Home Uncategorized ಆಫ್ರಿಕಾ ನಟನಿಂದ ಬೆಂಗಳೂರಿನ ಮೂಲಸೌಕರ್ಯ ಅಪಹಾಸ್ಯ: ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದ ಕಿರಣ್ ಮಜುಂದಾರ್ ಶಾ

ಆಫ್ರಿಕಾ ನಟನಿಂದ ಬೆಂಗಳೂರಿನ ಮೂಲಸೌಕರ್ಯ ಅಪಹಾಸ್ಯ: ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದ ಕಿರಣ್ ಮಜುಂದಾರ್ ಶಾ

26
0

ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯವನ್ನು ಅಪಹಾಸ್ಯ ಮಾಡಿದ್ದು, ಈ ಕುರಿತು ಪ್ರತಿಕ್ಯೆ ನೀಡಿರುವ ಖ್ಯಾತ ಉದ್ಯಮಿ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ. ಬೆಂಗಳೂರು: ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯವನ್ನು ಅಪಹಾಸ್ಯ ಮಾಡಿದ್ದು, ಈ ಕುರಿತು ಪ್ರತಿಕ್ಯೆ ನೀಡಿರುವ ಖ್ಯಾತ ಉದ್ಯಮಿ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಶಾ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯದ ಕುರಿತು ತಮ್ಮ ಕಾರ್ಯಕ್ರಮದಲ್ಲಿ ಅಪಹಾಸ್ಯ ಮಾಡಿದ್ದು, ‘ಕಳಪೆ ರಸ್ತೆಗಳು, ಟ್ರಾಫಿಕ್ ಮತ್ತು ಶೋಚನೀಯ ಸ್ಥಳ.. ತಮಗೆ ಕಾರ್ಯಕ್ರಮಗಳು ಮಾಡಲು ಸಾಕಷ್ಟು ಕಂಟೆಂಟ್ ಸಿಕ್ಕಿದೆ ಎಂದು ಹೇಳುವ ಮೂಲಕ ನಟ ಟ್ರೆವರ್ ನೋಹ್ ಬೆಂಗಳೂರಿನ ಮೂಲಸೌಕರ್ಯವನ್ನು ಅಪಹಾಸ್ಯ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವೈರಲ್ ವೀಡಿಯೊವನ್ನು ಹಂಚಿಕೊಂಡಿರುವ ಬಯೋಕಾನ್ ಸಂಸ್ಥಾಪಕಿ ಮತ್ತು ಉದ್ಯಮಿ ಕಿರಣ್ ಮಜುಂದಾರ್-ಶಾ ರಾಜ್ಯ ಆಡಳಿತವು ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿದ್ದಾರೆ. 

ಇದನ್ನೂ ಓದಿ: ಚಿಲುಮೆ ಹಗರಣ: ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶ

ತಮ್ಮ ಟ್ವೀಟ್ ನಲ್ಲಿ ನಟ ನೋಹ್ ಪ್ರಸ್ತಾಪಿಸಿರುವ ವಿಷಯಗಳು ಸರಿಯಾಗಿವೆ. ಬೆಂಗಳೂರಿನ ಶಾಂಬೋಲಿಕ್ ರಾಜ್ಯವು ಟ್ರೆವರ್ ನೋಹ್ ಅವರ ಭವಿಷ್ಯದ ಪ್ರದರ್ಶನಗಳಿಗೆ ಸಾಕಷ್ಟು ವಿಷಯವನ್ನು ಒದಗಿಸಿದೆ. ಇದು ಆಡಳಿತವನ್ನು ಎಚ್ಚೆತ್ತುಕೊಳ್ಳದಿದ್ದರೆ ನಾವು ಆಶಿಸಲು ಏನೂ ಉಳಿದಿಲ್ಲ ಎಂದು ಟ್ವೀಟ್ ಮಾಡಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂಚಾರ ಜಂಟಿ ಆಯುಕ್ತರು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರನ್ನು ಟ್ಯಾಗ್ ಮಾಡಿದ್ದಾರೆ. 

Bangalore’s shambolic state has provided enough content for Trevor Noah’s future shows.If this does not wake up the administration then we have nothing left to hope for ⁦@Jointcptraffic⁩ ⁦@BBMPCOMM⁩ ⁦@CMofKarnataka⁩ ⁦@DKShivakumarhttps://t.co/rZee59SAG0
— Kiran Mazumdar-Shaw (@kiranshaw) October 1, 2023

ಇನ್ನು ನಟ ನೋಹ್ ತನ್ನ ‘ಆಫ್ ದಿ ರೆಕಾರ್ಡ್’ ಪ್ರವಾಸದ ಭಾಗವಾಗಿ, ಸೆಪ್ಟೆಂಬರ್ 27 ಮತ್ತು 28 ರಂದು ಬೆಂಗಳೂರಿನ ಮ್ಯಾನ್‌ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಪ್ರದರ್ಶನವನ್ನು ಆರಂಭವಾಗುವ ಕೇವಲ ಅರ್ಧ ಘಂಟೆಯ ಮೊದಲು ರದ್ದುಗೊಳಿಸಲಾಯಿತು. ಅಲ್ಲದೆ ಆಯೋಜಕರು ಪ್ರೇಕ್ಷಕರಿಗೆ ಕ್ಷಮೆಯಾಚಿಸಿ ಮತ್ತು ಟಿಕೆಟ್‌ಗಳ ಸಂಪೂರ್ಣ ಮರುಪಾವತಿಯ ಭರವಸೆ ನೀಡಿದರು.

ಇದನ್ನೂ ಓದಿ: ಬೆಂಗಳೂರು: ಮೈಸೂರು ರಸ್ತೆ ಮೇಲ್ಸೇತುವೆ ಮೇಲೆ ಬಿಎಂಟಿಸಿ ಬಸ್ ಅಪಘಾತ

ಈಗ, ನೋಹ್ ಅವರ ಶೋ ರದ್ದಾಗಿದ್ದಕ್ಕೆ ಕಾರಣ ತಿಳಿಸಿದ್ದು, ನಗರದ ಟ್ರಾಫಿಕ್, ಈವೆಂಟ್ ಸ್ಥಳದಲ್ಲಿನ ಅಡಚಣೆಗಳಿಂದ ಶೋ ರದ್ದಾಗಿದೆ ಎಂದು ಹೇಳಲಾಗಿದೆ. ನೋಹ್ ಅವರು ಪ್ರದರ್ಶನ ಸ್ಥಳವನ್ನು ತಲುಪಲು ಸುಮಾರು ಒಂದೂವರೆ ಗಂಟೆಗಳನ್ನು ತೆಗೆದುಕೊಂಡರು. ಹೀಗಾಗಿ ಅವರು ಧ್ವನಿ ತಪಾಸಣೆ ಮಾಡಲು ಸಾಧ್ಯವಾಗಲಿಲ್ಲ. ಮಣ್ಣಿನ ರಸ್ತೆಗಳು, ಧೂಳು, ರಸ್ತೆಗಳ ಮೇಲೆ ಬೀದಿನಾಯಿಗಳ ಆರ್ಭಟ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದೇ ನನಗೆ ಗೊಂದಲವಾಯಿತು. ಪ್ರದರ್ಶನದ ಸ್ಥಳವು ಅರೆ-ಶಾಶ್ವತ ಟೆಂಟ್‌ನಂತೆ ಕಾಣುತ್ತಿತ್ತು. ಆ ರೂಂಅನ್ನು ಮನುಷ್ಯರಿಗಾಗಿ ವಿನ್ಯಾಸಗೊಳಿಸಲಾಗಿಲ್ಲ ಎಂದು ನನಗನ್ನಿಸಿತು ಎಂದು ಅವರು ಹೇಳಿಕೊಂಡಿದ್ದಾರೆ.
 

LEAVE A REPLY

Please enter your comment!
Please enter your name here