ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರ ಅಂಗವಾಗಿ ಅಕ್ಟೋಬರ್ 15 ರಿಂದ 21ರ ವರೆಗೆ ದಸರಾ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ದಸರಾ ಕುಸ್ತಿ ಉಪಸಮಿತಿಯ ವಿಶೇಷ ಅಧಿಕಾರಿ ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ನಂದಿನಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಜೋಡಿ ಕಟ್ಟುವ ಕಾರ್ಯ ನೆರವೇರಿದೆ. ನಾಡಕುಸ್ತಿ, ಪಾಯಿಂಟ್ ಕುಸ್ತಿ ಹಾಗು ಪಂಜ ಕುಸ್ತಿಗಳು ಆಯೋಜನೆ ಮಾಡಿದ್ದು,ಪ್ರತಿದಿನ 30 ಕುಸ್ತಿ ಪಂದ್ಯಗಳು ನಡೆಯಲಿವೆ.
Black Tea benefits: ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಈ ಬಾರಿ ನಾಲ್ಕು ವಿಶೇಷ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ದಸರಾ ಕಿಶೋರ, ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕಿಶೋರಿ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಇದರ ಜೊತೆಗೆ ಮೈಸೂರು ವಿಭಾಗದ ಎಂಟು ಜಿಲ್ಲೆಗಳಿಗೆ ಅನ್ವಯವಾಗುವಂತೆ ಮೈಸೂರು ದಸರಾ ಕುಮಾರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನಾಡಕುಸ್ತಿ ವಿಭಾಗದಲ್ಲಿ ಮೇಯರ್ ಕಪ್, ಸಾಹುಕಾರ್ ಚೆನ್ನಯ್ಯ ಕಪ್, ಮೈಸೂರು ಒಡೆಯರ್ ಕಪ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಕುಸ್ತಿಪಟುಗಳಿಗೂ ಗೌರವ ಸಂಭಾವನೆ ನೀಡಲಾಗುವುದು ಎಂದು ವಿವರಿಸಿದರು.
The post ಅ. 15ರಿಂದ 21ರವರೆಗೆ ದಸರಾ ಕುಸ್ತಿ ಪಂದ್ಯಾವಳಿ: ಆಡಿಷನಲ್ ಎಸ್.ಪಿ ನಂದಿನಿ appeared first on Ain Live News.