Home Uncategorized ಅಕ್ರಮ `ಎ’ ಖಾತಾ ಅಸ್ತಿದಾರರಿಗೆ ಶಾಕ್ ಕೊಟ್ಟ BBMP; ತನಿಖೆಗೆ ಆದೇಶ

ಅಕ್ರಮ `ಎ’ ಖಾತಾ ಅಸ್ತಿದಾರರಿಗೆ ಶಾಕ್ ಕೊಟ್ಟ BBMP; ತನಿಖೆಗೆ ಆದೇಶ

11
0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಅಕ್ರಮ ‘ಎ’ ಖಾತಾ ಪ್ರಮಾಣಪತ್ರಗಳನ್ನು ನೀಡುತ್ತಿರುವ ಕುರಿತು ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಅಕ್ರಮ ‘ಎ’ ಖಾತಾ ಪ್ರಮಾಣಪತ್ರಗಳನ್ನು ನೀಡುತ್ತಿರುವ ಕುರಿತು ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ.

ಸಹಾಯಕ ಕಂದಾಯ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಅಕ್ರಮವಾಗಿ ‘ಬಿ’ ಖಾತಾಗಳನ್ನು ‘ಎ’ ಖಾತಾಗಳಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಬಿಎಂಪಿ ಆದೇಶದ ಪ್ರಕಾರ, ಹಣಕಾಸು ವಿಶೇಷ ಆಯುಕ್ತರ ಆದೇಶದ ನಂತರ, 3,666 ಅಕ್ರಮ ‘ಎ’ ಖಾತಾಗಳನ್ನು ‘ಬಿ’ ಖಾತಾಗಳಾಗಿ ಮರುಪರಿವರ್ತಿಸಬೇಕು. ಅಕ್ರಮ ‘ಎ’ ಖಾತಾಗಳಿಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿದ್ದು, ಅಂತಹ ಸುಮಾರು 45,000 ಆಸ್ತಿಗಳನ್ನು ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತಿಸಲಾಗಿದೆ ಎಂದು ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.

ಇದನ್ನೂ ಓದಿ: ಚುನಾವಣೆಯತ್ತ ಕಾಂಗ್ರೆಸ್ ಚಿತ್ತ: ಬಿಬಿಎಂಪಿ ಕಾರ್ಪೊರೇಟರ್ ಗಳನ್ನು ಸೆಳೆಯುವ ಯತ್ನದಲ್ಲಿ ‘ಕೈ’ ನಿರತ!

“ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಅಂತಹ ಶೇಕಡಾ 90 ಕ್ಕೂ ಹೆಚ್ಚು ಆಸ್ತಿಗಳನ್ನು ಅಕ್ರಮವಾಗಿ ಪರಿವರ್ತಿಸಲಾಗಿದೆ ಮತ್ತು ಆದ್ದರಿಂದ, ಬೆಂಗಳೂರಿನಾದ್ಯಂತ ಅಂತಹ ಎಲ್ಲಾ ಆಸ್ತಿಗಳನ್ನು ಮರುಪರಿಶೀಲಿಸುವಂತೆ ಆದೇಶಿಸಲಾಗಿದೆ” ಎಂದು ರಾಯಪುರ ಹೇಳಿದರು. ಪಾಲಿಕೆ ಕಂದಾಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದರು.

ಮೂಲಗಳ ಪ್ರಕಾರ, ಎಲ್ಲಾ ವಾರ್ಡ್‌ಗಳು ‘ಬಿ’ ಆಸ್ತಿಗಳಿಗೆ ‘ಎ’ ಖಾತಾ ನೀಡಿರುವುದರಿಂದ ಆರ್‌ಆರ್ ನಗರ ವಲಯದಿಂದ ಕಾರ್ಯಾಚರಣೆ ಪ್ರಾರಂಭವಾಗಿತ್ತು. “ರಾಯಪುರ ಅವರ ಆದೇಶದ ಪ್ರಕಾರ, ಎಲ್ಲಾ 3,666 ‘ಎ’ ಖಾತಾಗಳನ್ನು ‘ಬಿ’ ಖಾತಾಗೆ ಮರುಪರಿವರ್ತಿಸಲಾಗುವುದು” ಎಂದು ಮೂಲವೊಂದು ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು: ಶೇ.60ರಷ್ಟು ಬಿಬಿಎಂಪಿ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಯೇ ಇಲ್ಲ!

ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಅಂಜನಾಪುರದ ಬಿಬಿಎಂಪಿಯ ಕಂದಾಯ ಉಪ ಇಲಾಖೆಗೆ ಭೇಟಿ ನೀಡಿ ಅಕ್ರಮ ‘ಎ’ಖಾತಾ ನೀಡಿರುವ ಎರಡು ವಾರ್ಡ್ ಗಳ ದಾಖಲೆಗಳನ್ನು ಪರಿಶೀಲಿಸಿದ್ದರು. ಈ ವೇಳೆ ಕೇವಲ ಎರಡು ವಾರ್ಡ್‌ಗಳಲ್ಲಿ 698 ಅಕ್ರಮ ‘ಎ’ಖಾತಾ ನೀಡಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here