ಬೆಂಗಳೂರು: ಗೋವಾ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಹೊರ ರಾಜ್ಯಗಳಿಂದ ಕ್ಲೋರಲ್ ಹೈಡ್ರೇಟ್ (CH) ಪೌಡರ್ ಸರಬರಾಜು ಹಾಗೂ ಸಾಗಾಟವನ್ನು ತಡೆಯಲು ಗಡಿ ಪ್ರದೇಶಗಳಲ್ಲಿ ಶಾಶ್ವತ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ ಎಂದು ಸಚಿವ ಎನ್.ಎಸ್. ಬೋಸರಾಜು ಅವರು ಗುರುವಾರ ಹೇಳಿದ್ದಾರೆ.
ಈ ಕುರಿತು ವಿಧಾನಪರಿಷತ್ನಲ್ಲಿ ಮಾಹಿತಿ ನೀಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಸಿಎಚ್ (ಕ್ಲೋರಲ್ ಹೈಡ್ರೇಟ್ (CH) ಪೌಡರ್) ಪೌಡರ್ ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು 1,117 ಪ್ರಕರಣಗಳು ದಾಖಲಾಗಿದ್ದು, 771 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ 1,498 ಕೆಜಿ ಸಿಎಚ್ ಪೌಡರ್ ಹಾಗೂ 42,927 ಲೀಟರ್ ಸಿಎಚ್ ದ್ರಾವಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಕ್ರಮ ಸಾಗಾಟದಲ್ಲಿ ಬಳಸುತ್ತಿದ್ದ 609 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಿಎಚ್ ಪೌಡರ್ ಅಕ್ರಮ ಸಾಗಾಟವನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದೂ ಸಚಿವರು ತಿಳಿಸಿದರು.
