Home Uncategorized ಇತರೆ ಯೋಜನೆಗಳ ಫಲಾನುಭವಿಗಳಿಗೂ ಸಿಗಲಿದೆ 'ಗೃಹ ಜ್ಯೋತಿ ಭಾಗ್ಯ'!

ಇತರೆ ಯೋಜನೆಗಳ ಫಲಾನುಭವಿಗಳಿಗೂ ಸಿಗಲಿದೆ 'ಗೃಹ ಜ್ಯೋತಿ ಭಾಗ್ಯ'!

22
0

ಈ ಹಿಂದೆ ವಿವಿಧ ಯೋಜನೆಗಳಡಿ ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದ ರೈತರು ಮತ್ತು ಗ್ರಾಹಕರಿಗೂ ಗೃಹ ಜ್ಯೋತಿ ಭಾಗ್ಯ ಲಭ್ಯವಾಗಲಿದೆ. ಇದಕ್ಕಾಗಿ ಪ್ರತ್ಯೇಕವಾಗಿ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು: ಈ ಹಿಂದೆ ವಿವಿಧ ಯೋಜನೆಗಳಡಿ ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದ ರೈತರು ಮತ್ತು ಗ್ರಾಹಕರಿಗೂ ಗೃಹ ಜ್ಯೋತಿ ಭಾಗ್ಯ ಲಭ್ಯವಾಗಲಿದೆ. ಇದಕ್ಕಾಗಿ ಪ್ರತ್ಯೇಕವಾಗಿ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಹಾಗೂ ಕಟೀರ ಜ್ಯೋತಿಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆಂದು ಇಂಧನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

“ಗ್ರಾಹಕರು ನೋಂದಾಯಿಸಿಕೊಂಡಿದ್ದರೂ, ಇಲ್ಲದಿದ್ದರೂ ಸಮಸ್ಯೆಗಳಿಲ್ಲ. ಇಲಾಖೆ ಬಳಿ ಜನರ ಆರ್‌ಆರ್ ಸಂಖ್ಯೆ ಮತ್ತು ಆಧಾರ್ ವಿವರಗಳಿರುವುದರಿಂದ ಫಲಾನುಭವಿಗಳಿಗೆ ಗೃಹ ಜ್ಯೋತಿ ಯೋಜನೆ ಲಭಾ ಸಿಗುವಂತೆ ಮಾಡಲಾಗುತ್ತದೆ. ಇತರೆ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಆಗಸ್ಟ್ 1 ರಿಂದ ಗ್ರಾಹಕರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸಿಗಲಿದೆ ಎಂದು ಹೇಳಿದ್ದಾರೆ.

ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರು ಕುಟೀರ, ಅಮೃತ ಮತ್ತು ಭಾಗ್ಯಜ್ಯೋತಿ ಯೋಜನೆಗಳ ಲಾಭವನ್ನು ಪಡೆಯಲು ವಿದ್ಯುತ್ ಬಳಕೆಯನ್ನು ಮತ್ತಷ್ಟು ಕಡಿಮೆ ಮಾಡುತ್ತಾರೆ. ಗೃಹ ಜ್ಯೋತಿ ಅಡಿಯಲ್ಲಿ ನೋಂದಾಯಿಸಿದ ಇತರರು ಯಾವುದೇ ಶುಲ್ಕವಿಲ್ಲದೆ ಹೆಚ್ಚಿನ ವಿದ್ಯುತ್ ಅನ್ನು ಬಳಸಬಹುದಾಗಿದೆ ತಿಳಿಸಿದರು.

ಇಂಧನ ಸಚಿವ ಕೆಜೆ ಜಾರ್ಜ್ ಅವರು ಮಾತನಾಡಿ, ಗೃಹ ಜ್ಯೋತಿ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸರ್ಕಾರ ಇಂತಹ ಕ್ರಮಗಳ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಹಿಂದಿನ ಸರ್ಕಾರಗಳು ಐಪಿ ಸೆಟ್‌ಗಳು ಮತ್ತು ರೈತರಿಗೆ ವಾಣಿಜ್ಯ ವಿದ್ಯುತ್ ಪೂರೈಕೆಗೆ ಜಾರಿಗೆ ತಂದಿದ್ದ ಸಬ್ಸಿಡಿ ಯೋಜನೆಗಳು ಮುಂದುವರೆಯಲಿದೆ. ಮುಂದಿನ ಬಿಲ್ಲಿಂಗ್ ನಲ್ಲಿ ಎಲ್ಲಾ ಗ್ರಾಹಕರು ಯೋಜನೆಯ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here