Home Uncategorized ಇಂದು ದಿಲ್ಲಿಯ ವಾಯು ಗುಣಮಟ್ಟ ʼತೀವ್ರʼ ಕುಸಿತ; ನಿರ್ಮಾಣ ಕೆಲಸಕ್ಕೆ ತಡೆ, ಬಿ ಎಸ್ 3,4...

ಇಂದು ದಿಲ್ಲಿಯ ವಾಯು ಗುಣಮಟ್ಟ ʼತೀವ್ರʼ ಕುಸಿತ; ನಿರ್ಮಾಣ ಕೆಲಸಕ್ಕೆ ತಡೆ, ಬಿ ಎಸ್ 3,4 ವಾಹನಗಳಿಗೆ ನಿಷೇಧ

37
0

ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ವಾಯು ಗುಣಮಟ್ಟ ಸೂಚಕ (ಎಕ್ಯುಐ)ಶನಿವಾರ ತೀವ್ರ ವಿಭಾಗದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಇಂದು ದಾಖಲಾದ ಎಕ್ಯುಐ 447 ಎಂದು ತಿಳಿದು ಬಂದಿದೆ.

ದಿಲ್ಲಿಯಲ್ಲಿ ಅನಗತ್ಯ ನಿರ್ಮಾಣ ಕೆಲಸ ಮತ್ತು ಬಿಎಸ್‌ III- ಪೆಟ್ರೋಲ್‌ ಮತ್ತು ಬಿಎಸ್ IV-‌ ಡೀಸೆಲ್‌ ಚತುಶ್ಚಕ್ರ ವಾಹನಗಳ ಸಂಚಾರವನ್ನು ಕೇಂದ್ರ ನಿಷೇಧಿಸಿದೆ.

ದಟ್ಟ ಮಂಜು ಮತ್ತು ಕಡಿಮೆ ಗಾಳಿಯ ವೇಗವು ಎಕ್ಯುಐ ಮತ್ತಷ್ಟು ತೀವ್ರಗೊಳ್ಳಲು ಕಾರಣವಾಗಿದೆ. ನಗರದ ತಾಪಮಾನವೂ 9.6 ಡಿಗ್ರಿ ಸೆಲ್ಸಿಯಸ್‌ ಆಗಿದ್ದು ಈ ಋತುವಿನ ಸರಾಸರಿ ತಾಪಮಾನ ದಾಖಲಾತಿಗಿಂತ ಎರಡು ಡಿಗ್ರಿಗಳಷ್ಟು ಅಧಿಕವಾಗಿದೆ.

LEAVE A REPLY

Please enter your comment!
Please enter your name here