ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 200 ರನ್‌ಗಳ ಗುರಿ ಹಿಂಬಾಲಿಸಿದ್ದ ಭಾರತ ತಂಡ ಕೇವಲ 2 ರನ್‌ಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಮುರಿಯದ ನಾಲ್ಕನೇ ವಿಕೆಟ್‌ಗೆ 165 ರನ್‌ಗಳ ನಿರ್ಣಾಯಕ ಜೊತೆಯಾಟ ಆಡುವ ಮೂಲಕ ಭಾರತ ತಂಡದ 6 ವಿಕೆಟ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು.
https://x.com/BCCI/status/1711399572667347079?s=20
ಕೆ.ಎಲ್ ರಾಹುಲ್ ರೂಪಿಸಿದ್ದ ಬ್ಯಾಟಿಂಗ್ ಗೇಮ್ ಪ್ಲಾನ್ ಏನೆಂಬುದನ್ನು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ
ಕೆ.ಎಲ್ ರಾಹುಲ್ ಹಾಗೂ ತಮ್ಮ ನಡುವಣ ಜೊತೆಯಾಟದ ಬಗ್ಗೆ ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಸಾಂಪ್ರದಾಯಿಕ ಹಾದಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕಾರಣ ಒತ್ತಡದ ಸಮಯವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಕೆ.ಎಲ್ ರಾಹುಲ್ ಅವರು ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ. ಹಾಗಾಗಿ ಅವರು ಪ್ರಥಮ ಇನಿಂಗ್ಸ್‌ನಲ್ಲಿ 49.3 ಓವರ್‌ಗಳವರೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಆದರೆ, ಭಾರತ ತಂಡದ ಮೂರು ವಿಕೆಟ್‌ಗಳನ್ನು ಬೇಗ ಉರುಳಿದ ಕಾರಣ, ಅವರು ಮೂರನೇ ಓವರ್‌ನಲ್ಲಿಯೇ ಕ್ರೀಸ್‌ಗೆ ಬರಬೇಕಾಯಿತು. ಬ್ಯಾಟಿಂಗ್ ವೇಳೆ ತಮ್ಮ ದೇಹ ತುಂಬಾ ಧಣಿದಿದ್ದು ಎಂದು ಹೇಳಿಕೊಂಡಿದ್ದಾರೆ.
The post ಆಸ್ಟ್ರೇಲಿಯಾ ಎದುರು ತಾವು ರೂಪಿಸಿದ್ದ ಬ್ಯಾಟಿಂಗ್ ಗೇಮ್ ಪ್ಲಾನ್ ತಿಳಿಸಿದ ವಿರಾಟ್ ಕೊಹ್ಲಿ appeared first on Ain Live News.