ಉಡುಪಿ, ಜ.5: ಉಡುಪಿ ಆತ್ರಾಡಿಯ ಪರೀಕದ ಸಿಂಪಾಯಿ ಬಳಿಯ ದಟ್ಟ ಅರಣ್ಯದಲ್ಲಿ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ನಾಲ್ಕು ಶ್ರೀತಾಳೆ ಮರಗಳು ಪತ್ತೆಯಾಗಿವೆ.
ಸ್ಥಳೀಯ ಜೀವರಕ್ಷಕ ದಿನೇಶ್ ಪೂಜಾರಿ ಮಾಹಿತಿ ಮೇರೆಗೆ, ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು ಪರ್ಕಳ, ಸಾತ್ವಿಕ್ ಶೆಟ್ಟಿ ಪರೀಕ ಮೊದಲಾದವರು ಭೇಟಿ ನೀಡಿ, ಸೀತಾಳೆ ಮರ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಅದೇ ರೀತಿ ಸುರೇಶ್ ಶೆಟ್ಟಿ ಅವರ ಅಂಗಳದಲ್ಲಿರುವ ಒಂದು ಶ್ರೀತಾಳೆ ಮರವನ್ನು ಉಳಿಸಿ ಬೆಳೆಸಲು ಸಲಹೆ ನೀಡಲಾಯಿತು.
ಈ ಮರವನ್ನು ಹೆಚ್ಚಿನವರು ತಾಳಿಬೊಂಡದ ಮರವೆಂದೇ ಭ್ರಮಿಸುತ್ತಾರೆ. ಆದುದರಿಂದ ಈ ಮರ ಎಲ್ಲಿ ಕಂಡು ಬರುತ್ತ ದೆಯೋ ಅಲ್ಲಿ ರಕ್ಷಿಸಿ ಉಳಿಸುವ ಕಾಳಜಿ ವಹಿಸುವುದು ಅಗತ್ಯ. ಮೌಢ್ಯದಿಂದಾಗಿ ಈ ಮರ ಅಳಿವಿನಂಚಿಗೆ ಸೇರಿರುವುದು ಸತ್ಯ. ಈ ಮರದ ಶ್ರೀತಾಳೆಗರಿ ಎಂಬುದು ಇತಿಹಾಸ. ಆ ಮನೆಗೂ ಪರ್ನಕುಟೀರ ಎಂದು ಕರೆಯುತ್ತಿದ್ದರು. ತುಳುನಾಡಿನಲ್ಲಿ ಈ ಮರದ ಎಲೆ, ದೇವರನ್ನು ಕರೆದುಕೊಂಡುವಾಗ ಹೋಗಲು ಕೊಡೆಗೆ ಬಳಸುತ್ತಿದ್ದರು.