ನಗರದ ಹೆಚ್ಎಸ್ಆರ್ ಲೇಔಟ್ ನಲ್ಲಿನ ವಾಣಿಜ್ಯ ಸಂಕೀರ್ಣಕ್ಕೆ ಸ್ವಾಧೀನಾನುಭವ ಪತ್ರ ನೀಡಲು ಪಾವತಿಸಬೇಕಾದ ಅಧಿಕೃತ ಶುಲ್ಕದ ಮೊತ್ತವನ್ನು ಕಡತ ಮಾಡುವ ಸಂಬಂಧ ಲಂಚ ಸ್ವೀಕಾರ ಆರೋಪದ ಮೇರೆಗೆ ಬಿಬಿಎಂಪಿ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ನಗರದ ಹೆಚ್ಎಸ್ಆರ್ ಲೇಔಟ್ ನಲ್ಲಿನ ವಾಣಿಜ್ಯ ಸಂಕೀರ್ಣಕ್ಕೆ ಸ್ವಾಧೀನಾನುಭವ ಪತ್ರ ನೀಡಲು ಪಾವತಿಸಬೇಕಾದ ಅಧಿಕೃತ ಶುಲ್ಕದ ಮೊತ್ತವನ್ನು ಕಡತ ಮಾಡುವ ಸಂಬಂಧ ಲಂಚ ಸ್ವೀಕಾರ ಆರೋಪದ ಮೇರೆಗೆ ಬಿಬಿಎಂಪಿ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಬೊಮ್ಮನಹಳ್ಳಿ ವಲಯದ ಸಹಾಯಕ ನಿರ್ದೇಶಕ ಪಟ್ಟಣ ಶೆಟ್ಟಿ, ಪ್ರಥಮ ದರ್ಜೆ ಸಹಾಯಕ ಕೃಷ್ಣ ಮತ್ತು ಮಧ್ಯವರ್ತಿ ರವಿ ಬಂಧಿತರಾಗಿದ್ದಾರೆ.
ಕಿರಣ್ ಕುಮಾರ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಕಿರಣ್ ಕುಮಾರ್ ಸಂಬಂಧಿ ಪದ್ಮಾವತಿ ಹೆಸರಿನಲ್ಲಿ ಸ್ವಾಧೀನಾನುಭವ ಪತ್ರ ನೀಡಲು ರೂ.26 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಆದರೆ, ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಮಾತುಕತೆ ಮೂಲಕ ರೂ.3 ಲಕ್ಷಕ್ಕೆ ಅಂತಿಮ ಒಪ್ಪಂದವಾಗಿತ್ತು.
2022ರ ಡಿ.1ರಂದು ಮುಂಗಡವಾಗಿ ರೂ.96,500 ನೀಡಲಾಗಿತ್ತು. ಮಂಗಳವಾರ ಮಧ್ಯವರ್ತಿ ರವಿ ಮತ್ತು ಕೃಷ್ಣಗೆ ರೂ.2.3 ಲಕ್ಷ ನೀಡುವ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಭ್ರಷ್ಟಾಚಾರ ನಿಗ್ರದ ಹಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.