ಕೊಡಗಿನ ಪ್ರತಿಷ್ಠಿತ ಶಾಲೆಯಲ್ಲಿ 9 ನೇ ತರಗತಿಯಲ್ಲಿದ್ದ 15 ವರ್ಷದ ಹುಡುಗ, 2022 ರ ಅಕ್ಟೋಬರ್ 24 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅಶಿಸ್ತಿನ ಹಿನ್ನೆಲೆಯಲ್ಲಿ ಆತನನ್ನು ಶಾಲೆಯಿಂದ 21 ದಿನಗಳ ಕಾಲ ಅಮಾನತು ಮಾಡಲಾಗಿತ್ತು. ಬೆಂಗಳೂರು: ಶಾಲೆಯಿಂದ ಸಸ್ಪೆಂಡ್ ಮಾಡಿದ್ದಕ್ಕೆ ಮನನೊಂದು ಕೊಡಗು ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಾಲೆಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಡಗು ಶಾಲೆಯೊಂದರ ಪ್ರಾಂಶುಪಾಲ, ವಾರ್ಡನ್ ಮತ್ತು ನಿರ್ದೇಶಕರ ಪರ ಪೊಲೀಸರು ಬಿ.ರಿಪೋರ್ಟ್ ಸಲ್ಲಿಸಿದ್ದರು.
ಆದರೆ ಈ ಬಿ ರಿಪೋರ್ಟ್ ವರದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿತ್ತು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು, ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಕೊಡಗಿನ ಪ್ರತಿಷ್ಠಿತ ಶಾಲೆಯಲ್ಲಿ 9 ನೇ ತರಗತಿಯಲ್ಲಿದ್ದ 15 ವರ್ಷದ ಹುಡುಗ, 2022 ರ ಅಕ್ಟೋಬರ್ 24 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅಶಿಸ್ತಿನ ಹಿನ್ನೆಲೆಯಲ್ಲಿ ಆತನನ್ನು ಶಾಲೆಯಿಂದ 21 ದಿನಗಳ ಕಾಲ ಅಮಾನತು ಮಾಡಲಾಗಿತ್ತು, ಸಸ್ಪೆಂಡ್ ಮಾಡಿದ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಹೇಳಿದ್ದ ಶಾಲೆಯ ಆಡಳಿತ ಮಂಡಳಿ ಆನ್‌ಲೈನ್‌ನಲ್ಲಿ ಪ್ರಶ್ನೆ ಪತ್ರಿಕೆ ಕಳುಹಿಸುವುದಾಗಿ ಭರವಸೆ ನೀಡಿತ್ತು. ಆದರೆ ಗಂಟೆ ಗಟ್ಟಲೆ ಕಾದರು ಆತನಿಗೆ ಪ್ರಶ್ನೆ ಪತ್ರಿಕೆ ಕಳುಹಿಸಿರಲಿಲ್ಲ.
ಇದನ್ನೂ ಓದಿ: ವ್ಯಕ್ತಿಯ ವೃಷಣ ಹಿಸುಕುವುದು ಕೊಲೆ ಯತ್ನವಲ್ಲ; ಗಾಯಗೊಳಿಸಿದರೆ 3 ವರ್ಷ ಜೈಲು: ಕರ್ನಾಟಕ ಹೈಕೋರ್ಟ್ ಆದೇಶ
9ನೇ ತರಗತಿ ವಿದ್ಯಾರ್ಥಿ ಬೆಳಿಗ್ಗೆ 10.10 ರಿಂದ 12.30 ರವರೆಗೆ ಕಂಪ್ಯೂಟರ್ ಮುಂದೆ ಕುಳಿತು ಪ್ರಶ್ನೆ ಪತ್ರಿಕೆ ಲಿಂಕ್ ಗಾಗಿ ಕಾಯುತ್ತಿದ್ದ, ಆದರೆ ಶಾಲೆಯವರು ಅದನ್ನು ಕಳುಹಿಸಲಿಲ್ಲ. ಪರೀಕ್ಷೆಯ ಸಮಯ ಮತ್ತು ಉತ್ತರ ಪತ್ರಿಕೆ ಸಂಗ್ರಹ ಮುಗಿದಿತ್ತು. ಇದರಿಂದ ಮನನೊಂದ ಬಾಲಕ ಮಧ್ಯಾಹ್ನ 12.30ರಿಂದ 1 ಗಂಟೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದ, ಬಳಿಕ ಆತನ ಪೋಷಕರು ದೂರು ದಾಖಲಿಸಿದ್ದರು.
ಶಾಲೆಯ ಹಿರಿಯ ವಿದ್ಯಾರ್ಥಿ ಆದೇಶದ ಮೇರೆಗೆ ಮೃತ ವಿದ್ಯಾರ್ಥಿ ಮಿನರಲ್ ವಾಟರ್ ಬಾಟಲಿಯಲ್ಲಿ ಮದ್ಯವನ್ನು ಶಾಲೆಗೆ ಕೊಂಡೊಯ್ಯುತ್ತಿದ್ದ ವಿಚಾರ ಬೆಳಕಿಗೆ ಬಂದು ಆತನನ್ನು ಶಾಲೆಯಿಂದ ಅಮಾನತು ಮಾಡಲಾಗಿತ್ತು. ನಂತರ ಪ್ರಕರಣ ದಾಖಲಾಗಿತ್ತು, ಆದರೆ ಪೊಲೀಸರು ಸರಿಯಾಗಿ ವಿಚಾರಣೆ ನಡೆಸದೆ ಪ್ರಕರಣಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು.
ಕೊಡಗಿನ ವಿಚಾರಣಾ ನ್ಯಾಯಾಲಯವು 2023 ರ ಮೇ 16 ರಂದು ಪೊಲೀಸರು ಸಲ್ಲಿಸಿದ್ದ ಬಿ. ರಿಪೋರ್ಟ್ ವರದಿಯನ್ನು ತಿರಸ್ಕರಿಸಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶದ ವಿರುದ್ಧ ಗೌರಮ್ಮ, ದಾತಾ ಕರುಂಬಯ್ಯ ಮತ್ತು ಚೇತನ್ ಬೋಪಣ್ಣ ಹೈಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಸಂಬಂಧಪಟ್ಟ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸಿದರೆ ಮತ್ತು ಈ ಹಂತದಲ್ಲಿ ಆದೇಶವನ್ನು ರದ್ದುಗೊಳಿಸಲಾಗದು, ಶಾಲೆಯ ಎಲ್ಲಾ ಕೃತ್ಯಗಳಿಗೆ ವಿಚಾರಣೆ ನಡೆಸದೆ ಬಿ ರಿಪೋರ್ಟ್ ಹಾಕಲು ಅನುಮತಿಸಲಾಗದು ಎಂದು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳ ಮನೆಗಳೂ ಹೀಗೇ ಇದೆಯಾ?: ಶಾಲೆಗಳಲ್ಲಿನ ಶೌಚಾಲಯ ಪರಿಸ್ಥಿತಿ ಶೋಚನೀಯ, ಮೂಲಸೌಕರ್ಯಗಳ ಬಗ್ಗೆ ಹೈಕೋರ್ಟ್ ಗರಂ
ಈ ರೀತಿಯ ಪ್ರಕರಣವು ನಕಾರಾತ್ಮಕ ಸ್ವ-ಮೌಲ್ಯಮಾಪನಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಧೀಶರು ಗಮನ ಸೆಳೆದರು. ಇದರಿಂದ ಮಕ್ಕಳು ತಮ್ಮ ಬಗ್ಗೆ ಕೆಟ್ಟ ಭಾವನೆ ಹೊಂದುತ್ತಾರೆ. “ಶಿಕ್ಷಣ ಸಂಸ್ಥೆಗಳು, ಆದ್ದರಿಂದ, ಈ ಅತಿಯಾದ/ಕಠಿಣ ಶಿಸ್ತಿನ ವರ್ತನೆ ಬಿಡಬೇಕು, ಬೇರೆ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು, ಈ ರೀತಿ ಮಾಡಿದರೆ ಇದರಿಂದ ಯುವ ಆತ್ಮಗಳ ಜೀವಗಳು ಉಳಿಯುತ್ತವೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಶಿಕ್ಷಣ ಸಂಸ್ಥೆಗಳು ಹಳೆಯ ತತ್ವಗಳು ಈಗ ಬದಲಾಗಿವೆ ಎಂಬುದನ್ನು ಗಮನಿಸಬೇಕು, ಹಿಂದೆಲ್ಲ ರಾಡ್ ಬಿಟ್ಟು ಮಗುವಿಗೆ ಕಲಿಸಿ’ ಎಂದು ಎಂದು ನ್ಯಾಯಾಧೀಶರು ಸೂಚಿಸಿದರು. ಮಗುವು ತೊಂದರೆ ಕೊಟ್ಟರೆ, ಚೇಷ್ಟೆ ಮಾಡಿದರೆ ಅಮಾನತು ಮತ್ತು ಹೊರಹಾಕುವಿಕೆಯಂತಹ ಅತಿಯಾದ ಶಿಸ್ತಿನ ಕ್ರಮಗಳು ಕೆಲವೊಮ್ಮೆ ಮಗುವಿಗೆ ಸಹಾಯ ಮಾಡುವುದಿಲ್ಲ. ಆದ್ದರಿಂದ, ಕಠಿಣ ಶಿಸ್ತನ್ನು ಜಾರಿಗೊಳಿಸುವ ಶಾಲೆಗಳು ಮಾದರಿ ಬದಲಾವಣೆಯ ಬಗ್ಗೆ ಯೋಚಿಸಬೇಕು ಎಂದಿದೆ.