ಹೊಸದಿಲ್ಲಿ: ಅರಬ್ಬೀ ಸಮುದ್ರದಲ್ಲಿ ಅಪಹರಣಕ್ಕೀಡಾಗಿದ್ದ ಇರಾನ್ ಮೀನುಗಾರಿಕೆ ನೌಕೆಯನ್ನು ಭೇದಿಸುವಲ್ಲಿ ಭಾರತೀಯ ನೌಕಾಪಡೆಯ ಎರಡು ಯುದ್ಧನೌಕೆಗಳು ಯಶಸ್ವಿಯಾಗಿವೆ ಎಂದು ಭಾರತೀಯ ನೌಕಾಪಡೆ ಶುಕ್ರವಾರ ಪ್ರಕಟಿಸಿದೆ.
ಗುರುವಾರ ಈ ರಕ್ಷಣಾ ಕಾರ್ಯಾಚರಣೆಗಾಗಿ ಎರಡು ಯುದ್ಧನೌಕೆಗಳು ತೆರಳಿದ್ದು, ಶನಿವಾರ ಅಪಹರಣಕ್ಕೀಡಾದ ನೌಕೆಯನ್ನು ಭೇದಿಸಲು ಸಾಧ್ಯವಾಯಿತು. ಅಪಹೃತ ನೌಕೆ ಮತ್ತು ಅದರ ಸಿಬ್ಬಂದಿಯ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.
ಕಳೆದ 100 ದಿನಗಳಲ್ಲಿ ಭಾರತೀಯ ನೌಕಾಪಡೆ ಕೈಗೊಂಡಿರುವ ಕಡಲ್ಗಳ್ಳತನ ವಿರುದ್ಧದ ಸರಣಿ ಕಾರ್ಯಾಚರಣೆಯಲ್ಲಿ ಇದು ಇತ್ತೀಚಿನ ನಿದರ್ಶನವಾಗಿದೆ.
ಇರಾನ್ ನ ‘ಅಲ್ ಕಂಬರ್ 786’ ಮೀನುಗಾರಿಕೆ ನೌಕೆಯನ್ನು ಕಡಲ್ಗಳ್ಳರು ಮಾರ್ಚ್ 28ರಂದು ಸಂಜೆ ಅಪಹರಿಸಿರಬೇಕು ಎಂಬ ಸುಳಿವಿನ ಆಧಾರದಲ್ಲಿ ಭಾರತೀಯ ನೌಕಾಪಡೆಯ ಎರಡು ಹಡಗುಗಳನ್ನು ಅರಬ್ಬಿಸಮುದ್ರದಲ್ಲಿ ಸಾಗರ ಭದ್ರತಾ ಕಾರ್ಯಾಚರಣೆಗಾಗಿ ಕಳುಹಿಸಿಕೊಡಲಾಗಿತ್ತು. ಅಪಹರಣಕ್ಕೀಡಾದ ನೌಕೆಯನ್ನು ಪತ್ತೆ ಮಾಡುವಲ್ಲಿ ಇವು ಯಶಸ್ವಿಯಾಗಿವೆ” ಎಂದು ನೌಕಾಪಡೆ ಹೇಳಿಕೆ ನೀಡಿದೆ.
ಮೀನುಗಾರಿಕಾ ನೌಕೆ ಸೊಕೊಟ್ರಾದಿಂದ ಸುಮಾರು 90 ನಾಟಿಕಲ್ ಮೈಲು ದೂರದಲ್ಲಿದ್ದು ಇತ್ತು ಹಾಗೂ ಇದರಲ್ಲಿ ಒಂಬತ್ತು ಮಂದಿ ಸಶಸ್ತ್ರ ಕಡಲ್ಗಳ್ಳರು ಇದ್ದರು ಎಂದು ವಿವರಿಸಿದೆ.