Home Uncategorized ಇಂಗ್ಲೆಂಡ್ ನ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ

ಇಂಗ್ಲೆಂಡ್ ನ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ

21
0

ಹೊಸದಿಲ್ಲಿ : ಹೈದರಾಬಾದ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸಿದ್ದ ಇಂಗ್ಲೆಂಡ್ ತಂಡದ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಮಾಡಲಾಗಿದೆ.

ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರು ಮಾರ್ಕ್ ವುಡ್ ಬದಲಿಗೆ, ಎಡಗೈ ಸ್ಪಿನ್ನರ್ ಶುಐಬ್ ಬಶೀರ್ ಅವರು ಗಾಯಗೊಂಡು ಪಂದ್ಯದಿಂದ ಹೊರಗುಳಿದಿರುವ ಜಾಕ್ ಲೀಚ್ ಬದಲಿಗೆ ಆಡುವ 11ರ ಬಳಗ ಸೇರಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ತಂಡ ಭಾರತ ವಿರುದ್ಧ ಶುಕ್ರವಾರದಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಆಡುವ 11ರ ಬಳಗವನ್ನು ಗುರುವಾರ ಪ್ರಕಟಿಸಿದ್ದು, ಬಶೀರ್ ಚೊಚ್ಚಲ ಪಂದ್ಯವನ್ನಾಡಲಿದ್ದಾರೆ.

ಕಳೆದ ವಾರ ಹೈದರಾಬಾದ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 28 ರನ್ನಿಂದ ರೋಚಕ ಜಯ ಸಾಧಿಸಿದ್ದು ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಲೀಚ್ ಅವರ ಎಡ ಮೊಣಕಾಲಿಗೆ ಗಾಯವಾಗಿತ್ತು. ಎರಡನೇ ಇನಿಂಗ್ಸ್ನಲ್ಲಿ ನೋವಿನ ನಡುವೆಯೂ 10 ಓವರ್ ಬೌಲಿಂಗ್ ಮಾಡಿದಾಗ ಗಾಯದ ಸಮಸ್ಯೆ ಹೆಚ್ಚಾಗಿತ್ತು.

LEAVE A REPLY

Please enter your comment!
Please enter your name here