Home Uncategorized ಆನ್ ಲೈನ್ ಗೇಮ್ ಪಾಸ್ ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ ಯುವತಿಯನ್ನು ಕೊಂದು, ಆಕೆಯ ದೇಹವನ್ನು ಸುಟ್ಟು...

ಆನ್ ಲೈನ್ ಗೇಮ್ ಪಾಸ್ ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ ಯುವತಿಯನ್ನು ಕೊಂದು, ಆಕೆಯ ದೇಹವನ್ನು ಸುಟ್ಟು ಹಾಕಿದ ಗೆಳೆಯರು

22
0

ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ಫ್ರೀ ಫೈರ್ ಆನ್ ಲೈನ್ ಮೊಬೈಲ್ ಗೇಮ್ ನ ಪಾಸ್ ವರ್ಡ್ ಹಂಚಿಕೊಳ್ಳಲು ನಿರಾಕರಿಸಿದಳೆಂದು ಯುವತಿಯೋರ್ವಳನ್ನು ಆಕೆಯ ನಾಲ್ವರು ಗೆಳೆಯರು ಹತ್ಯೆಗೈದಿರುವ ಘಟನೆ ಪಶ‍್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ನಂತರ ಆಕೆಯ ದೇಹವನ್ನು ಸುಟ್ಟು ಹಾಕಿರುವ ಅವರು, ಅದನ್ನು ಕಾಡೊಂದರಲ್ಲಿ ಬಿಸಾಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಪಪಾಯಿ ದಾಸ್ (18) ಎಂಬ ಯುವತಿಯ ಮೃತದೇಹವನ್ನು ಜನವರಿ 15ರಂದು ಹತ್ತಿರದ ಕಾಡೊಂದರಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೀಡಾದ ಯುವತಿಯ ತಾಯಿ ಪೂರ್ಣಿಮಾ ದಾಸ್ ಎಂಬವವರು ನೀಡಿದ್ದ ದೂರನ್ನು ಆಧರಿಸಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದರು.

ಈ ಸಂಬಂಧ ಪೊಲೀಸರು ನಾಲ್ವರು ಅಪ್ರಾಪ್ತ ಗೆಳೆಯರನ್ನು ವಶಕ್ಕೆ ಪಡೆದಿದ್ದು, ಅವರನ್ನು ನಾಳೆ ಜಿಲ್ಲಾ ಬಾಲ ನ್ಯಾಯ ಮಂಡಳಿಯ ಎದುರು ಹಾಜರು ಪಡಿಸಲಿದ್ದಾರೆ.

LEAVE A REPLY

Please enter your comment!
Please enter your name here