Home Uncategorized ಅಮಿತ್ ಶಾ ರಿಗೆ ದೇವೇಗೌಡರನ್ನು ಅಡ ಇಡುತ್ತಿರುವ HDK – ಸಿಎಂ ಇಬ್ರಾಹಿಂ

ಅಮಿತ್ ಶಾ ರಿಗೆ ದೇವೇಗೌಡರನ್ನು ಅಡ ಇಡುತ್ತಿರುವ HDK – ಸಿಎಂ ಇಬ್ರಾಹಿಂ

22
0

ನವದೆಹಲಿ ;- ಅಮಿತ್ ಶಾ ರಿಗೆ ದೇವೇಗೌಡರನ್ನು HD ಕುಮಾರಸ್ವಾಮಿ ಅವರು ಅಡ ಇಡುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಕೈ ಮುಗಿದು ಹೇಳ್ತೇನೆ ಬೇಡ, 91 ವರ್ಷ ಆಗಿದೆ ನಿಮಗೆ. ಅಟಲ್ ಬಿಹಾರಿ ವಾಜಪೇಯಿ ನಿಮಗೆ ಬೆಂಬಲ ಕೊಡ್ತೀನಿ ಅಂದಾಗ್ಲೇ ನೀವ್ ಬಿಟ್ಟು ಬಂದವರು. ಈಗ ಏನ್ ಪರಿಸ್ಥಿತಿ ಬಂದಿದೆ ನಿಮಗೆ. ಕೆಂಪೇಗೌಡ್ರ ನಾಡು ನಮ್ಮ ಕರ್ನಾಟಕ. ಕುಮಾರಸ್ವಾಮಿಗೆ ಬುದ್ಧಿ ಹೇಳಿ. ನಾವು ಇಂಡಿಪೆಂಡೆಂಟ್ ಆಗಿ ನಿಂತರೂ ಸಹ 3 ಸ್ಥಾನ ಗೆಲ್ಲುತ್ತೇವೆ. ಆದ್ರೆ ಇವ್ರ ಜೊತೆ ಹೋದ್ರೆ 1 ಸೀಟ್ ಸಹ ನಾವು ಗೆಲ್ಲೋಲ್ಲ. ಮದುವೆಗೇ ಬ್ರಾಹ್ಮಣರು ಬರ್ತಾ ಇಲ್ಲಾ, ಇನ್ನು ಒಕ್ಕಲಿಗರಿಗೆ ವೋಟ್ ಹಾಕೋಕೆ ಬರ್ತಾರಾ ಎಂದು ಪ್ರಶ್ನಿಸಿದರು.

ಜನತಾ ದಳದ ಎಲ್ಲಾ ರಾಜ್ಯದ ನಾಯಕರು ಒಟ್ಟಾಗಿ ಸೇರಿ ಮೀಟಿಂಗ್ ಮಾಡ್ತಾ ಇದ್ದೇವೆ. ಕೇರಳ, ಮಹಾರಾಷ್ಟ್ರ, ಬಿಹಾರ್ ರಾಜ್ಯದ ಜನತಾದಳದ ನಾಯಕರ ಜೊತೆ ಸಭೆ ಮಾಡ್ತಾ ಇದ್ದೇನೆ. ನಾಳೆ ಮೀಟಿಂಗ್ ಮಾಡ್ತೇವೆ, ಜನತಾದಳ ನಮ್ದೇ ಒರಿಜಿನಲ್ ಸ್ಟ್ರೆಂತ್. ಮೀಟಿಂಗ್ ಮಾಡಿ ನಾವು ದೇವೇಗೌಡ್ರಿಗೆ ಹೇಳ್ತೇವೆ. ನೀವು ಹಿರಿಯರು ಇದ್ದೀರಿ, ನಿಮ್ಮನ್ನು ನಾವು ತಂದೆ ಸ್ಥಾನದಲ್ಲಿ ಕಾಣ್ತಾ ಇದ್ದೇವೆ. ಕರ್ನಾಟಕದಿಂದ ಹೋದ ಏಕೈಕ ಪ್ರಧಾನ ಮಂತ್ರಿ. ಮಕ್ಕಳ ಮಾತು ಕೇಳಿ ಹಾಳಾಗಬೇಡಿ. ದೇಶ ಮುಖ್ಯ, ನಾವು ನಿಮ್ಮ ಮಕ್ಕಳಂತೆ ಎಂದು ಇಬ್ರಾಹಿಂ ಹೇಳಿದರು.

The post ಅಮಿತ್ ಶಾ ರಿಗೆ ದೇವೇಗೌಡರನ್ನು ಅಡ ಇಡುತ್ತಿರುವ HDK – ಸಿಎಂ ಇಬ್ರಾಹಿಂ appeared first on Ain Live News.

LEAVE A REPLY

Please enter your comment!
Please enter your name here