Home Uncategorized ಇಂದಿರಾ ಕ್ಯಾಂಟೀನ್‌ನ ಹೊಸ ಮೆನು ಸಿದ್ಧ: ಮಂಗಳೂರು ಬನ್ಸ್‌, ಬ್ರೆಡ್‌ ಜಾಮ್‌, ರಾಗಿ ಮುದ್ದೆ?

ಇಂದಿರಾ ಕ್ಯಾಂಟೀನ್‌ನ ಹೊಸ ಮೆನು ಸಿದ್ಧ: ಮಂಗಳೂರು ಬನ್ಸ್‌, ಬ್ರೆಡ್‌ ಜಾಮ್‌, ರಾಗಿ ಮುದ್ದೆ?

22
0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಮೆನುವಿಗಾಗಿ ಹೆಚ್ಚುವರಿ ಭಕ್ಷ್ಯಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಮೆನುವಿಗಾಗಿ ಹೆಚ್ಚುವರಿ ಭಕ್ಷ್ಯಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಈ ಮೆನುವಿನಲ್ಲಿ ಬ್ರೆಡ್, ಮಂಗಳೂರು ಬನ್ಸ್, ರಾಗಿ ಮುದ್ದೆ ಮತ್ತು ಪಾಯಸವಿದೆ.

ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಸಬ್ಸಿಡಿ ದರದಲ್ಲಿ ಆಹಾರವನ್ನು ಒದಗಿಸುವ ಇಂದಿರಾ ಕ್ಯಾಂಟೀನ್‌ ಮೆನುವಿನಲ್ಲಿ ಇನ್ನಷ್ಟು ಹೊಸ ಆಹಾರ ಪದಾರ್ಥಗಳ ಸೇರ್ಪಡೆಯಾಗಿದೆ. ಬ್ರೆಡ್ ಮತ್ತು ಜಾಮ್, ಮಂಗಳೂರು ಬನ್ಸ್, ಇಡ್ಲಿ ಮತ್ತು ಉಪ್ಪಿಟ್ಟು ಬೆಳಗಿನ ಉಪಾಹಾರಕ್ಕಾಗಿ ನೀಡಲಾಗುವುದು.

ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರು, ಪಲ್ಯ, ಬಜ್ಜಿಯೊಂದಿಗೆ ರಾಗಿ ಮುದ್ದೆ, ಸೊಪ್ಪಿನ ಸಾರು ಬಡಿಸಲು ಮುಂದಾಗಿದೆ. ಪರ್ಯಾಯ ದಿನಗಳಲ್ಲಿ ಪಾಯಸ ಮತ್ತು ಸ್ನ್ಯಾಕ್ಸ್ ನೀಡಲಾಗುವುದು. ಇಲ್ಲಿಯವರೆಗೆ, ಮೊಟ್ಟೆ ಪೂರೈಸುವ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ನಲ್ಲಿ ಊಟದ ಜೊತೆಗೆ ಮೊಟ್ಟೆ: ಸರ್ಕಾರಕ್ಕೆ ಬಿಬಿಎಂಪಿ ಮಾಜಿ ಸದಸ್ಯರ ಒತ್ತಾಯ

ಗ್ರಾಹಕರಿಗೆ ಹೆಚ್ಚುವರಿ ಆಯ್ಕೆಗಳು ಇರುತ್ತದೆ, ಆದರೆ ಇವುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ  ಇರುವುದಿಲ್ಲ. ಹೆಚ್ಚುವರಿ ವೆಚ್ಚವನ್ನು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಭರಿಸಲಿದೆ. ಆದರೆ, ಈಗಿರುವ ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಪಾಯಸ, ಮುದ್ದೆ ಮತ್ತು ರೊಟ್ಟಿ ಸೇರಿಸುವ ಕುರಿತು ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಕಳುಹಿಸಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ಹೇಳಿದ್ದಾರೆ. “ಮಧ್ಯಾಹ್ನ ಮತ್ತು ರಾತ್ರಿ ನೀಡುವ ಊಟದ  ಪ್ರಮಾಣವು ಸಮನಾಗಿರಬೇಕು ಎಂದು ಮಾತ್ರ ನಾವು ಸೂಚಿಸಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ:  ಇನ್ಮುಂದೆ ಉತ್ತರ ಕರ್ನಾಟಕದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪ್ರತ್ಯೇಕ ಮೆನು!

ಈ ಹಿಂದೆ 175 ಇಂದಿರಾ ಕ್ಯಾಂಟೀನ್‌ಗಳು ಮತ್ತು 12 ಮೊಬೈಲ್ ಕ್ಯಾಂಟೀನ್‌ಗಳಲ್ಲಿ 5 ರೂ.ಗೆ ಇಡ್ಲಿ-ವಡೆ, ಪೊಂಗಲ್, ಖಾರ ಭಾತ್ ನೀಡಲಾಗುತ್ತಿತ್ತು. ಅದೇ ರೀತಿ ಊಟಕ್ಕೆ ಅನ್ನ ಸಾಂಬಾರ್, ಬಿಸಿಬೇಳೆ ಬಾತ್ ಮತ್ತು ಬಜ್ಜಿಗೆ ಊಟಕ್ಕೆ 10 ರೂ.  ನಿಗದಿ ಪಡಿಸಲಾಗಿತ್ತು.  ಇಂದಿರಾ ಕ್ಯಾಂಟಿನ್ ನಲ್ಲಿ ಜನಸಂದಣಿ ಕಡಿಮೆಯಾದ ಕಾರಣ ಬಿಜೆಪಿ ಸರ್ಕಾರ, ಬೆಂಗಳೂರು ದಕ್ಷಿಣ ಭಾಗದ ಎಂಟು ಕ್ಯಾಂಟೀನ್‌ಗಳನ್ನು ಮುಚ್ಚಿತ್ತು.

LEAVE A REPLY

Please enter your comment!
Please enter your name here