Home Uncategorized ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

43
0

ಕಾರ್ಕಳ, ಡಿ.23: ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಕಾರ್ಕಳ ಇಲ್ಲಿ ಸಿಸ್ಕೊ ಐಟಿ ಎಸೆನ್ಸಿಯಲ್ ಟ್ಯಾಲಿ/ಅಕೌಂಟ್ಸ್ ಎಕ್ಸಿಕ್ಯೂಟಿವ್, ಮಾಸ್ಟರ್ ಸಿಎಎಂ, ಸಿಎನ್‌ಸಿ ಪ್ರೋಗ್ರಾಮಿಂಗ್ ಆ್ಯಂಡ್ ಓಪರೇಷನ್ ಮಿಲ್ಲಂಗ್, ಸಿಎನ್‌ಸಿ ಪ್ರೋಗ್ರಾಮಿಂಗ್ ಆ್ಯಂಡ್ ಓಪರೇಷನ್-ಟರ್ನಿಂಗ್, ಸಿಎನ್‌ಸಿ ಪ್ರೋಗ್ರಾಮಿಂಗ ಆ್ಯಂಡ್ ಓಪರೇಷನ್ ಮೆಷಿನಿಸ್ಟ್ ಮತ್ತು ಇಸಿಎನ್‌ಎ ಕೋರ್ಸುಗಳಲ್ಲಿ ಎರಡರಿಂದ ಮೂರು ತಿಂಗಳ ಅವಧಿಯ (ದಿನಕ್ಕೆ ಕನಿಷ್ಠ 2ರಿಂದ 3ಗಂಟೆ) ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳು ಉದ್ಯೋಗಾಧಾರಿತ ಉಚಿತ ಕೌಶಲ್ಯ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಕಳದ ಕಾಬೆಟ್ಟುವಿನಲ್ಲಿರುವ ಸರಕಾರ ಪಾಲಿಟೆಕ್ನಿಕ್ ಸಂಸ್ಥೆಯ ಆವರಣದಲ್ಲಿರುವ ಕೆಜಿಟಿಟಿಐ ಸಂಸ್ಥೆಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು (ದೂರವಾಣಿ: 0828-200451, 8277741731) ಎಂದು ಕಾರ್ಕಳ ಕೆಜಿಟಿಟಿಐ ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here