Home Uncategorized ಅಮೆಜಾನ್ ಗೇ ಬೃಹತ್ ಧೋಖಾ; ಹ್ಯಾಕರ್​ಗಳ ಕಾಟಕ್ಕೆ ಅಧಿಕಾರಿಗಳು ಹೈರಾಣ, ಯಶವಂತಪುರ ಪೊಲೀಸರ ತನಿಖೆ ವೇಳೆ...

ಅಮೆಜಾನ್ ಗೇ ಬೃಹತ್ ಧೋಖಾ; ಹ್ಯಾಕರ್​ಗಳ ಕಾಟಕ್ಕೆ ಅಧಿಕಾರಿಗಳು ಹೈರಾಣ, ಯಶವಂತಪುರ ಪೊಲೀಸರ ತನಿಖೆ ವೇಳೆ ಕಳ್ಳಾಟ ಬಯಲು, ಓರ್ವನ ಬಂಧನ

9
0

ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಗೂ ಹ್ಯಾಕರ್​ಗಳ ಕಾಟ ತಪ್ಪಿಲ್ಲ. ಕಂಪನಿಯ ಅಕೌಂಟ್​​ ಅನ್ನು ಹ್ಯಾಕ್​ ಮಾಡಿ ಹ್ಯಾಕರ್​​​ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ ಆರೋಪದ ಮೇರೆಗೆ ಯಶವಂತಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು: ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಗೂ ಹ್ಯಾಕರ್​ಗಳ ಕಾಟ ತಪ್ಪಿಲ್ಲ. ಕಂಪನಿಯ ಅಕೌಂಟ್​​ ಅನ್ನು ಹ್ಯಾಕ್​ ಮಾಡಿ ಹ್ಯಾಕರ್​​​ಗಳು ಲಕ್ಷ ಲಕ್ಷ ರೂಪಾಯಿ ಹಣ ವಂಚಿಸಿದ ಆರೋಪದ ಮೇರೆಗೆ ಯಶವಂತಪುರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
 
ಅಮೆಜಾನ್‌ ಕಂಪನಿಯಿಂದ ಗ್ರಾಹಕರ ಸೋಗಿನಲ್ಲಿ ದುಬಾರಿ ಮೌಲ್ಯದ ಮೊಬೈಲ್‌ಗಳನ್ನು ಖರೀದಿಸಿ ಬಳಿಕ ಮರಳಿಸುವಂತೆ ವಂಚನೆ ಎಸಗುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಜಾಲವನ್ನು ಪತ್ತೆ ಹಚ್ಚಿದ ಯಶವಂತಪುರ ಠಾಣೆ ಪೊರೀಸರು, ಈ ಸಂಬಂಧ ನಗರದ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ. ಮತ್ತಿಕೆರೆ ನಿವಾಸಿ ಚಿರಾಗ್‌ ಗುಪ್ತಾ ಬಂಧಿತನಾಗಿದ್ದು, ಆರೋಪಿಯಿಂದ ಬ್ಯಾಂಕ್‌ ಖಾತೆಯಲ್ಲಿ 30 ಲಕ್ಷ ರೂ. ನಗದು, 26.34 ಲಕ್ಷರು ಮೌಲ್ಯದ 16 ಅ್ಯಪಲ್‌ ಐಫೋನ್‌, ಮ್ಯಾಕ್‌ಬುಕ್‌, ಕಂಪ್ಯೂ ಟರ್‌ ಡೆಸ್ಕ್‌ಟಾಪ್‌, ಗೇಮಿಂಗ್‌ ‘ಲ್ಯಾಪ್‌ಟಾಪ್‌, ಏರ್ಪಾಡ್, 2.5 ಲಕ್ಷ ರೂ ನಗದು ಜಪ್ತಿ ಮಾಡಲಾಗಿದೆ.

ವಂಚನೆಗೂ ಶೇ.20 ರಷ್ಟು ಕಮಿಷನ್‌
ಪೊಲೀಸ್ ಮೂಲಗಳ ಪ್ರಕಾರ ನಗರದ ಖಾಸಗಿ ಎಂಜಿನಿಯರ್‌ ಕಾಲೇಜಿನಲ್ಲಿ ಓದುತ್ತಿರುವ ಮಹಾರಾಷ್ಟ್ರ ಮೂಲದ ಚಿರಾಗ್‌ ಗುಪ್ತಾ ಮತ್ತಿಕೆರೆ ಸಮೀಪ ಪಿಜಿಯಲ್ಲಿ ನೆಲೆಸಿದ್ದ. ಕೆಲ ದಿನಗಳ ಹಿಂದೆ ಆತತಿಗೆ ಟೆಲಿಗ್ರಾಂ ಅ್ಯಪ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಜಾಲದ ಸಂಪರ್ಕವಾಗಿದೆ. ಬಳಿಕ ಚಿರಾಗ್‌ಗೆ ಹಣದಾಸೆ ತೋರಿಸಿದ ಆತ, ಅಮೆಜಾನ್‌ನಲ್ಲಿ ಗ್ರಾಹಕನ ಸೋಗಿನಲ್ಲಿ ದುಬಾರಿ ಮೌಲ್ಯದ ಐಪೋನ್‌ ಗಳನ್ನು ಬುಕ್‌ ಮಾಡಿ ವಂಚಿಸುವ ಟಾಸ್ಕ್‌ ನೀಡಿದ್ದ. ಇದಕ್ಕೆ ಶೇ.10 ರಿಂದ 20 ರಷ್ಟು ಕಷನ್‌ ಆಮಿಪವೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಹೇಗೆ?
ಅಮೆಜಾನ್‌ನಲ್ಲಿ ಆನ್‌ಲೈನ್‌ ಮೂಲಕ ಐಫೋನ್‌ ಅನ್ನು ಚಿರಾಗ್‌ ಬುಕ್‌ ಮಾಡುತ್ತಿದ್ದ. ತನಗೆ ಮೊಬೈಲ್‌ ತಲುಪಿದ ಬಳಿಕ ಚಿರಾಗ್‌ ಆ ಮೊಬೈಲ್‌ ಅನ್ನು ಮರಳಿಸುವುದಾಗಿ ಅಮೆಜಾನ್‌ ಅ್ಯಪ್‌ನಲ್ಲಿ ದಾಖಲಿಸುತ್ತಿದ್ದ. ಆ ವೇಳೆ ಅಮೆಜಾನ್‌ ಅ್ಯಪ್‌ ಅನ್ನು ಹ್ಯಾಕ್‌ ಮಾಡಿ ಚಿರಾಗ್‌ನಿಂದ ಮೊಬೈಲ್‌ ‘ಸ್ವೀಕೃತವಾಗಿದೆ. ಎಂದು… ಚಿರಾಗ್‌ನ ಪರಿಚಿತ ಹ್ಯಾಕರ್‌ ನಮೂದಿಸುತ್ತಿದ್ದ. ಆದರೆ ಆ ಮೊಬೈಲ್‌ ಚಿರಾಗ್‌ ಬಳಿಯೇ ಇರುತ್ತಿತ್ತು. ಅಲ್ಲದೆ ಅಮೆಜಾನ್‌ ನಿಂದ ರೀಫಂಡ್‌ ಸಹ ಆಗುತ್ತಿತ್ತು. ಹೀಗೆ ಸಂಪಾದಿಸಿದ ಹಣದಲ್ಲಿ ಶೇ.28ರಷ್ಟು ಕಮಿಷನ್‌ ಚಿರಾಗ್‌ ಲಭಿಸಿದರೆ, ಇನ್ನುಳಿದ ಹಣ ಹ್ಯಾಕರ್ ಕೈಗೆ ತಲುಪುತ್ತಿತ್ತು.

ಇದನ್ನೂ ಓದಿ: ಅನ್ಯಧರ್ಮೀಯರಿಗೆ ವ್ಯಾಪಾರ ನಿಷೇಧ: ಹಿಂದೂ ವ್ಯಾಪಾರಿಗಳ ಹೆಸರಲ್ಲಿ ಶೀಘ್ರದಲ್ಲೇ ಸಂಘ ಅಸ್ತಿತ್ವಕ್ಕೆ!

ಇದೇ ರೀತಿ ಮೇ.15 ರಂದು ನಾಲ್ಕು ಐಫೋನ್‌ಗಳನ್ನು ಚಿರಾಗ್‌ ಬುಕ್‌ ಮಾಡಿ ವಂಚಿಸಿ ಹಣ ಲಪಟಾಯಿಸಿದ್ದ. ಈ ಬಗ್ಗೆ ಶಂಕೆಗೊಂಡ ಅಮೆಜಾನ್‌ ಕಂಪನಿಯ ಪ್ರತಿನಿಧಿಗಳು ಒಂದೇ ವಿಳಾಸಕ್ಕೆ ಗ್ರಾಹಕನಿಗೆ ತಲುಪಿದ ಫೋನ್‌ಗಳಲ್ಲಿ ವಂಚನೆಯಾಗಿರುವುದುನ್ನು ಪತ್ತೆ ಮಾಡಿ ಆಂತರಿಕ ತನಿಖೆ ಮಾಡಿದ್ದಾರೆ. ಬಳಿಕ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್‌ ಕೆ.ಸುರೇಶ್‌, ಸಬ್‌ ಇನ್ಸ್‌ಪೆಕ್ಟರ್‌ ನಿತ್ಯಾನಂದ ನೇತೃತ್ವದ ತಂಡವು, ಚಿರಾಗ್ ನನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಮೋಸದ ಜಾಲ ಬಯಲಾಗಿದೆ ಎಂದು ಅಧಿಕಾರಿಗಳು ಹೆಳಿದ್ದಾರೆ.

ವಂಚನೆ ಜಾಲದಲ್ಲಿ ಮತ್ತಷ್ಟು ವಿದ್ಯಾರ್ಥಿಗಳು?
ಹಣದಾಸೆಗೆ ಈ ವಂಚನೆ ಜಾಲದಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಸಕ್ರಿಯವಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಅನುಮಾನದ ಮೇರೆಗೆ 13ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ಸಹ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ದೇಶದ 25ಕ್ಕೂ ಹೆಚ್ಚು ಪೊಲೀಸ್​​ ಠಾಣೆಗಳಲ್ಲಿ ಅಮೆಜಾನ್ ಕಂಪನಿಯ ಅಧಿಕಾರಿಗಳು ದೂರು ನೀಡಿದ್ದಾರೆ. ಆದರೆ ಆರೋಪಿಗಳನ್ನು ಪತ್ತೆ ಮಾಡಿದ್ದು ಮಾತ್ರ ಯಶವಂತಪುರ ಠಾಣೆ ಪೊಲೀಸರು. ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ 13 ಜನರನ್ನು ಪತ್ತೆ ಮಾಡಿದ್ದು, ಬೆಂಗಳೂರಿನಲ್ಲೇ ನಾಲ್ಕೈದು ತಂಡ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸೈಬರ್ ವಂಚಕರ ಕಪಿಮುಷ್ಠಿಗೆ ಸಿಲುಕಿದ ದಕ್ಷಿಣ ಕನ್ನಡದ ವ್ಯಕ್ತಿ: ಸೌದಿಯಲ್ಲಿ ಬಂಧನ

ಸಂಸ್ಥೆಯ ನೌಕರನ ಕೈವಾಡ ಶಂಕೆ
ಅಮೆಜಾನ್‌ ಕಂಪನಿಯ ಆ್ಯಪ್ ಅನ್ನು ಹ್ಯಾಕ್‌ ಮಾಡುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿದೆ. ಹೀಗಾಗಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಗೆ ಅಮೇಜಾನ್‌ ಕಂಪನಿಯೊಳಗೆ ಕೆಲವರು ನೆರವು ನೀಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here