Home ಕರ್ನಾಟಕ ಇನ್ಸ್ಟಾಗ್ರಾಮ್ ರೀಲ್ ಮಾಡಲು ಪೊಲೀಸ್ ಬ್ಯಾರಿಕೇಡ್ ಗೆ ಬೆಂಕಿ: ವಿಡಿಯೊ ವೈರಲ್ ಆದ ಬೆನ್ನಲ್ಲೇ ಓರ್ವನ...

ಇನ್ಸ್ಟಾಗ್ರಾಮ್ ರೀಲ್ ಮಾಡಲು ಪೊಲೀಸ್ ಬ್ಯಾರಿಕೇಡ್ ಗೆ ಬೆಂಕಿ: ವಿಡಿಯೊ ವೈರಲ್ ಆದ ಬೆನ್ನಲ್ಲೇ ಓರ್ವನ ಬಂಧನ

18
0

ಹೊಸ ದಿಲ್ಲಿ: ಇನ್ಸ್ಟಾಗ್ರಾಮ್ ರೀಲ್ ಮಾಡಲು ಕೆಲ ಯುವಕರು ದಿಲ್ಲಿ ಪೊಲೀಸರ ಬ್ಯಾರಿಕೇಡ್ ಗೆ ಬೆಂಕಿ ಹಚ್ಚಿದ್ದು, ಈ ವಿಡಿಯೊ ವೈರಲ್ ಆದ ಬೆನ್ನಿಗೇ ದಿಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಈ ಸಂಬಂಧ ನಿಹಾಲ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇದರ ಬೆನ್ನಿಗೇ ಆ ವಿಡಿಯೊದಲ್ಲಿ ಕಂಡು ಬಂದಿದ್ದ ಯುವಕನೊಬ್ಬನನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಯುವಕನೊಬ್ಬ ಇನ್ಸ್ಟಾಗ್ರಾಮ್ ರೀಲ್ ಮಾಡಲು ದಿಲ್ಲಿ ಪೊಲೀಸರ ಬ್ಯಾರಿಕೇಡ್ ಗೆ ಬೆಂಕಿ ಹಚ್ಚುತ್ತಿರುವುದನ್ನು ಕಂಡುಬಂದಿದೆ.

ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿತರರನ್ನು ದಸ್ತಗಿರಿ ಮಾಡಲು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

देखिए रील बनने की चाहत मे,सड़क पर सुरक्षा के लिए लगे हुए,दिल्ली पुलिस के बेरिकेट को ही जला दिया,जिसके बाद वीडियो वायरल हुआ #वायरलवीडियो @DelhiPolice @CPDelhi https://t.co/OGx4du4whT pic.twitter.com/dDybS4igQn

— Lavely Bakshi (@lavelybakshi) March 29, 2024

LEAVE A REPLY

Please enter your comment!
Please enter your name here