Home Uncategorized ಇದೀಗ ಹೊಸಕೆರೆ ಕೆರೆಯಲ್ಲಿ ನೊರೆ, ಬಿ‌ಡಬ್ಲ್ಯೂ‌ಎಸ್ ಎಸ್ ಬಿ ಪೈಪ್ ಗಳತ್ತ ಬೊಟ್ಟು ಮಾಡಿದ ಬಿಬಿಎಂಪಿ!

ಇದೀಗ ಹೊಸಕೆರೆ ಕೆರೆಯಲ್ಲಿ ನೊರೆ, ಬಿ‌ಡಬ್ಲ್ಯೂ‌ಎಸ್ ಎಸ್ ಬಿ ಪೈಪ್ ಗಳತ್ತ ಬೊಟ್ಟು ಮಾಡಿದ ಬಿಬಿಎಂಪಿ!

53
0

ಈ ಹಿಂದೆ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಲ್ಲಿ ನೊರೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಇದೀಗ ಕೆಂಗೇರಿಯ ಹೊಸಕೆರೆ ಕೆರೆಯಿಂದಲೂ ನೊರೆ ವರದಿಯಾಗಿದೆ. ಭಾರೀ ಮಳೆಯಿಂದ ಚರಂಡಿಯ ಕೊಳಚೆ ನೀರು ಬಿಡಬ್ಲ್ಯೂಎಸ್ ಎಸ್ ಬಿ ಪೈಪ್ ಗಳ ಮೂಲಕ ಕೆರೆಗೆ ಬರುತ್ತಿರುವುದರಿಂದ ನೊರೆ ಉಂಟಾಗಿದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಹೇಳಿದ್ದಾರೆ. ಬೆಂಗಳೂರು: ಈ ಹಿಂದೆ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಲ್ಲಿ ನೊರೆ ಕಾಣಿಸಿಕೊಂಡು ಸುದ್ದಿಯಾಗಿತ್ತು. ಇದೀಗ ಕೆಂಗೇರಿಯ ಹೊಸಕೆರೆ ಕೆರೆಯಿಂದಲೂ ನೊರೆ ವರದಿಯಾಗಿದೆ. ಭಾರೀ ಮಳೆಯಿಂದ ಚರಂಡಿಯ ಕೊಳಚೆ ನೀರು ಬಿಡಬ್ಲ್ಯೂಎಸ್ ಎಸ್ ಬಿ ಪೈಪ್ ಗಳ ಮೂಲಕ ಕೆರೆಗೆ ಬರುತ್ತಿರುವುದರಿಂದ ನೊರೆ ಉಂಟಾಗಿದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಹೇಳಿದ್ದಾರೆ.  1.5 ಕಿ.ಮೀ ಚರಂಡಿಯ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು. 

ವಿಶ್ವೇಶ್ವರಯ್ಯ ಲೇಔಟ್‌ಗೆ ಹೊಂದಿಕೊಂಡಿರುವ ಕೆರೆಯಲ್ಲಿ ನಿತ್ಯವೂ ಅಕ್ರಮವಾಗಿ ತ್ಯಾಜ್ಯ ಸುರಿಯುವುದು, ದುರ್ವಾಸನೆ ಮುಂತಾದ ಸಮಸ್ಯೆ ಎದುರಿಸುವಂತಾಗಿದೆ ಎಂದು ಕೆಂಗೇರಿ ನಿವಾಸಿ ಟಿಎಂ ಸತೀಶ್ ಹೇಳುತ್ತಾರೆ. ಪ್ಲಾಸ್ಟಿಕ್ ವಸ್ತುಗಳು ಮತ್ತು ಥರ್ಮಾ ಕೋಲ್‌ಗಳಂತಹ ಕಸವನ್ನು ಅದರಲ್ಲಿ ಸುರಿಯಲಾಗುತ್ತದೆ. ಅದರ ಮೇಲೆ ಕೊಳಚೆ ನೀರು ಕೆರೆಗೆ ಸೇರುತ್ತಿದ್ದು, ದುರ್ವಾಸನೆ ಬೀರುತ್ತಿದೆ. ನೊರೆ ಬರುವುದನ್ನು ನೋಡುತ್ತಿರುವುದು ಇದೇ ಮೊದಲು. ಇದೊಂದು ದೊಡ್ಡ ಕೆರೆಯಾಗಿದ್ದು,  ನವಿಲುಗಳಿಂದ ಸಮೃದ್ಧವಾದ ಜೀವ ವೈವಿಧ್ಯತೆಯ ಪ್ರದೇಶವಾಗಿದೆ ಎಂದು ಅವರು ತಿಳಿಸಿದರು. ಜಲಮಂಡಳಿ ನಿಗಾ ಇಲ್ಲದೇ ಇರುವುದರಿಂದ ಅಕ್ರಮವಾಗಿ ಕಸ ಸುರಿಯಲಾಗುತ್ತಿದೆ ಎಂದು ದೂರಿದರು.

ಈ ಕೆರೆಯು 44 ಎಕರೆ ವಿಸ್ತೀರ್ಣ ಹೊಂದಿದ್ದು, ಮೊದಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿತ್ತು. ಇದನ್ನು 2019 ರಲ್ಲಿ ಪಾಲಿಕೆಗೆ ಹಸ್ತಾಂತರಿಸಲಾಯಿತು, ಆದರೆ ನಾಗರಿಕ ಸಂಸ್ಥೆ ಇದನ್ನು ಇನ್ನೂ ಅಭಿವೃದ್ಧಿಪಡಿಸಿಲ್ಲ. ಕೆರೆಗೆ ಕೊಳಚೆ ನೀರು ಸೇರುತ್ತಿರುವುದರಿಂದ ನೊರೆ ಸಮಸ್ಯೆ ಶುರುವಾಗಿದೆ. ಸ್ಥಳದಲ್ಲಿ ಬೃಹತ್ ಬಂಡೆಯಿದ್ದು, ಕಾಮಗಾರಿ ಪೂರ್ಣಗೊಳ್ಳಲು ಎರಡು ತಿಂಗಳು ಬೇಕು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಕೆಲಸ ಮುಗಿದರೆ ನೊರೆ ಸಮಸ್ಯೆ ಮುಗಿಯುತ್ತದೆ ಎಂದು ಹರಿದಾಸ್ ಹೇಳಿದರು. ಸುರಕ್ಷತೆ ಮತ್ತು ಭದ್ರತೆಗಾಗಿ ಗೃಹರಕ್ಷಕರನ್ನು ನಿಯೋಜಿಸುವುದಾಗಿ ಬಿಬಿಎಂಪಿ ಕೆರೆ ಸಂರಕ್ಷಣಾ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here