ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷಿ ಆದಿತ್ಯ-ಎಲ್1 ಮಿಷನ್ ಇಂದು ತನ್ನ ಗಮ್ಯಸ್ಥಾನವಾಗಿರುವ ಎಲ್-1 ಪಾಯಿಂಟ್ ಅನ್ನು ಯಶಸ್ವಿಯಾಗಿ ತಲುಪಿದೆ. ಭಾರತ ಇನ್ನೊಂದು ಮೈಲಿಗಲ್ಲು ಸಾಧಿಸಿದೆ ಎಂದು ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಎಲ್1 ಪಾಯಿಂಟ್ ಬಾಹ್ಯಾಕಾಶ ನೌಕೆಯನ್ನು ಭೂಮಿಯಿಂದ ಅಂದಾಜು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಸೂಕ್ತ ಸ್ಥಳದಲ್ಲಿ ನಿಲ್ಲಿಸಿದೆ ಹಾಗೂ ಇಲ್ಲಿಂದ ಸೂರ್ಯನನ್ನು ಯಾವುದೇ ಅಡಚಣೆಯಿಲ್ಲದೆ ನೋಡಿ ಅಧ್ಯಯನ ನಡೆಸಬಹುದಾಗಿದೆ.
ಈ ಬಾಹ್ಯಾಕಾಶ ನೌಕೆ ಲ್ಯಾಗ್ರೇಂಜ್ ಪಾಯಿಂಟ್ ಅಥವಾ ಎಲ್1 ಪಾಯಿಂಟ್ ಸುತ್ತದ ಹೇಲೋ ಕಕ್ಷೆ ತಲುಪಿದೆ. ಇಲ್ಲಿಂದ ಅದು ಸೂರ್ಯನನ್ನು ನಿರಂತರವಾಗಿ ನೋಡಿ ಸೌರ ಚಟುವಟಿಕೆಗಳ ಅಧ್ಯಯನ ನಡೆಸಲಿದೆ.