ಬೆಂಗಳೂರು:
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 3ರಂದು ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳ ಭದ್ರತೆಯ ಹಿನ್ನೆಲೆಯಲ್ಲಿ ಅರೆಸೇನಾ ಪಡೆಗಳು ಶುಕ್ರವಾರ ನಗರಕ್ಕೆ ಆಗಮಿಸಿವೆ.
ಈ ಕುರಿತು ಬೆಂಗಳೂರು ಉಪ ಆಯುಕ್ತ (ಪಶ್ಚಿಮ ವಿಭಾಗ) ಸಂಜೀವ್ ಎಂ.ಪಾಟೀಲ್ ಈ ಮಾಹಿತಿ ನೀಡಿದ್ದು, ನಗರಕ್ಕೆ ಕೇಂದ್ರ ಅರೆಸೇನಾ ಪಡೆ ಆಗಮಿಸಿವೆ. ಒಂದು ತಂಡ ಬೆಂಗಳೂರಿನದ್ದಾಗಿದ್ದು, ಇತರ ತಂಡಗಳು ತಮಿಳುನಾಡು, ತೆಲಂಗಾಣ ಮತ್ತು ಮೈಸೂರಿನಿಂದ ಆಗಮಿಸಿವೆ ಎಂದಿದ್ದಾರೆ.
ಪಶ್ಚಿಮ ವಿಭಾಗದಲ್ಲಿ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಗಳನ್ನು ಕೂಡ ನಿಯೋಜಿಸಲಾಗುವುದು ಎಂದು ಹೇಳಿದರು.