Home Uncategorized ಉಡುಪಿ: ಅರಿಶಿನಗುಂಡಿ ಫಾಲ್ಸ್ ನಲ್ಲಿ ಕೊಚ್ಚಿ ಹೋಗಿದ್ದ ಶರತ್ ಮೃತದೇಹ ಪತ್ತೆ

ಉಡುಪಿ: ಅರಿಶಿನಗುಂಡಿ ಫಾಲ್ಸ್ ನಲ್ಲಿ ಕೊಚ್ಚಿ ಹೋಗಿದ್ದ ಶರತ್ ಮೃತದೇಹ ಪತ್ತೆ

45
0

ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಬಂದಾಗ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು, ಕೊಚ್ಚಿ ಹೋಗಿದ್ದ ಯುವಕ ಶರತ್ (23) ಮೃತದೇಹ ಪತ್ತೆಯಾಗಿದೆ. ಸತತ ಒಂದು ವಾರಗಳ ನಿರಂತರ ಶೋಧ ಕಾರ್ಯದ ಬಳಿಕ ಇಂದು ಮೃತದೇಹ ಪತ್ತೆಯಾಗಿದೆ. ಉಡುಪಿ: ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಗೆ ಬಂದಾಗ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು, ಕೊಚ್ಚಿ ಹೋಗಿದ್ದ ಯುವಕ ಶರತ್ (23) ಮೃತದೇಹ ಪತ್ತೆಯಾಗಿದೆ. ಸತತ ಒಂದು ವಾರಗಳ ನಿರಂತರ ಶೋಧ ಕಾರ್ಯದ ಬಳಿಕ ಇಂದು ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಉಡುಪಿ: ರೀಲ್ಸ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು; ಜಲಪಾತದಲ್ಲಿ ಜಾರಿಬಿದ್ದು ಯುವಕ ಸಾವು! ವಿಡಿಯೋ ವೈರಲ್

ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತದ ಬಳಿ ಸ್ನೇಹಿತನೊಂದಿಗೆ ರೀಲ್ಸ್ ಮಾಡಲು ಹೋಗಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಯುವಕ ಶರತ್ ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. 

#shivamogga ಜಿಲ್ಲೆಯ 23 ವರ್ಷದ ಶರತ್ ಕುಮಾರ್ ಅವರು ಸೋಮವಾರ ಉಡುಪಿ ಜಿಲ್ಲೆಯ ಅರಸಿನಗುಂಡಿ ಜಲಪಾತದ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ವಿಡಿಯೋ ಚಿತ್ರೀಕರಣ ಮಾಡುವಾಗ ಕಾಲು ಜಾರಿ ಬಿದ್ದಿದ್ದಾರೆ. ರಕ್ಷಣಾ ತಂಡ ಮತ್ತು ಪೊಲೀಸ್ ತಂಡ ಆತನ ಪತ್ತೆಗೆ ಪ್ರಯತ್ನ ನಡೆಸುತ್ತಿದೆ. @XpressBengaluru #Karnataka #KarnatakaRainspic.twitter.com/AtyufEPkOV
— kannadaprabha (@KannadaPrabha) July 24, 2023

ಆದರೆ ಧಾರಾಕಾರ ಮಳೆ, ಧುಮ್ಮುಕ್ಕಿ ಹರಿಯುವ ಜಲಪಾತದ ಅಬ್ಬರದಿಂದ ಯುವಕ ಪತ್ತೆ ಆಗಿರಲಿಲ್ಲ. ಆದರೂ. ಮುಳುಗು ತಜ್ಞರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಳೆದ ಒಂದು ವಾರದಿಂದ ಹಗಲು ರಾತ್ರಿ ಎನ್ನದೇ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಇಂದು ಯುವಕನ ಮೃತದೇಹ ಪತ್ತೆಯಾಗಿದ್ದು, ಜಲಾಶಯದ 200 ಮೀಟರ್ ಕೆಳಗಡೆ ಬಂಡೆ ಕಲ್ಲಿನ ಒಳಗೆ ಸಿಲಿಕಿತ್ತು ಎನ್ನಲಾಗಿದೆ. 

LEAVE A REPLY

Please enter your comment!
Please enter your name here