Home Uncategorized ಇಂದಿನ ಸಮಾಜದಲ್ಲಿ ಸತ್ಯ ಹೇಳುವುದು ಬಹಳ ಕಷ್ಟವಾಗಿದ್ದು, ಅಂತಹವರಿಗೆ ಭಯ ಹುಟ್ಟಿಸಲಾಗುತ್ತಿದೆ: ರಾಹುಲ್ ಗಾಂಧಿ

ಇಂದಿನ ಸಮಾಜದಲ್ಲಿ ಸತ್ಯ ಹೇಳುವುದು ಬಹಳ ಕಷ್ಟವಾಗಿದ್ದು, ಅಂತಹವರಿಗೆ ಭಯ ಹುಟ್ಟಿಸಲಾಗುತ್ತಿದೆ: ರಾಹುಲ್ ಗಾಂಧಿ

16
0

ಬಸವಣ್ಣ ಸತ್ಯದ‌ ಪರವಾಗಿ ಹೋರಾಡಿದವರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದರು. ಬಹಳಷ್ಟು ಜನರಿಗೆ ಸತ್ಯ ಗೊತ್ತಾಗುತ್ತೆ, ಆದರೆ ಅದನ್ನು ಹೇಳುವುದಿಲ್ಲ. ಇಂದಿನ ಸಮಾಜದಲ್ಲಿ ಸತ್ಯವನ್ನು ಹೇಳುವುದು ಬಹಳ ಕಷ್ಟವಾಗಿದೆ. ಅಂತಹವರಿಗೆ ಭಯ ಹುಟ್ಟಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ. ಬಾಗಲಕೋಟೆ: ಬಸವಣ್ಣ ಸತ್ಯದ‌ ಪರವಾಗಿ ಹೋರಾಡಿದವರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದರು. ಬಹಳಷ್ಟು ಜನರಿಗೆ ಸತ್ಯ ಗೊತ್ತಾಗುತ್ತೆ, ಆದರೆ ಅದನ್ನು ಹೇಳುವುದಿಲ್ಲ. ಇಂದಿನ ಸಮಾಜದಲ್ಲಿ ಸತ್ಯವನ್ನು ಹೇಳುವುದು ಬಹಳ ಕಷ್ಟವಾಗಿದೆ. ಅಂತಹವರಿಗೆ ಭಯ ಹುಟ್ಟಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿರುವ ಅವರು, ಇಂದು ಕೂಡಲಸಂಗಮಕ್ಕೆ ಬಂದಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. ಸಂಸತ್​ ಭವನಕ್ಕೆ ಬಸವಣ್ಣನವರ ಅನುಭವ ಮಂಟಪವೇ ಮಾದರಿ. ಬಸವಣ್ಣನವರ ಬಗ್ಗೆ ಸಿದ್ದರಾಮ ಸ್ವಾಮೀಜಿ ಚೆನ್ನಾಗಿ ಮಾತನಾಡಿದರು. ಬಸವಣ್ಣ ಇಡೀ ಜೀವನದಲ್ಲಿ ತಮ್ಮನ್ನು ತಾವು ಪ್ರಶ್ನಿಸಿಕೊಂಡಿದ್ದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಸಾಕಷ್ಟು ಶ್ರಮಿಸಿದರು. ಬಹಳಷ್ಟು ಜನರಿಗೆ ಸತ್ಯ ಗೊತ್ತಾಗುತ್ತೆ, ಆದರೆ ಅದನ್ನು ಹೇಳುವುದಿಲ್ಲ. ಇಂದಿನ ಸಮಾಜದಲ್ಲಿ ಸತ್ಯವನ್ನು ಹೇಳುವುದು ಬಹಳ ಕಷ್ಟವಾಗಿದೆ ಎಂದು ಹೇಳಿದರು.

ಬಸವಣ್ಣನವರು ಸತ್ಯ ಹೇಳಲು ಎಂದೂ ಹಿಂಜರಿಯಲಿಲ್ಲ, ಸತ್ಯಕ್ಕಾಗಿ ಮುನ್ನಡೆದರು. ಸಿದ್ದರಾಮ ಸ್ವಾಮೀಜಿ ಮಾತು ಕೇಳಿ ನನಗೆ ಅತೀವ ಸಂತಸವಾಯಿತು. ಎಲ್ಲರೂ ಸತ್ಯದ ಮಾರ್ಗದಲ್ಲಿ ನಡೆಯಿರಿ, ಎಲ್ಲರನ್ನೂ ಗೌರವಿಸಿರಿ ತಿಳಿಸಿದರು.

ಇದನ್ನೂ ಓದಿ: ಹುಬ್ಬಳ್ಳಿಗೆ ಆಗಮಿಸಿದ ರಾಹುಲ್ ಗಾಂಧಿ: ಅದ್ಧೂರಿ ಸ್ವಾಗತ ಕೋರಿದ ಕೈ ನಾಯಕರು, ಶೆಟ್ಟರ್ ಜೊತೆ ರಾಗಾ ಮಾತುಕತೆ

ಕೂಡಲಸಂಗಮಕ್ಕೆ ನನ್ನನ್ನು ಆಹ್ವಾನಿಸಿದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ, ಶರಣ ತತ್ವವನ್ನು ಬಸವಣ್ಣ ರಕ್ಷಣೆ ಮಾಡಿದರು. ಪ್ರಜಾಪ್ರಭುತ್ವ, ಸಂಸತ್ತು ಎಲ್ಲದಕ್ಕೂ ಬಸವಣ್ಣ ಪ್ರೇರಣೆ. ಸಮಾಜದಲ್ಲಿ ಅಂಧತ್ವವಿದ್ದಾಗ ಬಸವಣ್ಣನವರ ಬೆಳಕಿನ‌ ಹಾದಿ ತೋರಿದರು ಎಂದರು.

ಇನ್ನೊಬ್ಬರನ್ನು ಪ್ರಶ್ನೆ ಮಾಡೋದು ಸುಲಭ. ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳೋದು ಕಷ್ಟದ ಕೆಲಸ. 8ನೇ ವಯಸ್ಸಿನಲ್ಲೇ ಜನಿವಾರ ಧರಿಸಲು ನಿರಾಕರಣೆ ಮಾಡಿದರು. 8ನೇ ವಯಸ್ಸಿನಲ್ಲಿ ಬಸವಣ್ಣನವರಿಗೆ ಇಂತಹ ಯೋಚನೆ ಹೇಗೆ ಬಂತು. ತಮ್ಮ ಸ್ನೇಹಿತನ‌ ಮೇಲೆ ಆಕ್ರಮಣ ನಡೆದಿತ್ತು. ಅವರ ಮೇಲಿನ ಶೋಷಣೆಯಿಂದ ಬಸವಣ್ಣ ಅವರು ಜಾಗೃತರಾದರು. ಜೀವನ ಪೂರ್ತಿ ತಮ್ಮನ್ನು ತಾವು ಜಾತಿವಾದ, ಲೋಕತಂತ್ರ, ಶೋಷಣೆ, ಸಮಾಜದ ಬಗ್ಗೆ ತಮ್ಮನ್ನು ತಾವು‌ ಪ್ರಶ್ನೆ ಮಾಡಿಕೊಂಡರು. ಆ ಪ್ರಶ್ನೆಗೆ ಉತ್ತರ ಕಂಡಕೊಂಡು ಜೀವನದುದ್ದಕ್ಕೂ ಪಾಲಿಸಿದರು.

#WATCH | Congress leader Rahul Gandhi, Karnataka LoP and senior Congress leader Siddaramaiah attend the Basava Jayanti celebration at Basava Mantapa Centre, Bagalkote pic.twitter.com/1RHpqm4WTg
— ANI (@ANI) April 23, 2023

ಸಮಾಜದಲ್ಲಿ ಸತ್ಯ ತಿಳಿದು ಕೊಂಡರೂ ಪ್ರಶ್ನೆ ಮಾಡಲು ಯಾರೂ ಮುಂದಾಗಲ್ಲ. ಜನ ಶೋಷಣೆ, ತಪ್ಪು ಕಂಡರೂ ಅದಕ್ಕೆ ಧ್ವನಿ ಎತ್ತಲು ಹೆದರುತ್ತಾರೆ. ಆದರೆ ಬಸವಣ್ಣ ಹಿಂದೇಟು ಹಾಕಲಿಲ್ಲ. ಸಮಾಜ ಪರಿವರ್ತನೆಗೆ ಮುಂದಾದರು ಎಂದು ಹೇಳಿದರು.

ಬಸವಣ್ಣನವರ ಮೂರ್ತಿ‌ ಮುಂದೆ ಹೂವು ಅರ್ಪಿಸಿದೆವು. ಅವರು ಬದುಕಿದ್ದಾಗ ಅವರ ಮೇಲೆ ಟೀಕೆಗಳನ್ನು ಮಾಡಲಾಗಿತ್ತು, ನೋವಿಸಿದರೂ ಅವರು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ. ಆ ಧೈರ್ಯಕ್ಕೆ ಅವರಿಗೆ ಇಂದು ಹೂವು ಅರ್ಪಿಸಿದ್ದೇವೆ. ಸ್ವಾಮೀಜಿ ಭಾಷಣ ಕೇಳಿ ಬಸವಣ್ಣನವರ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಯಿತು. ಬಸವಣ್ಣನವರ ಬಗ್ಗೆ ಹಿಂದೆ ಬಂದಾಗಲೇ ತಿಳಿದಿದ್ದೇನೆ. ಅವರ ತತ್ವಗಳಿಂದ ಜೀವನಕ್ಕೆ ಮಾರ್ಗ ಸಿಗುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here