Home Uncategorized ಇಸ್ರೇಲ್-ಹಮಾಸ್ ಯುದ್ಧ: ದೂರವಾಣಿ ಕರೆ ಮೂಲಕ ನಿಮ್ಮೊಂದಿಗೆ ಭಾರತವಿದೆ ಎಂದ ಪ್ರಧಾನಿ

ಇಸ್ರೇಲ್-ಹಮಾಸ್ ಯುದ್ಧ: ದೂರವಾಣಿ ಕರೆ ಮೂಲಕ ನಿಮ್ಮೊಂದಿಗೆ ಭಾರತವಿದೆ ಎಂದ ಪ್ರಧಾನಿ

14
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಇಸ್ರೇಲ್ (Israel) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರಿಗೆ ಕರೆ ಮಾಡಿದ್ದು, ಇಸ್ರೇಲ್ ಮತ್ತು ಹಮಾಸ್ (Hamas Militants) ನಡುವಿನ ಸಂಘರ್ಷದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ್ದು, ಇಲ್ಲಿಯವರೆಗೆ 1,600ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಕಷ್ಟದ ಸಮಯದಲ್ಲಿ ಭಾರತ ಇಸ್ರೇಲ್‌ನೊಂದಿಗೆ ನಿಂತಿದೆ ಎಂದು ಪ್ರಧಾನಿ ಮೋದಿ ನೆತನ್ಯಾಹು ಅವರಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಭಾರತ ಎಲ್ಲಾ ರೀತಿಯ ಭಯೋತ್ಪಾದನೆಯನ್ನು (Terrorism) ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.

Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್‌ ಅಪೆ ಡೇಟ್:‌ ಏನಂತೀರಾ?!

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ (X) ನೆತನ್ಯಾಹು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ದೂರವಾಣಿ ಕರೆ (Phone Call) ಮಾಡಿದ್ದಕ್ಕಾಗಿ ಮತ್ತು ಅಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಕುರಿತು ಅಪ್ಡೇಟ್ ಒದಗಿಸಿದ್ದಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್‌ನೊಂದಿಗೆ ದೃಢವಾಗಿ ನಿಂತಿದ್ದಾರೆ. ಭಾರತವು ಭಯೋತ್ಪಾದನೆಯನ್ನು ಬಲವಾಗಿ ಮತ್ತು ಸಂದಿಗ್ಧವಾಗಿ ಖಂಡಿಸುತ್ತದೆ ಎಂದು ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

The post ಇಸ್ರೇಲ್-ಹಮಾಸ್ ಯುದ್ಧ: ದೂರವಾಣಿ ಕರೆ ಮೂಲಕ ನಿಮ್ಮೊಂದಿಗೆ ಭಾರತವಿದೆ ಎಂದ ಪ್ರಧಾನಿ appeared first on Ain Live News.

LEAVE A REPLY

Please enter your comment!
Please enter your name here