ಆದಾಯ ಹೆಚ್ಚಳಕ್ಕೆ ತಂತ್ರ ರೂಪಿಸಿರುವ ರಾಜ್ಯದ ಸಾರಿಗೆ ಸಂಸ್ಥೆಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಟ್ರಾಫಿಕ್ ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಟಿಎಂಸಿ)… ಬೆಂಗಳೂರು: ಆದಾಯ ಹೆಚ್ಚಳಕ್ಕೆ ತಂತ್ರ ರೂಪಿಸಿರುವ ರಾಜ್ಯದ ಸಾರಿಗೆ ಸಂಸ್ಥೆಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಟ್ರಾಫಿಕ್ ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಟಿಎಂಸಿ)ಗಳಿಗೆ ಸೇರಿದ ವಾಣಿಜ್ಯ ಸಂಕೀರ್ಣಗಳು, ಕಟ್ಟಡಗಳನ್ನು ಬಾಡಿಗೆಗೆ ನೀಡಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಹಣದ ಕೊರತೆ ಶುರುವಾಗಿರುವ ಹಿನ್ನೆಲೆಯಲ್ಲಿ ಕಟ್ಟಡಗಳ ಬಾಡಿಗೆಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಸಂಸ್ಥೆ ಚಿಂತನೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕೆಎಸ್‌ಆರ್‌ಟಿಸಿಗೆ ಸೇರಿದ 1,640 ಅಂಗಡಿ ಮತ್ತು ಕಟ್ಟಡಗಳಿದ್ದು, ಈ ಪೈಕಿ 360 ಕಟ್ಟಡ ಹಾಗೂ ಅಂಗಡಿಗಳು ಖಾಲಿ ಇವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೊದಲ ನಾನ್ ಎಸಿ ಎಲೆಕ್ಟ್ರಿಕ್ ಬಸ್ ಇಂದು ಬಿಎಂಟಿಸಿ ತೆಕ್ಕೆಗೆ!
ಇನ್ನು ಬಿಎಂಟಿಸಿ ಕೂಡ 363 ಕಟ್ಟಡ, ಅಂಗಡಿಗಳಿದ್ದು, ಅವುಗಳಲ್ಲಿ 105 ಖಾಲಿ ಇವೆ. ಕೆಕೆಆರ್‌ಟಿಸಿ ಅಡಿಯಲ್ಲಿ 988 ಕಟ್ಟಡಗಳಿದ್ದು, 222 ಅಂಗಡಿಗಳು ಖಾಲಿ ಇವೆ. ಆಧರೆ, ಎನ್’ಡಬ್ಲ್ಯೂಕೆಆರ್’ಟಿಸಿಗೆ ಸೇರಿದ ಕಟ್ಟಡ, ಅಂಗಡಿಗಳು ಖಾಲಿಯಿಲ್ಲ ಎಂದು ರಾಜ್ಯ ಸಾರಿಗೆ ಬಸ್ ನಿಗಮಗಳ ಮೂಲಗಳು ಮಾಹಿತಿ ನೀಡಿವೆ.
ಅಂಗಡಿಗಳು ಮತ್ತು ಕಟ್ಟಡಗಳ ಬಾಡಿಗೆಯು ಸಾರಿಗೆ ನಿಗಮಗಳಿಗೆ ಆದಾಯದ ಪ್ರಮುಖ ಮೂಲವಾಗಿದ್ದು, ಇವುಗಳನ್ನು ಬಾಡಿಗೆಗೆ ನೀಡಲು ಆನ್‌ಲೈನ್‌ನಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕಾರ್ಗೋ ಸೇವೆ, ಅಂಗಡಿಗಳು ಮತ್ತು ಕಟ್ಟಡಗಳ ಬಾಡಿಗೆ ಮೂಲಕ “ಕೆಎಸ್‌ಆರ್‌ಟಿಸಿ 2022-23ರಲ್ಲಿ 234 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಕಟ್ಟಡಗಳನ್ನು ಮತ್ತೆ ಬಾಡಿಗೆಗೆ ನೀಡಿದ್ದೇ ಆದರೆ, ಪಾಲಿಕೆ ಆದಾಯ ಮತ್ತೆ ಹೆಚ್ಚಾಗಲಿದೆ ಎಂದೂ ಮೂಲಗಳು ತಿಳಿಸಿವೆ.
ಈಗಾಗಲೇ ಸಾರಿಗೆ ನಿಗಮಗಳು ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆದಿದ್ದು, ನಿಗಮಗಳಿಗೆ ಸೇರಿದ ಕಟ್ಟಡಗಳಿಗೆ ಸ್ಥಳಾಂತಿರುವಂತೆ ಮನವಿ ಮಾಡಿಕೊಂಡಿದೆ.