Home ಕರ್ನಾಟಕ ʼನನ್ನ ಭಾರತ, ನನ್ನ ಪರಿವಾರʼ: ಚುನಾವಣೆ ಪ್ರಕಟಣೆಗೂ ಮುಂಚೆ ಪ್ರಧಾನಿ ಮೋದಿ ಘೋಷಣೆ

ʼನನ್ನ ಭಾರತ, ನನ್ನ ಪರಿವಾರʼ: ಚುನಾವಣೆ ಪ್ರಕಟಣೆಗೂ ಮುಂಚೆ ಪ್ರಧಾನಿ ಮೋದಿ ಘೋಷಣೆ

19
0

ಹೊಸ ದಿಲ್ಲಿ: ಲೋಕಸಭಾ ಚುನಾವಣೆ ಪ್ರಕಟಣೆಗೂ ಮುನ್ನ ಶನಿವಾರ ಪ್ರಧಾನಿ ನರೇಂದ್ರ ಮೋದಿ ʼನಾನು ಮೋದಿ ಪರಿವಾರದವನು’ ಎಂಬ ಅಭಿಯಾನ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಸಂಗೀತಮಯ ವಿಡಿಯೊವು ಕೇಂದ್ರ ಸರಕಾರದ ಕಲ್ಯಾಣ ಕಾರ್ಯಕ್ರಮಗಳಿಂದ ಲಾಭ ಪಡೆದಿರುವ ರೈತರಿಂದ ಬಡ ಕುಟುಂಬಗಳವರೆಗಿನ ಜನರು ಪ್ರಧಾನಿಗೆ ಬೆಂಬಲ ವ್ಯಕ್ತಪಡಿಸಿ, ನಾವು ʼಮೋದಿ ಪರಿವಾರʼಕ್ಕೆ ಸೇರಿದ್ದೇವೆ ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿದೆ.

ಈ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ನನ್ನ ಭಾರತ, ನನ್ನ ಪರಿವಾರ” ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಲಾಲೂ ಪ್ರಸಾದ್ ಯಾದವ್, ಪ್ರಧಾನಿ ನರೇಂದ್ರ ಮೋದಿಗೆ ಯಾವುದೇ ಪರಿವಾರವಿಲ್ಲ ಎಂಬ ವ್ಯಂಗ್ಯಕ್ಕೆ ಪ್ರತಿಯಾಗಿ ದೇಶದ ಜನರೊಂದಿಗೆ ತಮಗಿರುವ ಸಂಬಂಧವನ್ನು ಎತ್ತಿ ತೋರಿಸಲು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ದೇಶದ ಜನರನ್ನು ನನ್ನ ಕುಟುಂಬದ ಸದಸ್ಯರು ಎಂದು ಕರೆಯುತ್ತಿದ್ದಾರೆ.

ಹಲವಾರು ಬಿಜೆಪಿ ನಾಯಕರೂ ಕೂಡಾ, ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತವನ್ನು ನಿರ್ಮಿಸಲು ಜನರಿಂದ ಸಲಹೆಗಳನ್ನು ಆಹ್ವಾನಿಸಿರುವ ಪತ್ರವನ್ನು ಹಂಚಿಕೊಂಡಿದ್ದು, ನಾವೆಲ್ಲ ಒಟ್ಟಾಗಿ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here