ಹೈದರಾಬಾದ್: ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಚಿತ್ರದ ಕಾರ್ಯಕ್ರಮದಲ್ಲಿ ‘ರಂಗಸ್ಥಳಂ’ ನಟ ಮಹೇಶ್ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ಶ್ರೀಲೀಲಾ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ನಟ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಅಭಿನಯದ ಬಹು ನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀಲೀಲಾರೊಂದಿಗೆ ಸಹನಟ ರಂಗಸ್ಥಳಂ ಮಹೇಶ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿತ್ತು.
ಇದೀಗ ಈ ವೈರಲ್ ವಿಡಿಯೋ ಮತ್ತು ಸಹನಟ ಮೇಲಿನ ಆರೋಪಗಳ ಕುರಿತು ಸ್ವತಃ ನಟಿ ಶ್ರೀಲೀಲಾ ಸ್ಪಷ್ಟನೆ ನೀಡಿದ್ದಾರೆ. ಇದೇ ಉಸ್ತಾದ್ ಭಗತ್ ಸಿಂಗ್ ಚಿತ್ರ ಕಾರ್ಯಕ್ರಮದ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಶ್ರೀಲೀಲಾ ಅಂದು ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಬೀಪ್ ಶಬ್ದ
“ಆ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿತು. ಆದಾಗ್ಯೂ, ವಾಸ್ತವದಲ್ಲಿ, ಅಲ್ಲಿ ಯಾವುದೇ ವಿವಾದ ನಡೆದಿಲ್ಲ. ಇದು ಕೇವಲ ತಪ್ಪು ಕಲ್ಪನೆಯಾಗಿದೆ. ಕಾರ್ಯಕ್ರಮದ ಸಮಯದಲ್ಲಿ ಇದ್ದಕ್ಕಿದ್ದಂತೆ ‘ಬೀಪ್’ ಶಬ್ದ ಕೇಳಿದ್ದರಿಂದ ನಾನು ಹಿಂದಕ್ಕೆ ತಿರುಗಿ ನೋಡಿದೆ. ಆ ಕ್ಷಣದಲ್ಲಿ, ತಮ್ಮ ಮೊಬೈಲ್ ಫೋನ್ ನಟ ಮಹೇಶ್ ಬಳಿ ಇತ್ತು. ವೇದಿಕೆ ಏರುವ ಮೊದಲು ಮಹೇಶ್ ಗೆ ನಾನು ಮೊಬೈಲ್ ನೀಡಿದ್ದೆ. ನಾನು ಮೊಬೈಲ್ ಗಾಗಿ ನೋಡುತ್ತಿದ್ದೇನೆ ಎಂದು ತಿಳಿದ ಮಹೇಶ್ ಮೊಬೈಲ್ ನನ್ನ ಬಳಿಯೇ ಇದೆ ಎನ್ನುವ ರೀತಿಯಲ್ಲಿ ಸನ್ಹೆ ಮಾಡಿದರು ಎಂದು ನಟಿ ಶ್ರೀಲೀಲಾ ಹೇಳಿದ್ದಾರೆ.
ನಾನು ನೋಡಿದಾಗ ಮಹೇಶ್ ಬಹುಶಃ ನಾನು ನನ್ನ ಫೋನ್ಗಾಗಿ ಹುಡುಕುತ್ತಿದ್ದೇನೆ ಎಂದು ಅವರು ಭಾವಿಸಿದರು. ಅದೇ ಸಮಯದಲ್ಲಿ, ನಾನು ಧ್ವನಿಯ ದಿಕ್ಕಿನಲ್ಲಿಯೂ ನೋಡುತ್ತಿದ್ದೆ. ನಾವು ಸನ್ನೆಗಳ ಮೂಲಕ ಪರಸ್ಪರ ಸಂವಹನ ನಡೆಸಿದ್ದು. ಅದನ್ನು ಹೊರತುಪಡಿಸಿ, ಯಾವುದೇ ಸಮಸ್ಯೆ ಇರಲಿಲ್ಲ. ನೀವು ಊಹಿಸಿದ ರೀತಿಯಲ್ಲಿ ಅಲ್ಲಿ ಏನೂ ನಡೆದಿಲ್ಲ. ಇಂತಹ ಸಣ್ಣ ಕ್ಲಿಪ್ಗಳನ್ನು ಇಟ್ಟುಕೊಂಡು ಅದಕ್ಕೆ ಬೇರಯದೇ ಅರ್ಥ ಕಲ್ಪಿಸುವುದು ಉದ್ಯಮದಲ್ಲಿ ಸಾಮಾನ್ಯವಾಗಿದೆ. ಇದು ಸಂಪೂರ್ಣ ತಪ್ಪು ತಿಳುವಳಿಕೆ” ಎಂದು ಶ್ರೀಲೀಲಾ ಹೇಳಿದ್ದಾರೆ.
అలా ఏమి లేదు.. ఆరోజు ఏం జరిగిందంటే?#Sreeleela about her Viral Clip with #MaheshAchanta ! pic.twitter.com/tk8817WJtG
— Rajesh Manne (@rajeshmanne1) March 18, 2026
ಮಹೇಶ್ ತುಂಬಾ ಒಳ್ಳೆಯ ವ್ಯಕ್ತಿ
ಇದೇ ವೇಳೆ ಮಹೇಶ್ ಬಗ್ಗೆ ಮಾತನಾಡಿದ ಶ್ರೀಲೀಲಾ, “ಈ ಚಿತ್ರದಲ್ಲಿ ನಾನು ಅವರೊಂದಿಗೆ ಅನೇಕ ದೃಶ್ಯಗಳನ್ನು ಮಾಡಿದ್ದೇನೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ಅವರನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು. ಅಂತೆಯೇ ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಟ್ರೋಲಿಂಗ್ ಬಗ್ಗೆ ಶ್ರೀಲೀಲಾ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
“ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸುತ್ತಿರುವುದನ್ನು ನೋಡಿದಾಗ ನನಗೆ ತುಂಬಾ ಆಘಾತವಾಯಿತು. ಯಾವುದೇ ಸತ್ಯದ ಆಧಾರವಿಲ್ಲದೆ ಇಂತಹ ವದಂತಿಗಳನ್ನು ಹರಡುವುದು ಸರಿಯಲ್ಲ. ಒಂದು ವೇಳೆ ಅಂತಹ ಸಮಸ್ಯೆ ನಮಗೆ ಎದುರಾದರೆ ನಾವೇ ಖಂಡಿತಾ ಮುಂದೆ ಬಂದು ನಾವೇ ಪರಿಹರಿಸಿಕೊಳ್ಳುತ್ತೇವೆ. ದಯವಿಟ್ಟು ಅಂತಹ ವೀಡಿಯೊಗಳನ್ನು ಆಧರಿಸಿ ಸಂದರ್ಭಗಳನ್ನು ತಪ್ಪಾಗಿ ಅರ್ಥೈಸುವ ಮೂಲಕ ಇತರರಿಗೆ ತೊಂದರೆ ಉಂಟುಮಾಡಬೇಡಿ” ಎಂದು ಅವರು ಮನವಿ ಮಾಡಿದರು.
ಆಗಿದ್ದೇನು?
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀಲೀಲಾ ವೇದಿಕೆ ಮೇಲೆ ನಿಂತಿದ್ದರು. ನಟ ಪವನ್ ಕಲ್ಯಾಣ್, ನಿರ್ದೇಶಕ ಹರೀಶ್ ಶಂಕರ್ ಸೇರಿದಂತೆ ಹಲವರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ನಟಿ ಶ್ರೀಲೀಲಾ ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ರತ್ತ ತಿರುಗಿ ನೋಡಿದ್ದರು.
ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ತರಹೇವಾರಿ ಹೆಡ್ ಲೈನ್ ಗಳನ್ನು ನೀಡಿ ವ್ಯಾಪಕ ವೈರಲ್ ಮಾಡಲಾಗುತ್ತಿತ್ತು. ನಟಿ ಶ್ರೀಲೀಲಾರನ್ನು ನಟ ಮಹೇಶ್ ಮುಟ್ಟಿದ್ದು ಇದರಿಂದ ಆಕೆ ಕೋಪದಿಂದ ನೋಡಿದ್ದಾರೆ ಎಂದು ಕಮೆಂಟ್ ಮಾಡಲಾಗುತ್ತಿತ್ತು.
