ ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೆಸರೂ ಕೂಡ ಘೋಷಣೆ
ಇನ್ನು ದಿನೇಶ್ ಕಾರ್ತಿಕ್ ದಂಪತಿ ತಮ್ಮ ನೂತನ ಮಗುವಿಗೆ ಹೆಸರೂ ಕೂಡ ಅಂತಿಮಗೊಳಿಸಿದ್ದು, ಮುದ್ದಾದ ಹೆಣ್ಣುಮಗುವಿಗೆ ರಾಹಾ (ರಾಹಾ ಪಳ್ಳಿಕಲ್ ಕಾರ್ತಿಕ್) ಎಂದು ಹೆಸರಿಟ್ಟಿದ್ದಾರೆ.
ಈ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ “ನಮ್ಮ ಹೃದಯದಲ್ಲಿ ಆಶೀರ್ವಾದ ಮತ್ತು ಪದಗಳಿಗೆ ಮೀರಿದ ಕೃತಜ್ಞತೆಯೊಂದಿಗೆ, ನಾವು ನಮ್ಮ ಅಮೂಲ್ಯ ಮಗಳನ್ನು ಈ ಜಗತ್ತಿಗೆ ಸಂತೋಷದಿಂದ ಸ್ವಾಗತಿಸುತ್ತೇವೆ.
ಕಬೀರ್ ಮತ್ತು ಜಿಯಾನ್ ತಮ್ಮ ಪುಟ್ಟ ಸಹೋದರಿ ರಾಹಾ ಪಳ್ಳಿಕಾಲ್ ಕಾರ್ತಿಕ್ ಅವರನ್ನು ಪರಿಚಯಿಸಲು ರೋಮಾಂಚನಗೊಂಡಿದ್ದಾರೆ. ಪ್ರೀತಿಯಿಂದ, ದೀಪಿಕಾ ಮತ್ತು ದಿನೇಶ್” ಎಂದು ದಂಪತಿ ಪೋಸ್ಟ್ ಮಾಡಿದ್ದಾರೆ.
