Home Uncategorized ಅರೆಕಾಲಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಅರೆಕಾಲಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

28
0

ಮಂಗಳೂರು,ಜ.6: ನಗರದ ಬೋಂದೆಲ್‌ನಲ್ಲಿರುವ ಸರಕಾರಿ ಬಾಲಕ ಬಾಲ ಮಂದಿರಕ್ಕೆ ಅರೆಕಾಲಿಕ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಥ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

1.ಎಜುಕೇಟರ್ : ವಿದ್ಯಾರ್ಹತೆ ಬಿಎಸ್ಸಿ/ಬಿಇಡಿ. 2. ದೈಹಿಕ ಶಿಕ್ಷಣ ಶಿಕ್ಷಕರು : ಬಿಪಿಎಡ್/ದೈಹಿಕ ಶಿಕ್ಷಣದಲ್ಲಿ ಡಿಪ್ಲೋಮಾ. 3. ಸಂಗೀತ ಶಿಕ್ಷಕರು : ಎಸೆಸೆಲ್ಸಿ ಹಾಗೂ ಸರಕಾರದಿಂದ ನಡೆಸಲ್ಪಡುವ ಸಂಗೀತ ವಿಷಯದಲ್ಲಿ ವೃತ್ತಿಪರ ಪ್ರವೀಣ/ವಿದ್ವತ್/ವಿದ್ವಾನ್ ಪರೀಕ್ಷೆ ಅಥವಾ ಈ ಪರೀಕ್ಷೆಗಳಿಗೆ ತತ್ಸಮಾನ ಪರೀಕ್ಷೆ ಎಂದು ಸರಕಾರವು ಮಾನ್ಯತೆ ನೀಡಿರುವ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.

ಅರ್ಹ ಅಭ್ಯರ್ಥಿಗಳು ದಾಖಲೆಗಳೊಂದಿಗೆ ಜನವರಿ 17ರ ಒಳಗೆ ಅರ್ಜಿಯನ್ನು ಖುದ್ದಾಗಿ ಬಾಲಕರ ಬಾಲಮಂದಿರ ಕೃಷ್ಣ ನಗರ, ಬೊಂದೇಲ್ ಮಂಗಳೂರು ಈ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 0824-2485401ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here