ಅಕ್ಟೋಬರ್ 13ರಂದು ರಾಷ್ಟ್ರಾದ್ಯಂತ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಮಲ್ಟಿಪ್ಲೆಕ್ಸ್ನಲ್ಲಿ ಭರ್ಜರಿ ಆಫರ್ ನೀಡಲಾಗುತ್ತಿದೆ.
ಕಳೆದ ವರ್ಷ ಈ ದಿನದಂದು ಟಿಕೆಟ್ ದರ 75 ರೂಪಾಯಿ ನಿಗದಿ ಮಾಡಲಾಗಿತ್ತು. ಇದಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಮಲ್ಟಿಪ್ಲೆಕ್ಸ್ಗಳು ಹೌಸ್ಫುಲ್ ಆಗಿದ್ದವು. ಈ ವರ್ಷವೂ ರಾಷ್ಟ್ರೀಯ ಸಿನಿಮಾ ದಿನಾಚರಣೆ ಅಂಗವಾಗಿ ಟಿಕೆಟ್ ದರ 99 ರೂಪಾಯಿ ನಿಗದಿ ಮಾಡಲಾಗಿದೆ.
ಈ ಮೂಲಕ ಕೈಗೆಟಕುವ ದರದಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಸಿಕ್ಕಿದೆ. 2023ರಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿವೆ. ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಸಿನಿಮಾ ನೀಡಿದ್ದಾರೆ
ಗದರ್ 2’, ‘ಕೌಸಲ್ಯ ಸುಪ್ರಜಾ ರಾಮ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಸಪ್ತ ಸಾಗರದಾಚೆ ಎಲ್ಲೋ’ ಸೇರಿ ಅನೇಕ ಚಿತ್ರಗಳು ಒಳ್ಳೆಯ ಬಿಸ್ನೆಸ್ ಮಾಡಿವೆ. ಈ ರೀತಿಯ ಹಿಟ್ ಚಿತ್ರಗಳನ್ನು ಮಲ್ಟಿಪ್ಲೆಕ್ಸ್ನಲ್ಲಿ ನೋಡಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಆದರೆ, ಟಿಕೆಟ್ ದರ ದುಬಾರಿ ಇರುವುದರಿಂದ ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರ ವೀಕ್ಷಿಸೋಕೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಈಗ ‘ರಾಷ್ಟ್ರೀಯ ಸಿನಿಮಾ ದಿನ’ದ ಪ್ರಯುಕ್ತ 99 ರೂಪಾಯಿಗೆ ಸಿನಿಮಾ ಟಿಕೆಟ್ ಮಾರಲು ತೀರ್ಮಾನಿಸಲಾಗಿದೆ.
The post ಅಕ್ಟೋಬರ್ 13ಕ್ಕೆ ಮಲ್ಟಿಪ್ಲೆಕ್ಸ್ನಲ್ಲಿ ಭರ್ಜರಿ ಆಫರ್: ಕೈಗೆಟಕುವ ದರದಲ್ಲಿ ಸಿನಿಮಾ ವೀಕ್ಷಣೆ! appeared first on Ain Live News.