ಅಪಘಾತದ (Car Accident) ಬಳಿಕ ನಟ ನಾಗಭೂಷಣ್ (Nagabhushan) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ನಿನ್ನೆ ಸುದ್ಧಿಗೋಷ್ಠಿ ಆಯೋಜಿಸಿದ್ದು ಘಟನೆ ಬಗ್ಗೆ ವಿವರಿಸಿದರು. ಆ ಕುಟುಂಬಕ್ಕೆ ಆದ ನೋವು ಎನ್ನುವುದು ನನಗೆ ಅರಿವಿದೆ. ಅವರ ಕುಟುಂಬದ ಹತ್ತಿರದವರ ಜೊತೆ ಮಾತನಾಡಿದ್ದೇವೆ. ಆ ಕುಟುಂಬಕ್ಕೆ ಏನು ಸಹಾಯ ಬೇಕಿದ್ದರೂ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ನಾಗಭೂಷಣ್ ಜೊತೆ ಅವರ ಪರ ವಕೀಲರಾದ ದಿಲೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು. ನಾಗಭೂಷಣ್ ಮಾತನಾಡಿ, ಹಿಟ್ ಅಂಡ್ ರನ್ ಅಂತ ಹೇಳಬೇಡಿ, ಅಪಘಾತ ಬಳಿಕ ನಾನೇ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು ಎಂದು ಭಾವುಕರಾದರು. ಘಟನೆ ನಡೆದು ಅನೇಕ ದಿನಗಳ ಬಳಿಕ ನಿಮ್ಮ ಮುಂದೆ ಬಂದಿದ್ದೀನಿ, c. ಹಾಗಾಗಿ ನಾನು ತಡವಾಗಿ ಮಾತನಾಡುತ್ತಿದ್ದೀನಿ ಎಂದು ಹೇಳಿದರು.
‘ಕೋಣನಕುಂಟೆ ಕ್ರಾಸ್ ಬಳಿ ಘಟನೆ ನಡೆದಿದ್ದು, ಅವರು ನನ್ನ ಕಾರಿಗೆ ದಿಢೀರ್ ಅಂತ ಅಡ್ಡ ಬಂದರು ಅಪಘಾತವಾಯಿತು ಬಳಿಕ ನಾನೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ಆಸ್ಪತ್ರೆಗೆ ಹೋಗುವಾಗ ಪೋಲಿಸರಿಗೆ ನಾನೆ ಫೋನ್ ಮಾಡಿ ಘಟನೆ ಬಗ್ಗೆ ವಿವರಿಸಿದೆ’ ಎಂದು ಹೇಳಿದರು. ಪೊಲೀಸರು ಗಾಯಾಳುಗಳ ಸಂಬಂಧಿಗಳ ಮುಂದೆಯೇ ಆಲ್ಕೋಹಾಲ್ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡಿಸಿದರು ನಂತರ ನಾನು ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ಗೆ ಹೋದೆ ಬೆಳಗ್ಗೆ ಸ್ಟೇಷನ್ ಬೇಲ್ ಮೂಲಕ ಹೊರಬಂದೆ’ ಎಂದು ಘಟನೆ ವಿವರಿಸಿದರು.
ದುರಂತ ಎಂದರೆ ನಾಗಭೂಷಣ್ ತಂದೆ ಕೂಡ ಹಿಟ್ ಅಂಡ್ ರನ್ ಪ್ರಕರಣಲ್ಲಿಯೇ ನಿಧನಹೊಂದಿದ್ದು. ತಂದೆಯ ಸಾವನ್ನು ನೆನಪಿಸಿಕೊಂಡ ನಾಗಭೂಷಣ್ ‘ಕಳೆದುಕೊಂಡ ನೋವು ಏನು ಅಂತ ನನಗೆ ಗೊತ್ತಿದೆ. ನನ್ನ ತಂದೆ ಕೂಡ ಅಪಘಾತದಲ್ಲಿಯೇ ನಿಧನರಾಗಿದ್ದು. ಅವರನ್ನು ಸಾಯಿಸಿದ್ದು ಯಾರು ಅಂತ ಇವತ್ತಿಗೂ ನಮಗೆ ಗೊತ್ತಿಲ್ಲ. ಆದರೀಗ ನಾನು ಅವರ ನೋವಿನಲ್ಲಿ ಭಾಗಿಯಾಗಿದ್ದೀನಿ’ ಎಂದು ಭಾವುಕರಾದರು.
The post ಆ ಕುಟುಂಬಕ್ಕೆ ಆದ ನೋವು ನನಗೆ ಅರಿವಿದೆ: ನನಗೆ ಆ ಘಟನೆ ಅರಗಿಸಿಕೊಳ್ಳಲು ಇನ್ನೂ ಸಮಯ ಬೇಕು:ನಾಗಭೂಷಣ್! appeared first on Ain Live News.