Home Uncategorized ಅನ್ನಭಾಗ್ಯಕ್ಕೆ ಹಣದ ಕೊರತೆ ಇಲ್ಲ, ಅಕ್ಕಿಗಾಗಿ ನೆರೆ ರಾಜ್ಯಗಳೊಂದಿಗೆ ಮಾತುಕತೆ: ಕೆಹೆಚ್ ಮುನಿಯಪ್ಪ

ಅನ್ನಭಾಗ್ಯಕ್ಕೆ ಹಣದ ಕೊರತೆ ಇಲ್ಲ, ಅಕ್ಕಿಗಾಗಿ ನೆರೆ ರಾಜ್ಯಗಳೊಂದಿಗೆ ಮಾತುಕತೆ: ಕೆಹೆಚ್ ಮುನಿಯಪ್ಪ

43
0

ಅನ್ನಭಾಗ್ಯ ಯೋಜನೆಗಾಗಿ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡದೇ ಇರುವ ವಿಚಾರವಾಗಿ ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ಮುಂದುವರೆದಿದೆ. ಅನ್ನಭಾಗ್ಯ ಯೋಜನೆಗಾಗಿ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡದೇ ಇರುವ ವಿಚಾರವಾಗಿ ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ಮುಂದುವರೆದಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಹೆಚ್ ಮುನಿಯಪ್ಪ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಖರ್ಚು ಮಾಡಲು ರಾಜ್ಯಕ್ಕೆ ಹಣದ ಕೊರತೆ ಇಲ್ಲ ನಾವು ಬಡವರಿಗೆ ಆಹಾರ ಒದಗಿಸುತ್ತೇವೆ ಎಂದು ಮುನಿಯಪ್ಪ ಹೇಳಿದ್ದಾರೆ. 

ಐಎಎನ್ಎಸ್ ಜೊತೆ ಮಾತನಾಡಿರುವ ಮುನಿಯಪ್ಪ, ಸಮಸ್ಯೆ ಸೃಷ್ಟಿಸಿದ್ದು ಕೇಂದ್ರ ಸರ್ಕಾರ. ಮೊದಲು ಭರವಸೆ ನೀಡಿ ಆ ನಂತರ ಜೂ.13 ರಂದು ನಿರಾಕರಿಸಿದರು. ಬಡವರ ಅನ್ನದ ಮೇಲೆ ರಾಜಕೀಯ ಮಾಡಿದರು ಎಂದು ಆರೋಪಿಸಿದ್ದಾರೆ.

“ನಾವು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಪ್ರಯತ್ನಿಸುತ್ತೇವೆ, ವಿಳಂಬವಾಗಬಹುದು ಆದರೆ ನಾವು ಖಂಡಿತವಾಗಿಯೂ ಜನರಿಗೆ ಅಕ್ಕಿ ನೀಡುತ್ತೇವೆ. ನಾವು ಇತರ ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತೇವೆ ಮತ್ತು 10 ರಿಂದ 15 ದಿನಗಳಲ್ಲಿ ಅದನ್ನು ಅಂತಿಮಗೊಳಿಸುತ್ತೇವೆ. ಹಣ ಕೂಡ ಸಿದ್ಧವಾಗಿದೆ” ಎಂದು ಸಚಿವರು ಹೇಳಿದ್ದಾರೆ. 

LEAVE A REPLY

Please enter your comment!
Please enter your name here