ಬೆಂಗಳೂರು: ತುರ್ತು ಕಾಮಗಾರಿ ಹಿನ್ನೆಲೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದ ಬೆಸ್ಕಾಂ (BESCOM), ಬೆಂಗಳೂರಿನ 66/11 ಕೆವಿ ಬಾಣಸವಾಡಿ ಸ್ಟೇಷನ್ನಲ್ಲಿ ತುರ್ತು ನಿರ್ವಹಣೆ ಕೆಲಸ ನಡೆಯಲಿದೆ. ಈ ಹಿನ್ನಲೆ ಡಿಸೆಂಬರ್ 13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಗರದ ಉತ್ತರ ಭಾಗದ ಜನರು ವಿದ್ಯುತ್ ಕಡಿತ (Bengaluru Power Cut) ಎದುರಿಸಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಇದನ್ನೂ ಓದಿ: ಮಕ್ಕಳ ಕೈಗೆ ಮೊಬೈಲ್ ಕೊಡಲ್ಲ: ಸ್ಮಾರ್ಟ್ಫೋನ್ ವ್ಯಸನ ತಗ್ಗಿಸಲು ಪೋಷಕರಿಂದ ಪತ್ರ ಪಡೆಯುತ್ತಿವೆ ಬೆಂಗಳೂರು ಶಾಲೆಗಳು
ಇಂದು ಎಲ್ಲೆಲ್ಲಿ ಕರೆಂಟ್ ಇರಲ್ಲ?
ಹೊರಮಾವು ಪಿ ಮತ್ತು ಟಿ ಲೇಔಟ್, ನಿಸರ್ಗ ಕಾಲೋನಿ, ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್‌ಗ್ರೋವ್, ದೇವಮತ ಶಾಲೆ, ಅಮರ್‌ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೋನಿ ಎಕ್ಸ್ಟೆನ್ಷನ್, ಮತ್ತು ಸುತ್ತಲಿನ ಪ್ರದೇಶ, ಹೆಚ್.ಆರ್.ಬಿ.ಆರ್. ಲೇಔಟ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿ.ಡಬ್ಲ್ಯೂ.ಎಸ್. ಎಸ್.ಬಿ ವಾಟರ್‌ಟ್ಯಾಂಕ್, ಹೆಣ್ಣೂರುಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತನೂರು, ವಡಾರ ಪಾಳ್ಯ, ಜಾನಕೀರಾಮ್ ಲೇಔಟ್, ಕೊತನೂರು, ಬಿ.ಡಿ.ಎಸ್. ಗಾರ್ಡನ್, ಬೆನ್ ಸತ್ಯಎನ್‌ಕ್ಲೇವ್, ಪ್ರಕೃತಿ ಲೇಔಟ್ ಮತ್ತು ಸುತ್ತಲಿನ ಪ್ರದೇಶ, ಹೊಯ್ಸಳನಗರ, ಬೃಂದಾವನ ಲೇಔಟ್, ಜಯಂತಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಪವರ್ ಕಟ್ ಆಗಲಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ