Home Uncategorized ಆಸ್ಟ್ರೇಲಿಯ ಹದಿಹರೆಯದ ಹುಡುಗರ ಅಪ್ರಚೋದಿತ ಹಿಂಸಾಕೃತ್ಯಕ್ಕೆ ಗರ್ಭಿಣಿ ಮತ್ತವಳ ಹೊಟ್ಟೆಯಲ್ಲಿದ್ದ ಮಗು ಬಲಿ!

ಆಸ್ಟ್ರೇಲಿಯ ಹದಿಹರೆಯದ ಹುಡುಗರ ಅಪ್ರಚೋದಿತ ಹಿಂಸಾಕೃತ್ಯಕ್ಕೆ ಗರ್ಭಿಣಿ ಮತ್ತವಳ ಹೊಟ್ಟೆಯಲ್ಲಿದ್ದ ಮಗು ಬಲಿ!

34
0

ಭಯಾನಕವಾಗಿ ನಡೆದ ಹಲ್ಲೆಯಲ್ಲಿ ಕಾಂಕ್ರೀಟ್ ಇಟ್ಟಿಗೆಯೊಂದರಿಂದ (concrete slab) ತಲೆಗೆ ಬಿಟ್ಟ ತಿಂದ 30-ವರ್ಷ-ವಯಸ್ಸಿನ ಗರ್ಭಿಣಿಯೊಬ್ಬಳು ದುರ್ಮರಣಕ್ಕೀಡಾದ ಘಟನೆ ಅಸ್ಟ್ರೇಲಿಯದ ಪರ್ತ್​ ನಗರದಲ್ಲಿ ನಡೆದಿದೆ. ಇನ್ನೂ ವಿಷಾದಕರ ಸಂಗತಿಯೆಂದರೆ, ಆಕೆಯ ಮಗುವನ್ನು ಉಳಿಸಲು ವೈದ್ಯರಿಗೆ ಸಾಧ್ಯವಾಗಿಲ್ಲ. ಡಿಯಾನ್ನೆ ಮಿಲ್ಲರ್ (Dianne Miller) ತನ್ನ ಸಂಗಾತಿಯ ಜೊತೆ ಪರ್ತ್​ನಲ್ಲಿರುವ ವಾಟರ್ ಫೋರ್ಡ್ ಪ್ಲಾಜಾ ಶಾಪಿಂಗ್ ಸೆಂಟರ್ ನಲ್ಲಿ (shopping centre) ದಿನಸಿ ವಸ್ತುಗಳನ್ನು ಖರೀದಿಸಿ ಕಾರು ಹೊರತೆಗೆಯಲು ಪಾರ್ಕಿಂಗ ಲಾಟ್ ಗೆ ಬಂದಾಗ ಅವರ ಮೇಲೆ ಹಲ್ಲೆ ನಡೆದಿದೆ. ವರದಿಗಳ ಪ್ರಕಾರ 17-ವರ್ಷ-ವಯಸ್ಸಿನ ಯುವಕನೊಬ್ಬ ಕಾಂಕ್ರೀಟ್ ಇಟ್ಟಿಗೆ  ಡಿಯಾನ್ನೆ ಕಡೆ ಎಸೆದಾಗ ಅದು ಅವಳ ತಲೆಗೆ ತಾಕಿ ಆಕೆ ಮತ್ತು ಮಗುವಿನ ಪ್ರಾಣವನ್ನು ಬಲಿಪಡೆದಿದೆ.

ಪೆಟ್ಟು ಬಿದ್ದ ಕೂಡಲೇ ಡಿಯಾನ್ನೆ ಪ್ರಜ್ಞೆ ತಪ್ಪಿ ನೆಲಕ್ಕುರುಳಿದಾಗ ಹೃದಯಘಾತ ಕೂಡ ಆಗಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಪೊಲೀಸ್ ಅಧಿಕಾರಿಗಳು ಹದಿಹರೆಯದ ಹುಡುಗನ ಮೇಲೆ ಜಿಬಿಎಚ್ (ಗ್ರೀವಿಯಸ್ ಬಾಡಿಲಿ ಹಾರ್ಮ್) ಚಾರ್ಜ್ ಅಡಿ ಬಂಧಿಸಿದ್ದಾರೆ.

ವೈದ್ಯರು ಕೈಚೆಲ್ಲಿಬಿಟ್ಟರು!

ಹಲ್ಲೆ ನಡೆದ ಸ್ಥಳದಲ್ಲೇ ಪ್ಯಾರಾ ಮೆಡಿಕ್ಸ್ ಮತ್ತು ಸಾರ್ವಜನಿಕರು ಐದು-ತಿಂಗಳು ಗರ್ಭಿಣಿಯಾಗಿದ್ದ ಡಿಯಾನ್ನೆಯ ಪ್ರಾಣ ಉಳಿಸಲು ಪ್ರಯತ್ನಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಳು ದಾಖಲಾದ ರಾಯಲ್ ಪರ್ತ್ ಹಾಸ್ಪಿಟಲ್ ನ ವೈದ್ಯರು ತಾಯಿ ಮತ್ತು ಅವಳ ಹೊಟ್ಟೆಯಲ್ಲಿರುವ ಮಗು ಬದುಕುಳಿಯುವ ಸಾಧ್ಯತೆ ಬಹಳ ಕ್ಷೀಣವಾಗಿದೆ ಅಂತ ಹೇಳಿದ್ದರು ಎಂದು ವರದಿ ಉಲ್ಲೇಖಿಸಿದೆ.

ಡಿಯಾನ್ನೆ ಮರಣಿಸಿದ ವಿಷಯವನ್ನು ಆಕೆಯ ಸಹೋದರ ರೋದಿಸುತ್ತಾ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಎನ್ ಐ ಟಿ ವಿ ನ್ಯೂಸ್ ನೊಂದಿಗೆ ಗುರುವಾರ ಮಾತಾಡಿದ ಡಿಯಾನ್ನೆ ಸಹೋದರ ಮಾಲ್ಕಮ್ ಕ್ಲಿಫ್ಟನ್, ‘ಎಲ್ಲ ಸರ್ವನಾಶವಾಯಿತು, ನಮ್ಮ ಪ್ರಪಂಚವೇ ಮುಳುಗಿ ಹೋಗಿದೆ. ಅವಳ ಮಗು ಕೂಡ ಉಳಿಯಲಿಲ್ಲ,’ ಎಂದು ಅಳುತ್ತಾ ಹೇಳಿದ್ದಾನೆ.

‘ಎಲ್ಲರ ಪ್ರೀತಿಪಾತ್ರಳಾಗಿದ್ದಳು’

ತನ್ನ ಸಹೋದರಿ ಬಹಳ ದಯಾಳು ವ್ಯಕ್ತಿಯಾಗಿದ್ದಳು, ಯಾರನ್ನೂ ನೋಯಿಸಿದವಳಲ್ಲ, ವಿಶಾಲ ಹೃದಯಿ ಮತ್ತು ಎಲ್ಲರ ಪ್ರೀತಿ ಪಾತ್ರಳಾಗಿದ್ದಳು ಎಂದು ಅವನು ಹೇಳಿದ್ದಾನೆ.

ತನ್ನ ಮೊದಲ ಮಗುವಿನೊಂದಿಗೆ ಡಿಯಾನ್ನೆ ಮಿಲ್ಲರ್

ಹದಿಹರೆಯದ ಯುವಕರ ಗುಂಪೊಂದು ಅಪ್ರಚೋದಿತವಾಗಿ ಮತಿಹೀನ ಹಿಂಸಾಕೃತ್ಯದಲ್ಲಿ ತೊಡಗಿದ್ದರಿಂದ ಡಿಯಾನ್ನೆ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಸ್ಥಳೀಯ ಪೊಲೀಸ್ ಹೇಳಿದೆ. ‘ನಾವು ಕಲೆಹಾಕಿರುವ ಮಾಹಿತಿಯ ಪ್ರಕಾರ ನತದೃಷ್ಟ ಮಹಿಳೆಯು ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿದ್ದ ಕಾರಲ್ಲಿ ಹಿಂಬದಿ ಸೀಟ್ ನ ಪ್ರಯಾಣಿಕಳಾಗಿದ್ದಳು. ಆಕೆಯ ಸಂಗಾತಿಯ ಮೇಲೂ ಹಲ್ಲೆ ನಡೆದಿದೆ, ಜಗಳದಲ್ಲಿ ತೊಡಗಿದ್ದ ಎರಡೂ ಪಕ್ಷಗಳು ಪರಸ್ಪರ ಅಪರಿಚಿತವಾಗಿವೆ,’ ಎಂದು ಕ್ಯಾನಿಂಗ್ಟನ್ ಡಿಸ್ಟ್ರಿಕ್ಟ್ ಆಫೀಸ್ ನ ಇನ್ಸ್ಪೆಕ್ಟರ್ ಬ್ರೆಟ್ ಬ್ಯಾಡಾಕ್ 7ನ್ಯೂಸ್ ಗೆ ತಿಳಿಸಿದ್ದಾರೆ.

ಅಪ್ರಚೋದಿತ ಹಿಂಸಾಕೃತ್ಯ

‘ಹದಿಹರೆಯದ ಹುಡುಗರಿಂದ ಇದೊಂದು ಅಪ್ಪಟ ಅಪ್ರಚೋದಿತ ಹಲ್ಲೆಯಾಗಿದೆ, ಹಿಂಸಾಕೃತ್ಯದಲ್ಲಿ ತೊಡಗಲೇ ಬೇಕು ಅಂತ ಓಡಾಡಿಕೊಂಡಿದ್ದವರಿಗೆ ಡಿಯಾನ್ನೆ ಕುಟುಂಬ ಸಿಕ್ಕಿದೆ,’ ಎಂದು ಬ್ಯಾಡಾಕ್ ಹೇಳಿದ್ದಾರೆ.

ಡಿಯಾನ್ನೆಯ ಸಾವನ್ನು ಖಚಿತಪಡಿಸುವ ಮೊದಲು ವೈದ್ಯರು ತಮ್ಮಲ್ಲಿಗೆ ಬಂದು ಕೆಟ್ಟ ಸುದ್ದಿಗಾಗಿ ಮಾನಸಿಕ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು ಅಂತ ಕ್ಲಿಫ್ಟನ್ ಹೇಳಿದ್ದಾನೆ.

ಮೆದುಳು ಭಯಂಕರ ಊದಿಕೊಂಡಿತ್ತು!

‘ಅವಳ ಮೆದುಳು ಬಹಳ ಊದಿಕೊಂಡಿತ್ತು. ವೈದ್ಯರು ಅದನ್ನು ನಿರಂತರವಾಗಿ ಮಾನಿಟರ್ ಮಾಡುತ್ತಿದ್ದರು. ಊದಿಕೊಳ್ಳುವುದು ಮುಂದುವರಿದರೆ ರಕ್ತ ಮೆದುಳಿಗೆ ತಲುಪುವುದು ನಿಂತು ಹೋಗುತ್ತದೆ ಮತ್ತು ಅವಳು ಬ್ರೇನ್ ಡೆಡ್ ಆಗುತ್ತಾಳೆ. ಹಾಗಾಗಿದ್ದೇಯಾದಲ್ಲಿ ಡಿಯಾನ್ನೆ ಸಾಯುವುದರ ಜೊತೆಗೆ ಹೊಟ್ಟೆಯಲ್ಲಿರುವ ಮಗು ಕೂಡ ಅಸುನೀಗುತ್ತದೆ’ ಅಂತ ವೈದ್ಯರು ಹೇಳಿದ್ದರೆಂದು ಕ್ಲಿಫ್ಟನ್ ಹೇಳಿದ್ದಾನೆ.

‘ಮಗುವನ್ನು ಹೊರ ತೆಗೆಯಲಾಗದಷ್ಟು ಚಿಕ್ಕದಾಗಿದೆ,’ ಎಂದು ವೈದ್ಯರು ಹೇಳಿದ್ದಾರೆ.

’ಅತಿದೊಡ್ಡ ದುರಂತ’

ದಕ್ಷಿಣ ಆಸ್ಟ್ರೇಲಿಯದ ಪ್ರೀಮಿಯರ್ ಮಾರ್ಕ್ ಮ್ಯಾಕ್ ಗೋವನ್ ಅವರು ದುಃಖತಪ್ತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ‘ಇದು ಬಾಯಲ್ಲಿ ಹೇಳಲು ಸಾಧ್ಯವಾಗದ ಘಟನೆಯಾಗಿದೆ. ಯಾರಿಗೂ ಇಂಥ ಸ್ಥಿತಿ ಬರಬಾರದು,’ ಎಂದು ಅವರು ಹೇಳಿದ್ದಾರೆ. ‘ಅತಿದೊಡ್ಡ ದುರಂತ ಇದು, ಕುಟುಂಬ ಬಹಳ ದುಃಖದಲ್ಲಿದೆ ಅಂತ ನನಗೆ ಗೊತ್ತಿದೆ,’ ಎಂದು ಗೋವನ್ ಹೇಳಿದ್ದಾರೆ.

ಶಂಕಿತ ಯುವಕನನ್ನು ಗುರುವಾರದಂದು ಬಾಲಾಪರಾಧಿಗಳ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಅವನು ಪುನಃ ಡಿಸೆಂಬರ್ 9 ರಂದು ಕೋರ್ಟ್ ಮುಂದೆ ಹಾಜರಾಗಬೇಕಿದೆ.

ಇನ್ನಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here