Home Uncategorized ಅಕ್ರಮ ಹಣ ವರ್ಗಾವಣೆ ಪ್ರಕರಣ ; ಈಡಿ ಅರ್ಜಿಗೆ ಉತ್ತರಿಸಲು ವಿವೊ ಅಧಿಕಾರಿಗಳಿಗೆ ಸಮಯಾವಕಾಶ

ಅಕ್ರಮ ಹಣ ವರ್ಗಾವಣೆ ಪ್ರಕರಣ ; ಈಡಿ ಅರ್ಜಿಗೆ ಉತ್ತರಿಸಲು ವಿವೊ ಅಧಿಕಾರಿಗಳಿಗೆ ಸಮಯಾವಕಾಶ

20
0

ಹೊಸದಿಲ್ಲಿ : ದಿಲ್ಲಿ ಉಚ್ಛ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತ ವಿವೊ-ಇಂಡಿಯಾದ ಮೂವರು ಅಧಿಕಾರಿಗಳ ಬಿಡುಗಡೆಗೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಈಡಿ)ವು ಸಲ್ಲಿಸಿರುವ ಅರ್ಜಿಗೆ ಉತ್ತರಿಸಲು ಈ ಅಧಿಕಾರಿಗಳಿಗೆ ಒಂದು ವಾರ ಸಮಯಾವಕಾಶವನ್ನು ಬುಧವಾರ ಮಂಜೂರು ಮಾಡಿದೆ.

ನ್ಯಾ.ಸ್ವರ್ಣಕಾಂತಾ ಶರ್ಮಾ ಅವರು ವಿಚಾರಣೆಯನ್ನು ಜ.11ಕ್ಕೆ ಮುಂದೂಡಿದರು. ಆರೋಪಿಗಳನ್ನು 24 ಗಂಟೆಗಳಲ್ಲಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿಲ್ಲ. ಹೀಗಾಗಿ ಅವರನ್ನು ಕಸ್ಟಡಿಯಲ್ಲಿ ಇಟ್ಟುಕೊಂಡಿರುವುದು ಕಾನೂನುಬಾಹಿರವಾಗಿದೆ ಎಂದು ಡಿ.30ರಂದು ಹೇಳಿದ್ದ ವಿಚಾರಣಾ ನ್ಯಾಯಾಲಯವು ಅವರ ಬಿಡುಗಡೆಗೆ ಆದೇಶಿಸಿತ್ತು.

ಭಾರತದಲ್ಲಿ ತೆರಿಗೆಗಳನ್ನು ತಪ್ಪಿಸಲು ವಿವೊ-ಇಂಡಿಯಾ ಚೀನಾಕ್ಕೆ 62,476 ಕೋ.ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದೆ ಎನ್ನುವುದು ಈಡಿ ಆರೋಪವಾಗಿದೆ.

LEAVE A REPLY

Please enter your comment!
Please enter your name here