Home Uncategorized ಅರಣ್ಯ ಭೂಮಿ ಮೇಲೆ ಬರದ ಪರಿಣಾಮ ಕುರಿತು ಶೀಘ್ರದಲ್ಲೇ ಸಮೀಕ್ಷೆ: ಸಚಿವ ಈಶ್ವರ್ ಖಂಡ್ರೆ

ಅರಣ್ಯ ಭೂಮಿ ಮೇಲೆ ಬರದ ಪರಿಣಾಮ ಕುರಿತು ಶೀಘ್ರದಲ್ಲೇ ಸಮೀಕ್ಷೆ: ಸಚಿವ ಈಶ್ವರ್ ಖಂಡ್ರೆ

33
0

ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಸಮೀಕ್ಷೆಯನ್ನು ಕೇಂದ್ರ ತಂಡ ಪೂರ್ಣಗೊಳಿಸಿದ್ದು, ರಾಜ್ಯದ  ಅರಣ್ಯಗಳ ಮೇಲೆ ಬರ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಮತ್ತೊಂದು ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಅವರು ಸೋಮವಾರ ಹೇಳಿದರು. ಬೆಂಗಳೂರು: ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಸಮೀಕ್ಷೆಯನ್ನು ಕೇಂದ್ರ ತಂಡ ಪೂರ್ಣಗೊಳಿಸಿದ್ದು, ರಾಜ್ಯದ  ಅರಣ್ಯಗಳ ಮೇಲೆ ಬರ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಮತ್ತೊಂದು ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಅವರು ಸೋಮವಾರ ಹೇಳಿದರು.

ಅರಣ್ಯ ಇಲಾಖೆಯು ನಗರದಲ್ಲಿ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಅರಣ್ಯಗಳ ಮೇಲೆ ಬರಗಾಲದ ಪರಿಣಾಮದ ಪ್ರಮಾಣವನ್ನು ನಿರ್ಣಯಿಸಲು ಸಮೀಕ್ಷೆ ನಡೆಸಲು ಚಿಂತನೆ ನಡೆಸಲಾಗಿದ್ದು, ಮಂಗಳವಾರ ನಡೆಯಲಿರುವ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ನೆನೆಗುದಿಗೆ ಬಿದ್ದಿರುವ ಹೊನ್ನಾವರ ಬಂದರು ಯೋಜನೆ ಆರಂಭಿಸಲು ಕ್ರಮ: ಈಶ್ವರ್ ಖಂಡ್ರೆ

ಅನಾವೃಷ್ಟಿ ಮತ್ತು ದೀರ್ಘಾವಧಿಯ ಒಣಹವೆಗಳು ಕೇವಲ ಹುಲ್ಲುಗಾವಲುಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ,  ಕಾಡುಗಳ ಒಳಗೆ ಮತ್ತು ಕೃಷಿ ಚಟುವಟಿಕೆಗು, ಪ್ರಾಣಿ, ಜಲಚರಗಳ ಮೇಲೂ ಪರಿಣಾಮ ಬೀರಿದೆ. ಬರದ ಪರಿಣಾಮ ಅರಣ್ಯದೊಳಗಿನ ಜಲಮೂಲಗಳು ಒಣಗುತ್ತಿದ್ದು, ಪ್ರಾಣಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿರುವುದರಿಂದ ಸಮೀಕ್ಷೆ ನಡೆಸುವುದು ಅಗತ್ಯವಾಗಿದೆ, ಸಮೀಕ್ಷೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಆನೆಗಳ ದಾಳಿಯಿಂದಾಗಿ ಸಕಲೇಶಪುರದ 400 ಕ್ಕೂ ಹೆಚ್ಚು ರೈತರು ತಮ್ಮ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಜಮೀನುಗಳನ್ನು ಇತರರು ಖರೀದಿ ಮಾಡಲು ಮುಂದೆ ಬರುತ್ತಿಲ್ಲ. 3000 ಎಕರೆಗಳಷ್ಟು ವಿಸ್ತಾರವಾಗಿರುವ ಅರಣ್ಯ ಪ್ರದೇಶಗಳ ಪಕ್ಕದ ಜಮೀನುಗಳನ್ನು ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮತ್ತೆ 43 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ ರಾಜ್ಯ ಸರ್ಕಾರ

ಅರಣ್ಯ ಪ್ರದೇಶವನ್ನು ಶೇ.33ಕ್ಕೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈ ನಿಟ್ಟಿನಲ್ಲಿ ರೈತರ  ಭೂಮಿಯನ್ನು ಖರೀದಿಸಲು ವೆಚ್ಚ ಮತ್ತು ಕಾನೂನು ತೊಡಕುಗಳನ್ನು ಪರಿಶೀಲಿಸಲಾಗುತ್ತಿದೆ. ಭೂಮಿ ಖರೀದಿಸುವ  ಅಂತಿಮ ನಿರ್ಧಾರವನ್ನು ಅಂತಿಮವಾಗಿ ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಮಕ್ಕಳು ಮತ್ತು ಯುವಕರು ಪರಿಸರ ಮತ್ತು ಸಂರಕ್ಷಣಾ ಚಟುವಟಿಕೆಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ, ಇದರಂತೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಪರಿಸರ ಶಿಕ್ಷಣವನ್ನು ಪರಿಚಯಿಸಬೇಕಿದೆ. ಜನಸಂಖ್ಯೆ ಹೆಚ್ಚಾದಂತೆ ಭೂಮಿಯ ಬೇಡಿಕೆಯೂ ಹೆಚ್ಚುತ್ತಿದೆ. ಹೀಗಾಗಿ ಅರಣ್ಯಗಳ ಸಂರಕ್ಷಣಾ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here