Home Uncategorized ಅವಧಿ ಮೀರಿದ ಔಷಧಿ, ಸೌಂದರ್ಯ ವರ್ಧಕಗಳ ಮಾರಾಟ: ತಂದೆ-ಮಗ ಬಂಧನ

ಅವಧಿ ಮೀರಿದ ಔಷಧಿ, ಸೌಂದರ್ಯ ವರ್ಧಕಗಳ ಮಾರಾಟ: ತಂದೆ-ಮಗ ಬಂಧನ

30
0

ಅವಧಿ ಮೀರಿದ ಔಷಧಿ ಹಾಗೂ ಸೌಂದರ್ಯ ವರ್ಧಕಗಳನ್ನು ಮಾರಾಟ ಮಾಡುತ್ತಿದ್ದ ಔಷಧಿ ಮಾರ್ಕೆಟಿಂಗ್ ಕಂಪಿಯ ಮಾಲೀಕ ಹಾಗೂ ಆತನ ಮಗನನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ಅವಧಿ ಮೀರಿದ ಔಷಧಿ ಹಾಗೂ ಸೌಂದರ್ಯ ವರ್ಧಕಗಳನ್ನು ಮಾರಾಟ ಮಾಡುತ್ತಿದ್ದ ಔಷಧಿ ಮಾರ್ಕೆಟಿಂಗ್ ಕಂಪಿಯ ಮಾಲೀಕ ಹಾಗೂ ಆತನ ಮಗನನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ರಾಜಾಜಿನಗರದ 4ನೇ ಹಂತದ ಮೆಡಿಗೇಟ್ಸ್ ಎಲ್ಎಲ್’ಪಿ ಕಂಪನಿಯ ಮಾಲೀಕ ಜೈ ಬಚ್ಚಾವತ್ ಹಾಗೂ ಆತನ ಪುತ್ರ ಅಭಿಷೇಕ್ ಬಚ್ಚಾವತ್ ಬಂಧಿತರಾಗಿದ್ದು, ಆರೋಪಿಗಳಿಂದ ರೂ.1.5 ಕೋಟಿ ಮೌಲ್ಯದ ಅವಧಿ ಮೀರಿದ ವಿಟಮಿನ್ ಸಿ ಬಿ3 ಮಾತ್ರೆಗಳುಳ್ಳ ಸಾವಿರಾರು ಬಾಕ್ಸ್’ಗಳು ಹಾಗೂ ಸೌಂದರ್ಯ ವರ್ಧಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಅವಧಿ ಮೀರಿದ ಔಷಧಿ ಮಾರಾಟದ ಬಗ್ಗೆ ಖಚಿತ ಮಾಹಿತಿ ಕರೆ ಹಾಕಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಇನ್ಸ್ ಪೆಕ್ಟರ್ ರಾಜು ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಗಳನ್ನು ಬಂಧನಕ್ಕೊಳಪಡಿಸಿದೆ.

ಆರೋಪಿಗಳು ಪಂಜಾಬ್, ಹರಿಯಾಣ ಮತ್ತು ಇತರ ಸ್ಥಳಗಳಿಂದ ಔಷಧಗಳು ಮತ್ತು ಸೌಂದರ್ಯವರ್ಧಕಗಳನ್ನು ಖರೀದಿಸುತ್ತಿದ್ದರು. ನಗರ ಮತ್ತು ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೆಡಿಕಲ್ ಸ್ಟೋರ್‌ಗಳಿಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಅವಧಿ ಮೀರಿದ ಔಷಧಗಳು ಮತ್ತು ಸೌಂದರ್ಯವರ್ಧಕಗಳನ್ನು ಮರುಹೊಂದಿಸಿ ಮತ್ತೆ ಮೆಡಿಕಲ್ ಶಾಪ್‌ಗಳಿಗೆ ಸರಬರಾಜು ಮಾಡುತ್ತಿದ್ದರು.

ಆರೋಪಿಗಳು ಯಾವಾಗಿನಿಂದ ಅವಧಿ ಮೀರಿದ ಔಷಧಿಗಳನ್ನು ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದುಬಂದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here