ಹುಬ್ಬಳ್ಳಿ: ಇಲ್ಲಿಯ ಸೋನಿಯಾ ಗಾಂಧಿ ನಗರದ ಅಹಲೆ ಸುನ್ನತ- ವಲ್- ಜಮಾತ ವತಿಯಿಂದ ವಿಶ್ವಶಾಂತಿ ಹಾಗೂ ಯುವ ಜನತೆ ಸನ್ಮಾರ್ಗದಲ್ಲಿ ನಡೆಯುವಂತಾಗಲು ಅ. 13ರಂದು ರಾತ್ರಿ 8ಕ್ಕೆ ಅಶ್ರಫುಲ್ ಔಲಿಯಾ ಸಮ್ಮೇಳನವನ್ನು ನಗರದ ಬಿಡ್ನಾಳ ಸೋನಿಯಾ ಗಾಂಧಿನಗರದ ಸೈಯ್ಯದ್ ಮಖ್ದೂಮ್ ಅಶ್ರಫ್ ಜಹಾಂಗೀರ್ ಸಿಮ್ನಾನಿ ಮಸೀದಿ ಎದುರು ಆಯೋಜಿಸಲಾಗಿದೆ ಎಂದು ಯಲ್ಲಾಪುರ ಓಣಿಯ ಅಲಿ ಮಸೀದ್ನ ಮೌಲಾನಾ ನಹೀಮ್ ಹಜರತ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುನ್ನಿ ಪಂಗಡದ ಆಚಾರ- ವಿಚಾರಗಳು ಹಾಗೂ ಸೂಫಿ ಸಂತರ ಬೋಧನೆಗಳಾದ ಶಾಂತಿ, ನ್ಯಾಯ, ಸಹೋದರತೆ ಹಾಗೂ ಸಮಾನತೆಯ ಸಂದೇಶಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಈ ಮಹಾ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಮದ್ಯಪಾನ, ಧೂಮಪಾನ, ಜೂಜಾಟ, ಗಾಂಜಾ ಮುಂತಾದ ವ್ಯಸನಕ್ಕೆ ಯುವ ಜನತೆ ಬಲಿಯಾಗದಂತೆ ತಡೆಯಲು ಸಮ್ಮೇಳನದಲ್ಲಿ ಉಪನ್ಯಾಸ ಏರ್ಪಡಿಸಲಾಗಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಪೀರೆ ತರೀಕತ್ ಹಜರತ್ ಅಲ್ಲಾಮಾ ಅಶ್ಯಾಹ್ ಸಯ್ಯದ್ ಮುಹಮ್ಮದ್ ಖಾಸಿಂ ಅಶ್ರಫ್ ಅಶ್ರಫಿ ಜಿಲಾನಿ ಸಾಹಿಬ್ ಕಿಬ್ಲಾ (ಖಾಸಿಮ್ ಬಾಬಾ) ವಹಿಸುವರು.
ಅಂತಾರಾಷ್ಟ್ರೀಯ ಪ್ರವಚನ ಕಾರರಾದ ತಾಜುಲ್ ಉಲಮಾ, ಪೀರೆ ತರೀಕತ, ಉತ್ತರ ಪ್ರದೇಶದ ಹಜರತ್ ಅಲ್ಲಾಮ್ ಅಶ್ಯಾಹ್ ಸಯ್ಯದ್ ಮುಹಮ್ಮದ್ ನೂರಾನಿ ಮಿಯಾ ಅಶ್ರಫಿ ಜಿಲಾನಿ ಸಾಹಿಬ್ ಖಬ್ಲಾರವರು ಮುಖ್ಯ ಭಾಷಣ ಮಾಡುವರು. ಅಹಲೆ ಸುನ್ನತ&ವಲ್&ಜಮಾತ ಅಧ್ಯಕ್ಷ ಬಾಬಾಜಾನ್ ನದಾ್, ಇದಾಯತ್ಸಾಬ್ ಮುಲ್ಲಾ, ಮೌಲಾನಾ ನಹೀಮುದ್ದಿನ್ ಶೇಖ್, ಹಾಫಿಜ್ ಶಾರಿಕ್ ಅಹ್ಮದ್ ಪಟೇಲ್,ಅಲ್ತಾ್ ಮುಲ್ಲಾ ಮುಂತಾದವರಿದ್ದರು.
The post ಅ. 13ರಂದು ಅಶ್ರಫುಲ್ ಔಲಿಯಾ ಸಮ್ಮೇಳನ appeared first on Ain Live News.