Home Uncategorized ಅಂತರಾಜ್ಯ ಅಡಿಕೆ ಕಳ್ಳರ ಬಂಧನ; ಸಾಗರ ಗ್ರಾಮಾಂತರ ಪೊಲೀಸರಿಂದ 1.17 ಕೋಟಿ ಮೌಲ್ಯದ ಅಡಿಕೆ ವಶ

ಅಂತರಾಜ್ಯ ಅಡಿಕೆ ಕಳ್ಳರ ಬಂಧನ; ಸಾಗರ ಗ್ರಾಮಾಂತರ ಪೊಲೀಸರಿಂದ 1.17 ಕೋಟಿ ಮೌಲ್ಯದ ಅಡಿಕೆ ವಶ

28
0

ಶಿವಮೊಗ್ಗ: ಮೂವರು ಅಂತಾರಾಜ್ಯ ಕಳ್ಳರು ಸಾಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೆಲವು ದಿನಗಳಿಂದ ಸಾಗರ ಗ್ರಾಮಾಂತರ ಪೊಲೀಸರು ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಕಳ್ಳತನದ ಮೇಲೆ ನಿಗಾವಹಿಸಿದ್ದರು. ಹೀಗೆ ಸಾಗರ ತಾಲೂಕಿನ ಬಳಸಗೋಡು ಗ್ರಾಮದ ಮಧುಕರ್ ಅವರ ಗೋದಾಮಿನಿಂದ ದೋಲರಾಮ್ ಎಂಬುವರು 25.500 ಕೆಜಿ ತೂಕದ 350 ಚೀಲ ಅಡಿಕೆಯನ್ನು ಅಹ್ಮದಾಬಾದ್​ಗೆ ಕಳುಹಿಸಿದ್ದರು. ಆದರೆ ಮಧ್ಯಪ್ರದೇಶದ ಮೂಲದ ರಜಾಬ್ ಖಾನ್, ತೇಜು ಸಿಂಗ್ ಮತ್ತು ಅನೀಸ್ ಅಬ್ದಾಸಿ ಮೂವರು ಸೇರಿ ಲಾರಿ ಸಮೇತ ಅಡಿಕೆಯನ್ನು ಕದ್ದುಕೊಂಡು ಹೋಗಿದ್ದರು. ದೋಲಾರಾಮ್ ಅವರು ಈ ಮೂವರನ್ನು ನಂಬಿ ಕೋಟಿ ಮೌಲ್ಯದ ಅಡಿಕೆಯ ಸಾಗಾಟಕ್ಕೆ ಜವಾಬ್ದಾರಿ ವಹಿಸಿದ್ದರು.

ಈ ಮೂವರು 50 ಸಾವಿರ ಹಣ ಅಡ್ವಾನ್ಸ್ ಪಡೆದುಕೊಂಡು. ಅಡಿಕೆಯನ್ನು ಅಹ್ಮದಬಾದ್​ಗೆ ತೆಗೆದುಕೊಂಡು ಹೋಗದೇ ಮದ್ಯಪ್ರದೇಶದ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದರು. ದೋಲಾರಾಮ್ ಕೊಟ್ಟ ದೂರಿನ ಬಳಿಕ ಸಾಗರ ಗ್ರಾಮಾಂತರ ಪೊಲೀಸರು ಆಪರೇಶನ್ ಮಾಡಿ ಮೂವರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1.17 ಕೋಟಿ ಮೌಲ್ಯದ ಅಡಿಕೆಯನ್ನು ಕದ್ದ ಕಳ್ಳರ ಬೆನ್ನುಬಿದ್ದ ಸಾಗರ ಗ್ರಾಮಾಂತರ ಪೊಲೀಸರು ಮದ್ಯಪ್ರದೇಶಕ್ಕೆ ಹೋಗಿ ಲಾರಿ ಮತ್ತು ಅಡಿಕೆಯನ್ನು ಸೀಜ್ ಮಾಡಿಕೊಂಡು ಬಂದಿದ್ದಾರೆ.

ನಂಬಿದ ಅಡಿಕೆ ವ್ಯಾಪಾರಿಗೆ ವಂಚನೆ ಮಾಡಿ 1.17 ಕೋಟಿ ಮೌಲ್ಯದ ಅಡಕೆಯನ್ನು ಇವರು ಲಪಟಾಯಿಸಿಕೊಂಡು ಎಸ್ಕೇಪ್ ಆಗಿದ್ದರು. ಅಹ್ಮದಬಾದಗೆ ಹೋಗಬೇಕಿದ್ದ ಅಡಕೆಯು ಮದ್ಯಪ್ರದೇಶ ಕಳ್ಳರ ಹಳ್ಳಿಗೆ ತಲುಪಿತ್ತು. ಸಾಗರ ಗ್ರಾಮಾಂತರ ಪೊಲೀಸ್ ತಂಡವು ಸುಮಾರು 22 ದಿನಗಳ ಕಾರ್ಯಾಚರಣೆ ಮಾಡಿದ್ದಾರೆ. ಸಿನಿಮಾ ಸ್ಟೈಲ್​ನಂತೆ ಈ ಅಡಿಕೆ ಕಳ್ಳರು ತಾವು ಬಳಸುತ್ತಿದ್ದ ಸಿಮ್ ಮತ್ತು ಮೊಬೈಲ್​ಗಳನ್ನು ಮಾತನಾಡಿದ ಬಳಿಕ ಅದನ್ನು ಹೋಗುವ ಲಾರಿಗಳ ಮೇಲೆ ಎಸೆಯುತ್ತಿದ್ದು, ಯಾವುದೇ ಸುಳಿವು ನೀಡದೇ ಚಾಣಾಕ್ಷತನ ತೋರುತ್ತಿದ್ದರು. ಈ ಕಳ್ಳರ ಬೆನ್ನು ಬಿದ್ದು ಅವರ ಚಲನವಲನಗಳ ಕುರಿತು ತಾಂತ್ರಿಕ ಮಾಹಿತಿ ಕಲೆ ಹಾಕಿ ಕೊನೆಗೂ ಮಾಲು ಸಮೇತ ಮೂವರು ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸರಿಗೆ ಎಸ್ಪಿ ಮಿಥುನ್ ಕುಮಾರ್ ಅಭಿನಂದನೆ ಸಲ್ಲಿಸಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ ಪಾಲಿಕೆ ಜಾಗದಲ್ಲಿ ಪುರಾತನ ಕಾಲದ ಗಣೇಶನ ವಿಗ್ರಹ ಪತ್ತೆ; ಸ್ಥಳದಲ್ಲೇ ದೇವಸ್ಥಾನ ನಿರ್ಮಾಣಕ್ಕೆ ಪಟ್ಟು

ಕಳ್ಳತನವಾದ ಕೋಟಿ ಮೌಲ್ಯದ ಅಡಿಕೆಯನ್ನು ಪತ್ತೆ ಹಚ್ಚುವುದು ಸಾಗರ ಗ್ರಾಮಾಂತರ ಪೊಲೀಸರಿಗೆ ದೊಡ್ಡ ಸವಾಲು ಆಗಿತ್ತು. ಸಾಗರ ಪೊಲೀಸರು ಈ ಸವಾಲು ಸ್ವೀಕರಿಸಿ ಕೋಟಿ ಕೋಟಿ ಮೌಲ್ಯದ ಅಡಿಕೆ ಮತ್ತು ಮೂವರ ಕಳ್ಳರನ್ನು ಪತ್ತೆ ಮಾಡಿದ್ದು ಮಾತ್ರ ನಿಜಕ್ಕೂ ಶ್ಲಾಘನೀಯವಾಗಿದೆ.

ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here