Home Uncategorized ಆರ್ಯ ಸತ್ತಿದಾನೆ ಅನ್ನೋದಕ್ಕೆ ಸಾಕ್ಷಿ ಕೇಳಿದ ಝೇಂಡೆ; ಮೀರಾಗೆ ಶುರುವಾಯ್ತು ಅನುಮಾನ

ಆರ್ಯ ಸತ್ತಿದಾನೆ ಅನ್ನೋದಕ್ಕೆ ಸಾಕ್ಷಿ ಕೇಳಿದ ಝೇಂಡೆ; ಮೀರಾಗೆ ಶುರುವಾಯ್ತು ಅನುಮಾನ

21
0

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ವರ್ಧನ್ ಕಂಪನಿಯ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಝೇಂಡೆ ಬಂದಿದ್ದಾನೆ. ಇದಕ್ಕೆ ಆರ್ಯನನ್ನು ದಾಳ ಮಾಡಿಕೊಳ್ಳಬೇಕು ಎಂಬುದು ಆತನ ಉದ್ದೇಶ. ಇದರ ಜತೆಗೆ ಮೀರಾಳನ್ನು ಸೇರಿಸಿಕೊಂಡಿದ್ದಾನೆ. ಕಂಪನಿ ಒಳಗೆ ಬರೋಕೆ ಆತ ಪ್ಲ್ಯಾನ್ ಮಾಡುತ್ತಿದ್ದಾನೆ. ಇದಕ್ಕೆ ಮೀರಾಳನ್ನು ಆತ ಬಳಸಿಕೊಳ್ಳುತ್ತಿದ್ದಾನೆ.

ಅಸಲಿ ವಿಚಾರ ಗೊತ್ತಾದರೂ ನಂಬಲಿಲ್ಲ ಆರಾಧನಾ

ಸಂಜುನೇ ಆರ್ಯವರ್ಧನ್​, ಆತ ವಿಶ್ವ ಅಲ್ಲ ಎಂದು ಆರಾಧನಾಗೆ ಹೇಳುವ ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ, ಪ್ರಿಯದರ್ಶಿನಿ ಬಳಿ ಇದನ್ನು ಹೇಳಲು ಸಾಧ್ಯವೇ ಆಗಿಲ್ಲ. ಈ ಕಾರಣಕ್ಕೆ ಆಕೆಯ ಗಂಡ ಇದನ್ನು ಹೇಳಿದ್ದಾನೆ. ಧೈರ್ಯ ಮಾಡಿ ಈ ವಿಚಾರವನ್ನು ಆರಾಧನಾ ಬಳಿ ಹೇಳಿದ್ದಾನೆ. ಆದರೆ, ಇದನ್ನು ಆಕೆ ನಂಬಲೇ ಇಲ್ಲ! ಇದನ್ನು ಜೋಕ್ ಆಗಿ ಸ್ವೀಕರಿಸಿದ್ದಾಳೆ. ‘ಮಾವಾ ಎಲ್ಲರಂತೆ ನಿಮಗೂ ತಲೆಕೆಟ್ಟಿದೆಯಾ? ಎಲ್ಲರೂ ಸೇರಿ ನಿಮ್ಮ ಬುದ್ಧಿಗೆ ಭ್ರಮೆ ಎರಚಿದ್ದಾರೆ. ಇತ್ತೀಚೆಗೆ ಆತ 700 ಕೋಟಿ ರೂಪಾಯಿ ಸಾಲದ ವಿಚಾರ ಹೇಳಿದ್ದ. ಆತನಿಗೆ ಹಳೆಯದೆಲ್ಲವೂ ನೆನಪಿದೆ’ ಎಂದು ಹೇಳಿದ್ದಾಳೆ ಆರಾಧನಾ.

ಈ ವೇಳೆ ತನ್ನ ನಿರ್ಧಾರವನ್ನು ಬದಲಿಸಿದ್ದಾಳೆ. ಈ ಮೊದಲು ಅಮೆರಿಕಕ್ಕೆ ತೆರಳಿ, ಅಲ್ಲಿ ಸಂಜುಗೆ ಟ್ರೀಟ್​ಮೆಂಟ್ ಕೊಡಿಸುವ ಆಲೋಚನೆಯಲ್ಲಿ ಅವಳಿದ್ದಳು. ಆದರೆ, ಮನೆ ಮಂದಿ ನಡೆದುಕೊಳ್ಳುತ್ತಿರುವ ರೀತಿಗೆ ಆಕೆಗೆ ಬೇಸರ ಆಗಿದೆ. ಸಂಜು ನನ್ನವನೇ ಎಂದು ತೋರಿಸುವ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಹೀಗಾಗಿ, ಆಕೆ ಅಮೆರಿಕಕ್ಕೆ ಹೋಗದೆ ಇರಲು ನಿರ್ಧರಿಸಿದ್ದಾಳೆ. ಈ ಬಗ್ಗೆ ಮಾಹಿತಿ ನೀಡಿದ್ದಾಳೆ.

ಅನುಗೆ ಕಾಡುತ್ತಿದೆ ಅನುಮಾನ

ಸಂಜು ಸುಪ್ತಪ್ರಜ್ಞೆಯಲ್ಲಿ ಹೇಳಿದ ಮಾತುಗಳನ್ನು ಕೇಳಿ ಅನುಗೆ ಶಾಕ್​ ಆಗಿದೆ. ಸಂಜು ನಡೆದುಕೊಳ್ಳುತ್ತಿರುವ ಎಲ್ಲಾ ವಿಚಾರಗಳು ಅನುಗೆ ಕುತೂಹಲ ಹಾಗೂ ಅಚ್ಚರಿ ಮೂಡಿಸಿವೆ. ಅನುಗೆ ಸಂಜುನ ನೋಡಿದಾಗೆಲ್ಲ ಆರ್ಯವರ್ಧನ್ ನೆನಪಿಗೆ ಬರುತ್ತಿದ್ದಾನೆ. ಸಂಜುನ ಪ್ರತಿ ನಡೆ ಆರ್ಯವರ್ಧನ್​ ರೀತಿಯಲ್ಲೇ ಇದೆ. ಆರಂಭದಲ್ಲಿ ಇದು ಕಾಕತಾಳೀಯ ಎಂದೇ ಭಾವಿಸಿದ್ದಳು. ಆದರೆ, ಬೆಡ್​ನಲ್ಲಿ ಸಂಜು ಹೇಳಿದ ಮಾತು ಆರ್ಯವರ್ಧನ್​ ಹೇಳಿದ ಮಾತು ಒಂದೇ ಆಗಿತ್ತು. ‘700 ಕೋಟಿ ಸಾಲವನ್ನು ನಾನು ತೀರಿಸುತ್ತೇನೆ. ಅಮ್ಮ ನೀವು ಈ ಬಗ್ಗೆ ಚಿಂತೆ ಮಾಡಿಕೊಳ್ಳಬೇಡಿ’ ಎಂದು ಹೇಳಿದ್ದ ಆರ್ಯವರ್ಧನ್. ಇದೇ ಮಾತನ್ನು ಸಂಜು ಕೂಡ ಹೇಳಿದ್ದಾನೆ.

ಮೀರಾ ರಿಸೈನ್ ಮಾಡುವ ನಿರ್ಧಾರ

ವರ್ಧನ್ ಕಂಪನಿಯಿಂದ ಮೀರಾ ರಿಸೈನ್ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ ಮೀರಾ. ಇದು ಝೇಂಡೆಗೆ ತಲೆಬಿಸಿ ಮೂಡಿಸಿದೆ. ವರ್ಧನ್ ಕಂಪನಿಗೆ ತನ್ನನ್ನು ಸೇರಿಸಿಕೊಳ್ಳುವಂತೆ ಮೀರಾ ಬಳಿ ಝೇಂಡೆ ಮನವಿ ಮಾಡಿದ್ದ. ಆದರೆ, ಈಗ ಮೀರಾಳೆ ಕಂಪನಿಯಿಂದ ಹೊರ ನಡೆದರೆ ತಾನು ಏನು ಮಾಡಬೇಕು ಎಂಬ ಪ್ರಶ್ನೆ ಆತನಲ್ಲಿ ಮೂಡಿದೆ. ಈ ಕಾರಣಕ್ಕೆ ಮೀರಾಳನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಾನೆ ಝೇಂಡೆ.

‘ನಾನು ನೀವು ಹೇಳಿದಂತೆ ಕೇಳುತ್ತೀನಿ ಎಂದು ಹೇಳಿದ್ದೇನೆ. ಆದರೆ, ನೀವು ಹೇಳಿದ ಎಲ್ಲ ಮಾತನ್ನು ಕೇಳೋಕೆ ಆಗಲ್ಲ. ನಾನು ನನ್ನದೇ ಆದ ಪ್ಲ್ಯಾನಿಂಗ್ ಮಾಡ್ತಾ ಇದೀನಿ. ನೀವು ಕಂಪನಿ ಒಳಗೆ ಬರುವಂತೆ ನಾನು ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾಳೆ ಮೀರಾ. ಇದರಿಂದ ಝೇಂಡೆಗೆ ಹೊಸ ಭರವಸೆ ಮೂಡಿದೆ.

ಇನ್ನು ಮೀರಾ ಆರ್ಯವರ್ಧನ್ ಬದುಕಿರುವುದಕ್ಕೆ ಸಾಕ್ಷಿ ಕೇಳಿದ್ದಾಳೆ. ಇದಕ್ಕೆ ಝೇಂಡೆ ಉತ್ತರ ನೀಡಿದ್ದಾನೆ. ‘ಆರ್ಯವರ್ಧನ್ ಸತ್ತಿದ್ದಾನೆ ಅನ್ನೋದಕ್ಕೆ ಏನು ಸಾಕ್ಷಿ ಇದೆ ಮೀರಾ ಅವರೇ? ಆದರೆ, ಆರ್ಯ ಬದುಕಿದ್ದಾನೆ ಅನ್ನೋದಕ್ಕೆ ನನ್ನ ಬಳಿ ಸಾಕ್ಷಿ ಇದೆ. ಅದನ್ನು ಕೊಡ್ತೀನಿ’ ಎಂದು ಹೇಳಿದ್ದಾನೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here