ಬೆಂಗಳೂರು;- ಅತ್ತಿಬೆಲೆ ಪಟಾಕಿ ದುರಂತ ಪ್ರಕರಣವು ಅತ್ಯಂತ ದುರಾದುಷ್ಟ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಅತ್ತಿಬೆಲೆ ಪಟಾಕಿ ದುರಂತ ಸ್ಥಳ ಪರಿಶೀಲಿಸಿ ಮಾತನಾಡಿದರು. ಇದೊಂದು ಅತ್ಯಂತ ದುರಾದುಷ್ಟ ಘಟನೆಯಾಗಿದೆ. ರಾಮಸ್ವಾಮಿ ಅನ್ನೋರು ಲೈಸೆನ್ಸ್ ಪಡೆದು ಗೋಡಾನ್ ಮಾಡಿದ್ದಾರೆ. ನಿನ್ನೆ ಟ್ರಕ್ ನಲ್ಲಿ ಪಟಾಕಿ ಬಂದಿದೆ. ಬೆಂಕಿ ಹೇಗೆ ಹತ್ತಿಕೊಳ್ತು ಅಂತ ಪತ್ತೆಯಾಗಿಲ್ಲ. ವೈರ್ ಅಥವಾ ಯುಪಿಎಸ್ ಇತ್ತು ಅದರಿಂದ ಆಗಿರಬಹುದು. ಆದ್ರೆ ನಿಖರ ಕಾರಣ ಗೊತ್ತಿಲ್ಲ ಎಂದು ಹೇಳಿದರು.
ಅಧಿಕಾರಿಗಳು ಕೊಟ್ಟಿರು ಮಾಹಿತಿ ಪ್ರಕಾರ, ಇಲ್ಲಿ ಯಾವುದೇ ಸುರಕ್ಷತೆ ಕ್ರಮ ವಹಿಸಿರಲಿಲ್ಲ. ಸೆಪ್ಟೆಂಬರ್ ನಲ್ಲಿ ಲೈಸನ್ಸ್ ಅನ್ನು ರಿನೀವಲ್ ಮಾಡಿದ್ದಾರೆ. 13/10/2028 ವರೆಗೆ ಲೈಸನ್ಸ್ ರಿಲೀವಲ್ ಮಾಡಿದ್ದಾರೆ. ಮತ್ತೊಂದು ಲೈಸೆನ್ಸ್ 18/01/2021 ನಲ್ಲೆ ರಿನೀವಲ್ ಆಗಿ 2026 ವರೆಗೆ ಇದೆ. ಒಟ್ಟು ಎರಡು ಲೈಸನ್ಸ್ ಇದೆ. ಜಯಮ್ಮ ಅನ್ನೋರ ಹೆಸರಿನಲ್ಲಿ ಜಾಗ ಇದೆ. ಘಟನೆಯಲ್ಲಿ ಒಟ್ಟು 14 ಜನ ಮೃತಪಟ್ಟಿದ್ದಾರೆ ಅನ್ನೋದನ್ನು ಖಚಿತ ಪಡಿಸಿದರು.
The post ಅತ್ತಿಬೆಲೆ ಪಟಾಕಿ ದುರಂತ ಕೇಸ್, ಇದೊಂದು ಅತ್ಯಂತ ದುರಾದುಷ್ಟ ಎಂದ CM ಸಿದ್ದರಾಮಯ್ಯ appeared first on Ain Live News.