Home ಕರ್ನಾಟಕ ಅಬಕಾರಿ ನೀತಿ ಪ್ರಕರಣ: ಮತ್ತೊಬ್ಬ ದಿಲ್ಲಿ ಸಚಿವನಿಗೆ ಈಡಿ ಸಮನ್ಸ್

ಅಬಕಾರಿ ನೀತಿ ಪ್ರಕರಣ: ಮತ್ತೊಬ್ಬ ದಿಲ್ಲಿ ಸಚಿವನಿಗೆ ಈಡಿ ಸಮನ್ಸ್

28
0

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ದಿಲ್ಲಿ ಸಾರಿಗೆ ಸಚಿವ ಹಾಗೂ ಆಪ್ ನಾಯಕ ಕೈಲಾಶ್ ಗೆಹ್ಲೋಟ್ ಅವರಿಗೆ ಜಾರಿ ನಿರ್ದೇಶನಾಲಯವು (ಈಡಿ) ಸಮನ್ಸ್ ಜಾರಿಗೊಳಿಸಿದೆ. ಇದೇ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 21ರಂದು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.

2021-22ರಲ್ಲಿ ಸದ್ಯ ರದ್ದುಗೊಂಡಿರುವ ದಿಲ್ಲಿ ಅಬಕಾರಿ ನೀತಿ ಕರಡನ್ನು ರಚಿಸಿದ ಸಮಿತಿಯಲ್ಲಿ ನಜಾಫ್ ಗಢದ ಶಾಸಕರೂ ಆಗಿರುವ ಗೆಹ್ಲೋಟ್ ಭಾಗವಾಗಿದ್ದರು.

ಅಬಕಾರಿ ನೀತಿಯ ಕರಡು ರಚನೆಯಾಗುವಾಗ ಆಪ್ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥರಾಗಿರುವ ವಿಜಯ್ ನಾಯರ್ ಅವರಿಗೆ ಗೆಹ್ಲೋಟ್ ತಮ್ಮ ಅಧಿಕೃತ ನಿವಾಸದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ.

ಇದಕ್ಕೂ ಮುನ್ನ, ಗೆಹ್ಲೋಟ್ ತಮ್ಮ ಮೊಬೈಲ್ ಸಂಖ್ಯೆಗಳನ್ನು ಪದೇ ಪದೇ ಬದಲಾಯಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು.

LEAVE A REPLY

Please enter your comment!
Please enter your name here