ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(IAEA) ಮಂಗಳವಾರ ಇರಾನ್ನ ಇಸ್ಫಹಾನ್ ಪ್ರಾಂತ್ಯದಲ್ಲಿನ ನಟಾಂಜ್ ಪರಮಾಣು ಸ್ಥಾವರ(ಶಾಹಿದ್ ಅಹ್ಮದಿ ರೋಶನ್)ಕ್ಕೆ ಹಾನಿಯಾಗಿದೆ ಎಂದು ದೃಢಪಡಿಸಿದೆ. ಆದರೆ ಅಮೆರಿಕ ದಾಳಿಯಿಂದ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಹೇಳಿದೆ.
ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ನಟಾಂಜ್ನಲ್ಲಿರುವ ಭೂಗತ ಪರಮಾಣು ಸೌಲಭ್ಯದ ಪ್ರವೇಶ ಕಟ್ಟಡಗಳು ಹಾನಿಗೆ ಒಳಗಾಗಿರುವುದನ್ನು ಉಪಗ್ರಹ ಚಿತ್ರದಲ್ಲಿ ಕಾಣಬಹುದಾಗಿದೆ ಎಂದು IAEA ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಆದಾಗ್ಯೂ, ಜೂನ್ನಲ್ಲಿ ನಡೆದ ಸಂಘರ್ಷದ ಸಮಯದಲ್ಲಿ ತೀವ್ರವಾಗಿ ಹಾನಿಗೊಳಗಾದ ಮುಖ್ಯ ಇಂಧನ ಪುಷ್ಟೀಕರಣ ಸ್ಥಾವರದಲ್ಲಿ ಯಾವುದೇ ವಿಕಿರಣ ಸೋರಿಕೆಯಾಗಿಲ್ಲ ಮತ್ತು ಯಾವುದೇ ಹೆಚ್ಚುವರಿ ಪರಿಣಾಮ ಪತ್ತೆಯಾಗಿಲ್ಲ ಎಂದು ಅದು ಹೇಳಿದೆ.
ಇದಕ್ಕೂ ಮೊದಲು, ನಟಾಂಜ್ ಯುರೇನಿಯಂ ಸಂಸ್ಕರಣ ಘಟಕವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ವೈಮಾನಿಕ ದಾಳಿ ನಡೆಸಿವೆ ಎಂದು ಇನ್ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್ ವರದಿ ಮಾಡಿತ್ತು.
ವಿಶ್ಲೇಷಣೆಯ ಪ್ರಕಾರ, ದಾಳಿಯಲ್ಲಿ ಕನಿಷ್ಠ ಮೂರು ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ.
