Home Uncategorized ಆಹಾ ಆ ದೇವರು ಹಸಿವನ್ನೆಲ್ಲ ಈ ಮರಿನೀರಿಲಿಯ ಹೊಟ್ಟೆಯಲ್ಲಿಟ್ಟೇ ಕಳಿಸಿದನೆ?

ಆಹಾ ಆ ದೇವರು ಹಸಿವನ್ನೆಲ್ಲ ಈ ಮರಿನೀರಿಲಿಯ ಹೊಟ್ಟೆಯಲ್ಲಿಟ್ಟೇ ಕಳಿಸಿದನೆ?

49
0

Viral Video : ಪ್ರಾಣಿಪ್ರಿಯರಿಗೆ ದಿನಕ್ಕೆ ನಾಲ್ಕೈದಾದರೂ ಇಂಥ ವಿಡಿಯೋ ನೋಡಿ ಮಲಗಿದರೆ ಸಾರ್ಥಕ ಮತ್ತು ಸಮಾಧಾನ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮರಿನೀರಿಲಿಗೆ (Baby Beaver) ಅದರ ಪೋಷಕಿ ಸಿರಿಂಜ್​ನಿಂದ ಹಾಲನ್ನು ಕುಡಿಸುತ್ತಿದ್ದಾರೆ. ಹಾಲನ್ನಷ್ಟೇ ಕುಡಿಯಬೇಕು ತಾನೆ? ಸಿರಿಂಜ್​ ಅನ್ನು ಬಿಟ್ಟುಕೊಡದೆ ಬಾಯಲ್ಲಿ ಗಟ್ಟಿಯಾಗಿ ಕಚ್ಚಿಹಿಡಿಯುತ್ತಿದೆ ಈ ನೀರಿಲಿ. ಆಹಾ ಎಂಥ ಆಸೆಬುರುಕ ನೀರಿಲಿ ಇದು? ನೋಡಿ ವಿಡಿಯೋ, ಪುಟ್ಟಮಗುವಿನ ಹಾಗೆ ಸಿರಿಂಜ್​ ಅನ್ನು ಎಳೆದುಕೊಳ್ಳುವುದು ಮತ್ತು ಆಗಾಗ ಕುಂಯ್​ಗುಡುವುದು.

 

 

View this post on Instagram

 

A post shared by Leslie Greene (@ellegreene2018)

@ellegreene2018 ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸಿರಿಂಜ್​ನಲ್ಲಿ ಹಾಲು ಮುಗಿದಿದ್ದರಿಂದ ಇನ್ನೊಮ್ಮೆ ಹಾಲನ್ನು ತುಂಬಿಸಿಕೊಳ್ಳಲು ಕೂಡ ಆಕೆಗೆ ಅನುವು ಮಾಡಿಕೊಡುತ್ತಿಲ್ಲ ಈ ಮರಿನೀರಿಲಿ. ಈ ವಿಡಿಯೋ ಅನ್ನು ಈತನಕ ಸುಮಾರು 6.5 ಮಿಲಿಯನ್​ ಜನರು ನೋಡಿದ್ದಾರೆ. ಎಂಥ ಮುದ್ದಾಗಿದ್ದಾನೆ ಇವ ಥೇಟ್ ಮಗುವಿನಂತೆಯೇ ಮಾಡುತ್ತಿದ್ದಾನೆ ಎಂದಿದ್ದಾರೆ ಒಬ್ಬರು. ಪಾಪ ಎಂಥ ಹಸಿವಾಗಿದೆ ಇವನಿಗೆ ಬೇಗಬೇಗ ಹಾಲು ಕೊಡಿ ಎಂದಿದ್ದಾರೆ ಇನ್ನೂ ಒಬ್ಬರು. ಪೋಷಕಿಯ ಕೈ ನೋಡಿ ಒಮ್ಮೆ, ಹೇಗೆ ಬಿಡದೇ ತಿನ್ನುತ್ತಿದ್ದಾನೆ ಎಂದಿದ್ದಾರೆ ಮತ್ತೊಬ್ಬರು.

ಇನ್ನೊಂದು ಸಿರಿಂಜ್​ ರೆಡಿ ಮಾಡಿಟ್ಟಕೊಂಡುಬಿಡಿ ಬಹಳ ಅವಸರದಲ್ಲಿದ್ಧಾನೆ ಅವ ಎಂದಿದ್ದಾರೆ ಇನ್ನೊಬ್ಬರು. ಅವನಿಗೆ ಸಾಕಾಗುವವರೆಗೂ ಕುಡಿಸಿ, ಸಾಕೆನ್ನಿಸಿದಾಗ ಅವನೇ ನಿಲ್ಲಿಸುತ್ತಾನೆ ಎಂದಿದ್ದಾರೆ ಮತ್ತೊಬ್ಬರು.

ಎಂಥ ಮುದ್ದಾದ ವಿಡಿಯೋ ಅಲ್ಲವಾ ಇದು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here