ಲಾಸ್ ಏಂಜಲೀಸ್: ತಮ್ಮ 32ನೇ ಜನ್ಮದಿನಾಚರಣೆಯನ್ನು ಇತ್ತೀಚೆಗಷ್ಟೆ ಆಚರಿಸಿಕೊಂಡಿದ್ದ ಖ್ಯಾತ ಸ್ಟ್ಯಾಂಡಪ್ ಕಾಮೆಡಿಯನ್ ನೀಲ್ ನಂದ ನಿಧನರಾಗಿದ್ದಾರೆ. ‘ಜಿಮ್ಮಿ ಕಿಮ್ಮೆಲ್ ಲೈವ್’ ಹಾಗೂ ಕಾಮಿಡಿ ಸೆಂಟ್ರಲ್ ನಲ್ಲಿ ಪ್ರಸಾರವಾಗಿದ್ದ ‘ಆ್ಯಡಮ್ ಡಿವೈನ್ಸ್ ಹೌಸ್ ಪಾರ್ಟಿ’ಯಲ್ಲೂ ಕಾಣಿಸಿಕೊಂಡಿದ್ದ ನೀಲ್ ನಂದ ಅವರ ವ್ಯವಸ್ಥಾಪಕ ಗ್ರೇಗ್ ವೈಸ್ ಈ ವಿಷಯವನ್ನು ದೃಢಪಡಿಸಿದ್ದಾರೆ. ಅವರು ನೀಲ್ ನಂದ 19 ವರ್ಷದವರಾಗಿದ್ದಾಗಿನಿಂದ ಅವರ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು indiatoday.in ವರದಿ ಮಾಡಿದೆ.
ಇತ್ತೀಚೆಗಷ್ಟೆ ತಮ್ಮ 32ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದ ಲಾಸ್ ಏಂಜಲೀಸ್ ಮೂಲದ ನೀಲ್ ನಂದ ಕೆಲವು ದಿನಗಳ ಹಿಂದೆ ನಿಧನರಾಗಿದ್ದಾರೆ. ಅವರ ಸಾವಿನ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.
ಈ ಕುರಿತು ಪೋಸ್ಟ್ ಮಾಡಿರುವ The Port Comedy Club, “ಮಹಾನ್ ಹಾಸ್ಯ ಕಲಾವಿದ ನೀಲ್ ನಂದ ಅವರಿಗೆ ಭಾರವಾದ ಹೃದಯದಿಂದ ವಿದಾಯ ಹೇಳುತ್ತೇವೆ. ಈ ಸುದ್ದಿಯಿಂದ ನಿಜಕ್ಕೂ ಆಘಾತವಾಗಿದೆ” ಎಂದು ಸಂತಾಪ ವ್ಯಕ್ತಪಡಿಸಿದೆ.