Home Uncategorized ಈ ದೇಶಗಳಲ್ಲಿ ಕೆಲಸದ ಅವಧಿ ಮುಕ್ತಾಯಗೊಂಡ ನಂತರ ಕಂಪನಿಗಳು ಸಿಬ್ಬಂದಿಗೆ ತೊಂದರೆ ನೀಡುವಂತಿಲ್ಲ…

ಈ ದೇಶಗಳಲ್ಲಿ ಕೆಲಸದ ಅವಧಿ ಮುಕ್ತಾಯಗೊಂಡ ನಂತರ ಕಂಪನಿಗಳು ಸಿಬ್ಬಂದಿಗೆ ತೊಂದರೆ ನೀಡುವಂತಿಲ್ಲ…

22
0

ಹೊಸ ದಿಲ್ಲಿ: ಹಲವಾರು ಯೂರೋಪಿಯನ್ ದೇಶಗಳು ಉದ್ಯೋಗಿಗಳಿಗೆ ಕೆಲಸದ ಅವಧಿ ಮುಕ್ತಾಯಗೊಂಡ ನಂತರ ಕರ್ತವ್ಯದಿಂದ ಬಿಡುಗಡೆ ಹೊಂದುವ ಹಕ್ಕನ್ನು ನೀಡಿರುವ ನಂತರ, ಆಸ್ಟ್ರೇಲಿಯಾ ಕೂಡಾ ಈ ದರ್ಜೆಗೆ ಸೇರ್ಪಡೆಯಾಗುತ್ತಿದೆ. ಉದಾತ್ತ ಔದ್ಯಮಿಕ ಸಂಬಂದಗಳ ಮಸೂದೆಯ ಭಾಗವಾಗಿ ಸರ್ಕಾರವು ಮಂಡಿಸಲಿರುವ ಪ್ರಸ್ತಾವಿತ ಶಾಸನವು ಈ ವಾರದೊಳಗೆ ಅಂಗೀಕಾರಗೊಳ್ಳುವ ಸಾಧ್ಯತೆ ಇದೆ. ಆ ಮೂಲಕ ಕೆಲಸ ನಿರ್ವಹಣೆಯ ತಾಣದಲ್ಲಿ ಮಹತ್ವದ ಬದಲಾವಣೆಯಾಗುವ ಸಂಭವವಿದೆ ಎಂದು ndtv.com ವರದಿ ಮಾಡಿದೆ.

ಪ್ರಸ್ತಾವಿತ ತಿದ್ದುಪಡಿಯ ಪ್ರಕಾರ, ಉದ್ಯೋಗಿಗಳು ತಮ್ಮ ಕರ್ತವ್ಯದ ಅವಧಿ ಮುಕ್ತಾಯಗೊಂಡ ನಂತರ ಉದ್ಯೋಗದಾತರ ಸಂಪರ್ಕಗಳಿಗೆ ಪ್ರತಿಕ್ರಿಯಿಸದಿರುವ, ಮೇಲುಸ್ತುವಾರಿ ನಿರಾಕರಣೆ ಮಾಡುವ ಅಥವಾ ಓದಲು ನಿರಾಕರಿಸುವ ಹಕ್ಕು ಗಳಿಸಲಿದ್ದಾರೆ. ಆದರೆ, ಅಂತಹ ನಿರಾಕರಣೆಗಳು ಅಕಾರಣ ಎಂದು ಪರಿಗಣಿತವಾಗದಿದ್ದರೆ ಮಾತ್ರ. ಉದ್ಯೋಗಾವಧಿಯ ನಂತರದ ಸಂಪರ್ಕಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಆಸ್ಟ್ರೇಲಿಯಾದ ನ್ಯಾಯಯುತ ಉದ್ಯೋಗ ಆಯೋಗದ ಮೊರೆ ಹೋಗಬಹುದಾಗಿದೆ.

ಇಂತಹುದೇ ಕ್ರಮಗಳು ಯೂರೋಪಿಯನ್ ದೇಶಗಳಾದ ಫ್ರಾನ್ಸ್, ಸ್ಪೇನ್, ಬೆಲ್ಜಿಯಂ, ಐರ್ಲೆಂಡ್, ಪೋರ್ಚುಗಲ್ ದೇಶಗಳಲ್ಲಿ ಅದಾಗಲೇ ಅಸ್ತಿತ್ವದಲ್ಲಿವೆ. ಅಮೆರಿಕಾ ಮತ್ತು ಭಾರತದಲ್ಲೂ ಈ ಕುರಿತು ಚರ್ಚೆಗಳು ನಡೆಯುತ್ತಿದ್ದರೂ, ಅವಿನ್ನೂ ಕಾವು ಪಡೆದುಕೊಂಡಿಲ್ಲ.

LEAVE A REPLY

Please enter your comment!
Please enter your name here