ಹುಬ್ಬಳ್ಳಿ: ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಆಶ್ರಯದಲ್ಲಿ ಹುಬ್ಬಳ್ಳಿ ಸಿರಿಧಾನ್ಯ ಮೇಳವನ್ನು ನಗರದ ಮೂರುಸಾವಿರ ಮಠದ ಸಭಾಭವನದಲ್ಲಿ ಅ. 14ರಿಂದ ಎರಡು ದಿನಗಳವರೆಗೆ ಏರ್ಪಡಿಸಲಾಗಿದೆ. ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ಮೇಳ ನಡೆಯಲಿದೆ.
ಆರೋಗ್ಯಯುತ ಜೀವನಕ್ಕೆ ಅಗತ್ಯವಾದ ಸ್ಮಾರ್ಟ್ ಫುಡ್ ಎಂದೇ ಜನಪ್ರಿಯತೆ ಪಡೆದಿರುವ ಸಿರಿಧಾನ್ಯಗಳು ಹಾಗೂ ಅವುಗಳ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಇರುತ್ತದೆ. ಅ. 14ರಂದು ಸಂಜೆ 6ಕ್ಕೆ “ರುಚಿ ನೋಡಿ ಹೇಳಿ’ ಅಂದರೆ ಸಿರಿಧಾನ್ಯದ ತಿನಿಸುಗಳ ಸವಿದು ಯಾವ ಧಾನ್ಯದಿಂದ ತಯಾರಿಸಿದೆ ಎಂದು ಊಹಿಸುವ ಸ್ಪರ್ಧೆ ನಡೆಯಲಿದೆ.